ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ವಿಶ್ವವಿದ್ಯಾಲಯಗಳನ್ನು ಧ್ವಂಸ ಮಾಡಲಾಗುವುದು ಎಂದು ಇರಾನ್ ಎಚ್ಚರಿಕೆ ಕೊಟ್ಟಿದೆ. ಅಮೆರಿಕ- ಇಸ್ರೇಲ್ ದಾಳಿಯಿಂದಾಗಿ, ಇರಾನಿನ 2 ವಿಶ್ವವಿದ್ಯಾಲಯಗಳು ನಾಶವಾಗಿವೆ. ಅಮೆರಿಕ ತನ್ನ ವಿಶ್ವವಿದ್ಯಾಲಯಗಳನ್ನು ರಕ್ಷಿಸಬೇಕೆಂದಿದ್ದರೆ, ಇರಾನ್ ವಿಶ್ವವಿದ್ಯಾಲಯದ ಮೇಲಿನ ಬಾಂಬ್ ದಾಳಿಯನ್ನು ಅಧಿಕೃತವಾಗಿ ಖಂಡಿಸಬೇಕು. ಇದಕ್ಕಾಗಿ ಡೆಡ್ಲೈನ್ ಕೊಟ್ಟಿರುವ ಇರಾನ್, ಮಾರ್ಚ್ 30 ಸೋಮವಾರ ಟೆಹ್ರಾನ್ ಸಮಯ ಮಧ್ಯಾಹ್ನ 12 ರೊಳಗೆ ಅಧಿಕೃತವಾಗಿ ಖಂಡಿಸಬೇಕು. ಇಲ್ಲವಾದಲ್ಲಿ ಅಮೆರಿಕದ ಯೂನಿವರ್ಸಿಟಿ ಮೇಲೆಯೂ ದಾಳಿ ಮಾಡುವ ಎಚ್ಚರಿಕೆಯನ್ನು ಕೊಟ್ಟಿದೆ. ಇರಾನ್ ಮಾಧ್ಯಮಗಳ ವರದಿ ಪ್ರಕಾರ, ಇರಾನಿನ ರೆವೆಲ್ಯೂಷನರಿ ಗಾರ್ಡ್ ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಕದನ ವಿರಾಮ ಚಾಲ್ತಿಯಲ್ಲಿದ್ದರೂ, ಒಂದೆಡೆ ಅಮೆರಿಕವೂ ಮಧ್ಯಪ್ರಾಚ್ಯದಲ್ಲಿ, ಹಾರ್ಮುಜ್ ಬಳಿ ಸೇನೆಯನ್ನು ಹೆಚ್ಚಿಸಿಕೊಳ್ಳಿತ್ತಿದೆ. ಇನ್ನೊಂದೆಡೆ ಇರಾನ್ ಪ್ರತಿದಾಳಿ ಮಾಡುವ ಎಚ್ಚರಿಕೆಯನ್ನು ನೀಡಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ, ನೌಕಾಪಡೆಗಳನ್ನು ಹೆಚ್ಚಿಸುತ್ತಿದೆ. ಸುಮಾರು 3500 ನಾವಿಕರು ಮತ್ತು ನೌಕಾಪಡೆಗಳನ್ನು ಹೊತ್ತ ನೌಕಾಪಡೆಯ ಹಡಗು ಈ ಪ್ರದೇಶಕ್ಕೆ ಆಗಮಿಸುತ್ತಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಪ್ರಕಟಿಸಿದೆ.