image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ತಮ್ಮ ಸ್ವಂತ ಚಿನ್ನಾಭರಣಗಳನ್ನು ನೀಡುವ ಮೂಲಕ ಇರಾನ್ ಜೊತೆ ನಿಂತ ಕಾಶ್ಮೀರಿಗಳು!

ತಮ್ಮ ಸ್ವಂತ ಚಿನ್ನಾಭರಣಗಳನ್ನು ನೀಡುವ ಮೂಲಕ ಇರಾನ್ ಜೊತೆ ನಿಂತ ಕಾಶ್ಮೀರಿಗಳು!

ನವದೆಹಲಿ : ಸೌದಿ ಆದಿಯಾಗಿ ಅನೇಕ ಇಸ್ಲಾಮಿಕ್ ಯುದ್ದಗ್ರಸ್ತ ಇರಾನ್ ನೆರವಿಗೆ ಧಾವಿಸದೇ ಅಂತರ ಕಾಯ್ದುಕೊಂಡಿದ್ದರೂ ಭಾರತ ಸರ್ಕಾರವೇ ತಟಸ್ಥ ನಿಲುವು ಹೊಂದಿದ್ದರೂ ಸಹ ಕಾಶ್ಮೀರಿಗಳು ಇರಾನ್ ನೆರವಿಗೆ ಧಾವಿಸುತ್ತಿದ್ದಾರೆ. ತಮ್ಮ ಸ್ವಂತ ಚಿನ್ನಾಭರಣಗಳನ್ನು ನೀಡುವ ಮೂಲಕ ಕಾಶ್ಮೀರಿಗಳು ಇರಾನ್ ಜೊತೆ ನಿಂತಿದ್ದಾರೆ. ಈ ನೆರವಿನ ಬಗ್ಗೆ ಇರಾನ್ ಪ್ರತಿಕ್ರಿಯೆ ನೀಡಿದ್ದು, ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಎಕ್ಸ್ ನಲ್ಲಿ ಥ್ಯಾಂಕ್ಯೂ ಇಂಡಿಯಾ (ಧನ್ಯವಾದಗಳು ಭಾರತ) ಎಂದು ಬರೆದಿದೆ. "ಕೃತಜ್ಞತೆಯಿಂದ ತುಂಬಿದ ಹೃದಯಗಳಿಂದ, ಮಾನವೀಯ ಬೆಂಬಲ ಮತ್ತು ಹೃತ್ಪೂರ್ವಕ ಒಗ್ಗಟ್ಟಿನ ಮೂಲಕ ಇರಾನ್ ಜನರೊಂದಿಗೆ ನಿಂತಿದ್ದಕ್ಕಾಗಿ ಕಾಶ್ಮೀರದ ದಯಾಳು ಜನರಿಗೆ ನಾವು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇವೆ" ಎಂದು ಪೋಸ್ಟ್‌ನಲ್ಲಿ ಇರಾನಿನ ಮಿಷನ್ ಬರೆದಿದೆ. "ಈ ದಯೆಯನ್ನು ಎಂದಿಗೂ ಮರೆಯಲಾಗುವುದಿಲ್ಲ" ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. ಪೋಸ್ಟ್‌ನಲ್ಲಿರುವ ಒಂದು ವೀಡಿಯೊದಲ್ಲಿ "ಯುಎಸ್‌ಎ ಮತ್ತು ಇಸ್ರೇಲ್ ವಿರುದ್ಧ ಹೋರಾಡುವುದು ಬಾಧ್ಯತೆ" ಎಂಬ ಶೀರ್ಷಿಕೆ ಇತ್ತು ಎಂದು ಅಂತರಾಷ್ಟ್ರೀಯ ಮಾಧ್ಯಮ ವರದಿ ಹೇಳಿದೆ.

Category
ಕರಾವಳಿ ತರಂಗಿಣಿ