image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

'ಇರಾನ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಹಾಗೂ ಅಮೆರಿಕ ಗೆಲ್ಲುತ್ತಿದ್ದು, ಇಸ್ಲಾಮಿಕ್ ಗಣರಾಜ್ಯವು ನಾಶವಾಗುತ್ತಿದೆ' : ಇಸ್ರೇಲ್ ಪ್ರಧಾನಿ ನೇತನ್ಯಾಹು

'ಇರಾನ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಹಾಗೂ ಅಮೆರಿಕ ಗೆಲ್ಲುತ್ತಿದ್ದು, ಇಸ್ಲಾಮಿಕ್ ಗಣರಾಜ್ಯವು ನಾಶವಾಗುತ್ತಿದೆ' : ಇಸ್ರೇಲ್ ಪ್ರಧಾನಿ ನೇತನ್ಯಾಹು

ಜೆರುಸಲೇಂ : 'ಇರಾನ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಹಾಗೂ ಅಮೆರಿಕ ಗೆಲ್ಲುತ್ತಿದ್ದು, ಇಸ್ಲಾಮಿಕ್ ಗಣರಾಜ್ಯವು ನಾಶವಾಗುತ್ತಿದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. 'ಯುದ್ಧದಲ್ಲಿ ನಾವು ಜಯ ಸಾಧಿಸುತ್ತಿದ್ದೇವೆ. ಇರಾನ್ ನಾಶವಾಗುತ್ತಿದೆ. ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ಸಾಮರ್ಥ್ಯವನ್ನು ನಾಶಪಪಡಿಸಲಾಗುತ್ತಿದೆ. ನಾವು ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದೇವೆ. ಪರಮಾಣು ಮೂಲಸೌಕರ್ಯಗಳನ್ನು ನಾಶಪಡಿಸಿದ್ದೇವೆ. ಇರಾನ್‌ನ ವಾಯು ವ್ಯವಸ್ಥೆ ನಿಷ್ಪ್ರಯೋಜಕವಾಗಿವೆ. ಇರಾನ್‌ನ ನೌಕಾಪಡೆಗೆ ಹಿನ್ನಡೆಯಾಗಿದೆ. ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ. ನಾವದನ್ನು ಮಾಡುತ್ತಿದ್ದೇವೆ' ಎಂದಿದ್ದಾರೆ.

'ಇರಾನ್ ಇನ್ನು ಮುಂದೆ ಯುರೇನಿಯಂ ಉತ್ಕೃಷ್ಟಗೊಳಿಸುವ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ತಯಾರಿಸುವ ಸಾಮರ್ಥ್ಯವನ್ನು ಹೊಂದಿಲ್ಲ' ಎಂದು ಅವರು ಹೇಳಿದ್ದಾರೆ. 'ಹೊರ್ಮುಜ್ ಜಲಸಂಧಿಯನ್ನು ಮುಕ್ತವಾಗಿಸಲು ಅಮೆರಿಕ ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡುತ್ತಿದೆ. ಅದು ಯಶಸ್ವಿಯಾದರೆ ತೈಲ ಬೆಲೆಗಳು ಇಳಿಕೆಯಾಗಲಿವೆ' ಎಂದೂ ಹೇಳಿದ್ದಾರೆ. 'ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವರಿಕೆ ಮಾಡುವ ಅಗತ್ಯವಿರಲಿಲ್ಲ. ಟ್ರಂಪ್ ಅವರಂತೆ ಸಮನ್ವಯದಿಂದ ವರ್ತಿಸಿದ ಇನ್ನೊಬ್ಬ ನಾಯಕ ಇಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಅವರ ಮಿತ್ರ' ಎಂದಿದ್ದಾರೆ.

Category
ಕರಾವಳಿ ತರಂಗಿಣಿ