ಪಾಕಿಸ್ತಾನ : ಭಾರತ ನಮ್ಮ ಶತ್ರು ನಂಬರ್ 1 ಎಂಬ ಹೇಳಿಕೆ ಮೂಲಕ ವೈರಲ್ ಆಗಿದ್ದ ಪಾಕಿಸ್ತಾನ ಸೇನೆಯ ಮಾಜಿ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ನಿಧನರಾಗಿದ್ದಾಗಿ ವರದಿಯಾಗಿದೆ. ಮಾಹಿತಿಯ ಪ್ರಕಾರ, ಶೌಚಾಯಲಕ್ಕೆ ತೆರಳಿದ್ದ ಸಮಯದಲ್ಲಿ ಆಯತಪ್ಪಿ ಬಾಜ್ವಾ ನೆಲಕ್ಕೆ ಬಿದಿದ್ದು, ತೀವ್ರವಾಗಿ ಗಾಯಗೊಂಡಿದ್ದು, ರಾವಲ್ಪಿಂಡಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆ ಮಾಜಿ ಸೇನಾ ಮುಖ್ಯಸ್ಥ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.
ಶೌಚಾಲಯದಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಕಮರ್ ಬಾಜ್ವಾ ಅವರನ್ನು ಕುಟುಂಬ ವರ್ಗ ಕೂಡಲೇ ರಾವಲ್ಪಿಂಡಿಯ ಆಸ್ಪತ್ರೆಗೆ ದಾಖಲಿಸಿತ್ತು. ಬಾಜ್ವಾ ಅವರ ಸ್ಥಿತಿಯನ್ನು ಗಮನಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯವೆಂದು ಹೇಳಿ, ಆಪರೇಷನನ್ನು ಮಾಡಿದ್ದಾರೆ. ಆದರೆ ಆಪರೇಷನ್ ನಂತರ ಬಾಜ್ವಾ ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದು, ಕೊನೆಗೆ ಅವರ ಸಾವು ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತ ನಮ್ಮ ಶತ್ರು ನಂ.1
2016 ರಿಂದ 2022 ರ ವರೆಗೆ ಪಾಕಿಸ್ತಾನ ಮಿಲಿಟರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಜನರಲ್ ಬಾಜ್ವಾ, ಭಾರತ ನಮ್ಮ ಶತ್ರು ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆ ದೇಶವನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂಬ ಹೇಳಿಕೆಯನ್ನು ಬಾಜ್ವಾ ನೀಡಿದ್ದರು.