image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಉತ್ತರ ಕೊರಿಯಾದಿಂದ ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಸಮುದ್ರ ತೀರದ ಮೇಲೆ ಬ್ಯಾಲಿಸ್ಟಿಕ್‌ ಕ್ಷಿಪಣಿಗಳ ದಾಳಿ

ಉತ್ತರ ಕೊರಿಯಾದಿಂದ ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಸಮುದ್ರ ತೀರದ ಮೇಲೆ ಬ್ಯಾಲಿಸ್ಟಿಕ್‌ ಕ್ಷಿಪಣಿಗಳ ದಾಳಿ

ಪ್ಯೊಂಗ್ಯಾಂಗ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಸಮುದ್ರ ತೀರದ ಮೇಲೆ ಬ್ಯಾಲಿಸ್ಟಿಕ್‌ ಕ್ಷಿಪಣಿಗಳ ದಾಳಿ ನಡೆಸಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಮಿಲಿಟರಿ ಕವಾಯತುಗಳನ್ನು ನಡೆಸುತ್ತಿರುವಾಗ ಈ ಉಡಾವಣೆ ಸಂಭವಿಸಿದೆ. ಉತ್ತರ ಕೊರಿಯಾದ ಪೂರ್ವ ಕರಾವಳಿಯ ನೀರಿನ ಕಡೆಗೆ ಈ ಕ್ಷಿಪಣಿಯನ್ನು ಉಡಾಯಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ. ಕ್ಷಿಪಣಿಯು ಸಮುದ್ರದಲ್ಲಿ ಬಿದ್ದಂತೆ ಕಾಣುತ್ತದೆ ಎಂದು ಜಪಾನ್‌ನ ಕರಾವಳಿ ಕಾವಲು ಪಡೆ ತಿಳಿಸಿದೆ. ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಐದು ದಿನಗಳ ಹಿಂದೆಯೇ ದೊಡ್ಡ ಪ್ರಮಾಣದ ಮಿಲಿಟರಿ ಕವಾಯತುಗಳನ್ನು ಪ್ರಾರಂಭಿಸಿದವು ಎಂದು ತಿಳಿಸಿದೆ. 11 ದಿನಗಳ 'ಫ್ರೀಡಂ ಶೀಲ್ಡ್' ಎಂಬ ಜಂಟಿ ಸಮರಾಭ್ಯಾಸವು ಉತ್ತರ ಕೊರಿಯಾದ ಕೆಂಗಣ್ಣಿಗೆ ಗುರಿಯಾಗಿದೆ. "ಇದು ನಮ್ಮ ದೇಶದ ಮೇಲೆ ಆಕ್ರಮಣ ಮಾಡಲು ನಡೆಸುತ್ತಿರುವ ಸಿದ್ಧತೆ" ಎಂದು ಕಿಮ್ ಕಿಡಿಕಾರಿದ್ದಾರೆ. ಅಲ್ಲದೆ, ಕಿಮ್ ಸಹೋದರಿ ಕಿಮ್ ಯೋ ಜೊಂಗ್ ಕೂಡ "ನಮ್ಮ ಶತ್ರುಗಳಿಗೆ ಪಾಠ ಕಲಿಸಲು ನಾವು ಸದಾ ಸಿದ್ಧ" ಎಂದು ಗುಡುಗಿದ್ದಾರೆ. ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್ ಕ್ಷಿಪಣಿಯಂತೆ ಕಾಣುವ ಕ್ಷಿಪಣಿಯನ್ನು ಉಡಾಯಿಸಲಾಗಿದೆ ಎಂದು ಜಪಾನ್‌ನ ಕೋಸ್ಟ್ ಗಾರ್ಡ್ ನಂತರ ರಕ್ಷಣಾ ಸಚಿವಾಲಯದ ಮಾಹಿತಿಯನ್ನು ನೀಡಿದೆ. ಪರಮಾಣು ಶಸ್ತ್ರಸಜ್ಜಿತ ಉತ್ತರ ಕೊರಿಯಾ ಇಂತಹ ವ್ಯಾಯಾಮಗಳ ಬಗ್ಗೆ ಆಗಾಗ್ಗೆ ಕೋಪವನ್ನು ವ್ಯಕ್ತಪಡಿಸಿದೆ, ಇವುಗಳನ್ನು ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಸಶಸ್ತ್ರ ಆಕ್ರಮಣಕ್ಕಾಗಿ "ಡ್ರೆಸ್ ರಿಹರ್ಸಲ್" ಎಂದು ಕರೆದಿದೆ. ದಕ್ಷಿಣ ಕೊರಿಯಾದ ಪ್ರಧಾನಿ ವಾಷಿಂಗ್ಟನ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ, 2019 ರಿಂದ ಸ್ಥಗಿತಗೊಳಿಸಲಾಗಿರುವ ಉತ್ತರ ಕೊರಿಯಾ ಜೊತೆಗಿನ ಸಂವಾದವನ್ನು ಮತ್ತೆ ತೆರೆಯುವ ಮಾರ್ಗಗಳ ಕುರಿತು ಚರ್ಚಿಸಿದರು.

Category
ಕರಾವಳಿ ತರಂಗಿಣಿ