image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

'ಡ್ಯಾನ್ಸಿಂಗ್‌ ಮಿಸೈಲ್' ಎಂದು ಕರೆಯಲಾಗುವ ಅತ್ಯಾಧುನಿಕ ಸೆಜ್ಜಿಲ್ ಕ್ಷಿಪಣಿಗಳ ಮೂಲಕ ಇಸ್ರೇಲ್ ಮೇಲೆ ಇರಾನ್ ದಾಳಿ!

'ಡ್ಯಾನ್ಸಿಂಗ್‌ ಮಿಸೈಲ್' ಎಂದು ಕರೆಯಲಾಗುವ ಅತ್ಯಾಧುನಿಕ ಸೆಜ್ಜಿಲ್ ಕ್ಷಿಪಣಿಗಳ ಮೂಲಕ ಇಸ್ರೇಲ್ ಮೇಲೆ ಇರಾನ್ ದಾಳಿ!

ಟೆಹ್ರಾನ್ : 'ಡ್ಯಾನ್ಸಿಂಗ್‌ ಮಿಸೈಲ್'(ನೃತ್ಯ ಮಾಡುವ ಕ್ಷಿಪಣಿ) ಎಂದು ಕರೆಯಲಾಗುವ ಅತ್ಯಾಧುನಿಕ ಸೆಜ್ಜಿಲ್ ಕ್ಷಿಪಣಿಗಳ ಮೂಲಕ ಇರಾನ್‌ ಇದೇ ಮೊದಲ ಬಾರಿಗೆ ಇಸ್ರೇಲ್ ಮತ್ತು ಅಮೆರಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ. ಈ ಕ್ಷಿಪಣಿಗಳು 2000 ಕಿ.ಮೀ.ಗುರಿ ತಲುಪಬಲ್ಲ ಸಾಮರ್ಥ್ಯ ಹಾಗೂ 7000 ಕೇಜಿಯಷ್ಟು ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಸೆಜ್ಜಿಲ್ 2 ಹಂತದ ಘನ ಇಂಧನ ಮಧ್ಯಮ ಶ್ರೇಣಿಯ ಖಂಡಾಂತರ ಕ್ಷಿಪಣಿಯಾಗಿದೆ. ಎತ್ತರ ಕುಶಲ ಸಾಮರ್ಥ್ಯದಿಂದಾಗಿ ಇದನ್ನು ಡ್ಯಾನ್ಸಿಂಗ್ ಮಿಸೈಲ್ ಎಂದೂ ಕರೆಯಲಾಗುತ್ತದೆ. ಇದು ಐರನ್ ಡೋಮ್‌ನಂತಹ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ. ಇರಾನ್‌ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ ಗರಿಷ್ಠ ಪ್ರಮಾಣದಲ್ಲಿ ಪರಿಣಾಮ ಬೀರಬಲ್ಲದು ಎಂದು ವರದಿಯಾಗಿದೆ.

Category
ಕರಾವಳಿ ತರಂಗಿಣಿ