image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕ ಮತ್ತು ಇಸ್ರೇಲ್ ಮೂಲದ ಬ್ಯಾಂಕ್‌ಗಳು ಹಾಗೂ ಆರ್ಥಿಕ ಕೇಂದ್ರಗಳನ್ನು ಧ್ವಂಸಗೊಳಿಸುವುದಾಗಿಎಚ್ಚರಿಸಿದ ಇರಾನ್

ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕ ಮತ್ತು ಇಸ್ರೇಲ್ ಮೂಲದ ಬ್ಯಾಂಕ್‌ಗಳು ಹಾಗೂ ಆರ್ಥಿಕ ಕೇಂದ್ರಗಳನ್ನು ಧ್ವಂಸಗೊಳಿಸುವುದಾಗಿಎಚ್ಚರಿಸಿದ ಇರಾನ್

ಟೆಹ್ರಾನ್ : ಪಶ್ಚಿಮ ಏಷ್ಯಾದಲ್ಲಿ ಸಂಭವಿಸುತ್ತಿರುವ ಬೆಳವಣಿಗೆಗಳು ಜಗತ್ತನ್ನು ಆರ್ಥಿಕ ಮುಷ್ಕರದತ್ತ ದೂಡುತ್ತಿವೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿರುವ ಬ್ಯಾಂಕ್ ಒಂದರ ಮೇಲೆ ಅಮೆರಿಕ ಮತ್ತು ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಸಿಬ್ಬಂದಿಯನ್ನು ಕೊಂದ ಬೆನ್ನಲ್ಲೇ, ಇರಾನ್ ಮಿಲಿಟರಿ ಆರ್ಥಿಕ ಪ್ರತೀಕಾರಕ್ಕೆ ಕರೆ ನೀಡಿದೆ. ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕ ಮತ್ತು ಇಸ್ರೇಲ್ ಮೂಲದ ಬ್ಯಾಂಕ್‌ಗಳು ಹಾಗೂ ಆರ್ಥಿಕ ಕೇಂದ್ರಗಳನ್ನು ಧ್ವಂಸಗೊಳಿಸುವುದಾಗಿ ಇರಾನ್ ಎಚ್ಚರಿಸಿದೆ.

ಇರಾನ್‌ನ ಸೇನಾ ಕಾರ್ಯಾಚರಣೆಯ ಕೇಂದ್ರವಾದ ಖಾತಮ್ ಅಲ್-ಅನ್ಬಿಯಾ ಹೊರಡಿಸಿರುವ ಹೇಳಿಕೆಯು ಇಡೀ ಗಲ್ಫ್ ರಾಷ್ಟ್ರಗಳಲ್ಲಿ ನಡುಕ ಹುಟ್ಟಿಸಿದೆ. ಶತ್ರುಗಳು ನಮ್ಮ ಬ್ಯಾಂಕುಗಳ ಮೇಲೆ ದಾಳಿ ಮಾಡುವ ಮೂಲಕ ನಮಗೆ ಅವರ ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸಲು ಮುಕ್ತ ಅವಕಾಶ ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ಗೆ ಸೇರಿದ ಬ್ಯಾಂಕ್‌ಗಳು ನಮ್ಮ ಮುಂದಿನ ಟಾರ್ಗೆಟ್ ಎಂದು ಇರಾನ್ ಸೇನೆ ಘೋಷಿಸಿದೆ. ಗಲ್ಫ್ ಪ್ರಾಂತ್ಯದ ಜನರಿಗೆ ಇರಾನ್ ಒಂದು ಕಠಿಣ ಎಚ್ಚರಿಕೆ ನೀಡಿದೆ. ಯಾವುದೇ ಅಮೆರಿಕನ್ ಅಥವಾ ಇಸ್ರೇಲಿ ಬ್ಯಾಂಕ್‌ಗಳಿಂದ ಕನಿಷ್ಠ 1,000 ಮೀಟರ್ ದೂರವಿರಿ. ಇದು ಯಾವುದೇ ಕ್ಷಣದಲ್ಲಿ ಬ್ಯಾಂಕ್‌ಗಳ ಮೇಲೆ ಕ್ಷಿಪಣಿ ಅಥವಾ ಡ್ರೋನ್ ದಾಳಿ ನಡೆಯಬಹುದು ಎಂಬ ಮುನ್ಸೂಚನೆಯಾಗಿದೆ.

Category
ಕರಾವಳಿ ತರಂಗಿಣಿ