image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸುಮಾರು 13 ಪ್ರಮುಖ ಮಿಲಿಟರಿ ನೆಲೆಗಳು ಈಗ ವಾಸಿಸಲು ಯೋಗ್ಯವಲ್ಲ!

ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸುಮಾರು 13 ಪ್ರಮುಖ ಮಿಲಿಟರಿ ನೆಲೆಗಳು ಈಗ ವಾಸಿಸಲು ಯೋಗ್ಯವಲ್ಲ!

ವಾಷಿಂಗ್ಟನ್ : ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಜ್ವಾಲೆ ಈಗ ನಿಯಂತ್ರಣ ಮೀರಿ ಹರಡುತ್ತಿದೆ. ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತಿಯಾಗಿ ಇರಾನ್ ನಡೆಸಿರುವ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಅಮೆರಿಕದ ಹೆಮ್ಮೆಯ ಸೇನಾ ನೆಲೆಗಳನ್ನು ಸ್ಮಶಾನ ಸದೃಶವಾಗಿಸಿವೆ. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸುಮಾರು 13 ಪ್ರಮುಖ ಮಿಲಿಟರಿ ನೆಲೆಗಳು ಈಗ ವಾಸಿಸಲು ಯೋಗ್ಯವಲ್ಲ ಎಂಬಷ್ಟು ಹಾನಿಗೀಡಾಗಿವೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಖಮೇನಿ ಹತರಾದಾಗ, ಇರಾನ್ ಇಷ್ಟು ದೊಡ್ಡ ಮಟ್ಟದ ಪ್ರತಿಘಾತ ನೀಡಬಹುದು ಎಂದು ವಾಷಿಂಗ್ಟನ್ ಊಹಿಸಿರಲಿಲ್ಲ. ಆದರೆ, ಇರಾನ್ ತನ್ನ ಅತ್ಯಾಧುನಿಕ ಹೈ-ಪ್ರಿಸಿಶನ್ ಕ್ಷಿಪಣಿಗಳು ಮತ್ತು ಕಾಮಿಕೇಜ್ ಡ್ರೋನ್‌ಗಳ ಮೂಲಕ ಅಮೆರಿಕದ ಮಿಲಿಟರಿ ಮತ್ತು ಇಂಧನ ಕೇಂದ್ರಗಳ ಮೇಲೆ ಅಕ್ಷರಶಃ ಬೆಂಕಿ ಮಳೆ ಸುರಿಸಿದೆ. ಈ ದಾಳಿಯ ತೀವ್ರತೆಗೆ ಅಮೆರಿಕದ ರಕ್ಷಣಾ ವ್ಯವಸ್ಥೆಗಳಾದ ಪೇಟ್ರಿಯಾಟ್ ಕೂಡ ಮಂಡಿಯೂರಿವೆ ಎಂದು ವರದಿಗಳು ತಿಳಿಸಿವೆ.

ಇರಾನ್​ನ ದಾಳಿಯ ಭೀಕರತೆ ಎಷ್ಟಿತ್ತೆಂದರೆ, ಸುಸಜ್ಜಿತವಾಗಿದ್ದ ಅಮೆರಿಕದ ಸೇನಾ ಬ್ಯಾರಕ್‌ಗಳು ಈಗ ಅವಶೇಷಗಳ ರಾಶಿಯಾಗಿವೆ. ಇದರಿಂದಾಗಿ ಸಾವಿರಾರು ಅಮೆರಿಕನ್ ಸೈನಿಕರನ್ನು ಧ್ವಂಸಗೊಂಡ ನೆಲೆಗಳಿಂದ ಸ್ಥಳಾಂತರಿಸಲಾಗಿದ್ದು, ಅವರನ್ನು ಹತ್ತಿರದ ಹೋಟೆಲ್‌ಗಳು ಮತ್ತು ತಾತ್ಕಾಲಿಕ ಕಚೇರಿ ಕಟ್ಟಡಗಳಲ್ಲಿ ಇರಿಸಲಾಗಿದೆ. ಅಮೆರಿಕದ ರಕ್ಷಣಾ ಇಲಾಖೆ ಇದನ್ನು ದೀರ್ಘಾವಧಿ ಯುದ್ಧ ಎಂದು ಘೋಷಿಸಿದ್ದು, ಸೈನಿಕರ ಸುರಕ್ಷತೆ ಈಗ ದೊಡ್ಡ ಸವಾಲಾಗಿದೆ. ಅಮೆರಿಕದ ಸೇನಾ ಕಾರ್ಯಾಚರಣೆಗೆ ಬೇಕಾದ ಸಂವಹನ ವ್ಯವಸ್ಥೆ ಮತ್ತು ಏರ್‌ಫೀಲ್ಡ್ ಮೂಲಸೌಕರ್ಯಗಳು ಈಗ ಕತ್ತಲಲ್ಲಿವೆ. ತೈಲ ಪೂರೈಕೆ ಮಾರ್ಗಗಳು ಕಡಿತಗೊಂಡಿರುವುದರಿಂದ ಅಮೆರಿಕದ ಯುದ್ಧ ವಿಮಾನಗಳು ಮತ್ತು ಟ್ಯಾಂಕರ್‌ಗಳಿಗೆ ಇಂಧನದ ಕೊರತೆ ಎದುರಾಗಿದೆ. ಅಮೆರಿಕದ ಅಧಿಕಾರಿಗಳ ಪ್ರಕಾರ, ಕಳೆದ ಹಲವು ದಶಕಗಳಲ್ಲಿ ಯುಎಸ್ ಸೈನಿಕರು ಇಷ್ಟೊಂದು ದೊಡ್ಡ ಮಟ್ಟದ ಜೀವದ ಹಾನಿ ಮತ್ತು ಮೂಲಸೌಕರ್ಯ ನಷ್ಟವನ್ನು ಕಂಡಿರಲಿಲ್ಲ. ನೆಲೆಗಳು ನಾಶವಾಗಿರುವುದರಿಂದ ಅಮೆರಿಕದ ಪದಾತಿ ದಳ ಈಗ ಅಕ್ಷರಶಃ ದಿಕ್ಕುತಪ್ಪಿದೆ. ಅನಿವಾರ್ಯವಾಗಿ ಅಮೆರಿಕ ಈಗ ರಿಮೋಟ್ ವಾರ್‌ಫೇರ್ ಅಂದರೆ ದೂರದ ಪ್ರದೇಶಗಳಿಂದ ಅಥವಾ ಹಡಗುಗಳಿಂದ ಮಾತ್ರ ದಾಳಿ ನಡೆಸುವ ಸ್ಥಿತಿಗೆ ತಲುಪಿದೆ. ಇರಾನ್‌ನ ಈ ನಿರಂತರ ದಾಳಿಗಳು ಅಮೆರಿಕದ ಮಧ್ಯಪ್ರಾಚ್ಯದ ಪೊಲೀಸ್ ಎಂಬ ಇಮೇಜ್‌ಗೆ ದೊಡ್ಡ ಪೆಟ್ಟು ನೀಡಿವೆ.

Category
ಕರಾವಳಿ ತರಂಗಿಣಿ