image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಗಲ್ಫ್ ರಾಷ್ಟ್ರಗಳ ಕುಡಿಯುವ ನೀರಿನ ಮುಖ್ಯ ಆಧಾರವಾಗಿರುವ ಡಿಸ್ಟಿಲೇಷನ್ ಘಟಕಗಳು ಈಗ ಯುದ್ಧದ ನೇರ ಗುರಿ!

ಗಲ್ಫ್ ರಾಷ್ಟ್ರಗಳ ಕುಡಿಯುವ ನೀರಿನ ಮುಖ್ಯ ಆಧಾರವಾಗಿರುವ ಡಿಸ್ಟಿಲೇಷನ್ ಘಟಕಗಳು ಈಗ ಯುದ್ಧದ ನೇರ ಗುರಿ!

ರಿಯಾದ್ : ಜಗತ್ತು ಇಂದು ಪಶ್ಚಿಮ ಏಷ್ಯಾದ ಸಂಘರ್ಷವನ್ನು ಕೇವಲ ತೈಲ ಬೆಲೆ ಏರಿಕೆಯ ದೃಷ್ಟಿಯಿಂದ ನೋಡುತ್ತಿದೆ. ಆದರೆ, ತೆರೆಮರೆಯಲ್ಲಿ ಇಡೀ ಗಲ್ಫ್ ರಾಷ್ಟ್ರಗಳ ಜೀವನಾಡಿಯನ್ನೇ ಕತ್ತರಿಸುವಂತಹ ಭೀಕರ ಸಂಚಲನವೊಂದು ಶುರುವಾಗಿದೆ. ಅದು ತೈಲದ ಬಿಕ್ಕಟ್ಟಲ್ಲ, ಬದಲಾಗಿ ನೀರಿನ ಬಿಕ್ಕಟ್ಟು. ಇರಾನ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಗಲ್ಫ್ ರಾಷ್ಟ್ರಗಳ ಕುಡಿಯುವ ನೀರಿನ ಮುಖ್ಯ ಆಧಾರವಾಗಿರುವ ಲವಣಮುಕ್ತಗೊಳಿಸುವ ಘಟಕಗಳು ಈಗ ಯುದ್ಧದ ನೇರ ಗುರಿಯಾಗಿವೆ. ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಕುವೈತ್‌ನಂತಹ ರಾಷ್ಟ್ರಗಳು ನೈಸರ್ಗಿಕ ಸಿಹಿನೀರಿನ ಮೂಲಗಳನ್ನು ಹೊಂದಿಲ್ಲ. ಇವು ಕೇವಲ ಮರಳುಗಾಡಿನ ದೇಶಗಳಲ್ಲ, ಇವು ಉಪ್ಪುನೀರಿನ ಸಾಮ್ರಾಜ್ಯಗಳು. ಇಲ್ಲಿನ ಸುಮಾರು 6.2 ಕೋಟಿ ಜನಸಂಖ್ಯೆ ಬದುಕಿರುವುದು ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಬೃಹತ್ ಯಂತ್ರಾಗಾರಗಳಿಂದಾಗಿ ಬದುಕುಳಿದಿವೆ. ಈ ದೇಶಗಳಲ್ಲಿ ಒಂದು ದಿನ ತೈಲ ಸರಬರಾಜು ನಿಂತರೆ ಆರ್ಥಿಕತೆಗೆ ಹೊಡೆತ ಬೀಳಬಹುದು, ಆದರೆ ಒಂದು ದಿನ ನೀರಿನ ಘಟಕಗಳು ನಿಂತರೆ ಅದು ನೇರ ಮಾನವೀಯ ದುರಂತಕ್ಕೆ ದಾರಿಯಾಗುತ್ತದೆ. ತೈಲ ಟ್ಯಾಂಕರ್‌ಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಬಹುದು, ಆದರೆ ಬಾಂಬ್ ದಾಳಿಗೆ ಒಳಗಾದ ಡಿಸಲಿನೇಷನ್ ಪ್ಲಾಂಟ್‌ಗಳನ್ನು ಒಂದೇ ದಿನದಲ್ಲಿ ಸರಿಪಡಿಸಲು ಸಾಧ್ಯವಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ