image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

1 ಟನ್‌ಗೂ ಅಧಿಕ ತೂಕದ ಸಿಡಿತಲೆಗಳಿರುವ ಕ್ಷಿಪಣಿಗಳನ್ನು ಬಳಸಲು ಇರಾನ್‌ ರೆವಲೂಷನರ್‌ ಗಾರ್ಡ್‌ ಚಿಂತನೆ

1 ಟನ್‌ಗೂ ಅಧಿಕ ತೂಕದ ಸಿಡಿತಲೆಗಳಿರುವ ಕ್ಷಿಪಣಿಗಳನ್ನು ಬಳಸಲು ಇರಾನ್‌ ರೆವಲೂಷನರ್‌ ಗಾರ್ಡ್‌ ಚಿಂತನೆ

ಟೆಹ್ರಾನ್‌ : ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವೆ ನಡೆಯುತ್ತಿರುವ ಯುದ್ಧವು ತಾರಕಕ್ಕೇರುತ್ತಿದ್ದು, ಈ ನಡುವೆ ಭಾರಿ ಗಾತ್ರದ ಕ್ಷಿಪಣಿಗಳ ಬಳಕೆಗೆ ಇರಾನ್‌ ಮುಂದಾಗಿದೆ ಎಂದು ವರದಿಯಾಗಿದೆ. 1 ಟನ್‌ಗೂ ಅಧಿಕ ತೂಕದ ಸಿಡಿತಲೆಗಳಿರುವ ಕ್ಷಿಪಣಿಗಳನ್ನು ಬಳಸಲು ಇರಾನ್‌ ರೆವಲೂಷನರ್‌ ಗಾರ್ಡ್‌ ಚಿಂತನೆ ನಡೆಸುತ್ತಿದೆ ಎಂದು ವರದಿ ಹೇಳಿದೆ. ಪ್ರಾದೇಶಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನೇ ನಾಶ ಮಾಡುವ ಸಾಮರ್ಥ್ಯವಿರುವ ಈ ಕ್ಷಿಪಣಿಗಳನ್ನು ಬಳಸಿಕೊಂಡು ಇಸ್ರೇಲ್‌, ಅರಬ್‌ನಲ್ಲಿರುವ ಅಮೆರಿಕದ ಪ್ರಾದೇಶಿಕ ನೆಲೆಗಳು, ವಾಯುನೆಲೆಗಳು, ಬಂಕರ್‌ಗಳು, ಬಂದರು, ಲಾಜಿಸ್ಟಿಕ್ ಹಬ್ಸ್‌, ಕಮಾಂಡ್‌ ಸೆಂಟರ್‌ಗಳು ಸೇರಿ ಶತ್ರು ರಾಷ್ಟ್ರಗಳ ಸಂಪೂರ್ಣ ನೆಲೆಯನ್ನೇ ಧ್ವಂಸಗೊಳಿಸಲು ರೂಪಿಸಿರುವ ಯೋಜನೆ ಎಂದು ವರದಿಯಾಗಿದೆ. ಈವರಗೆ ಇರಾನ್‌ ಬಳಸುತ್ತಿದ್ದ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಗಿಂತಲೂ ಇವು ಹೆಚ್ಚಿನ ಸಾಮರ್ಥ್ಯ ಹೊಂದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ನಷ್ಟವನ್ನು ಊಹಿಸಬಹುದಾಗಿದೆ. ಇರಾನ್‌ ಪರಮೋಚ್ಚ ನಾಯಕರಾಗಿ ಹೊಸದಾಗಿ ಆಯ್ಕೆಯಾದ ಖಮೇನಿ ಪುತ್ರ ಮೊಜ್ತಬಾ ಖಮೇನಿ ಅವರು ಶತ್ರುಗಳು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಇರಾನ್‌ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿವೆ. 'ಜಾನ್ಬಾಜ್ ಆಫ್ ರಂಜಾನ್‌' ಎಂಬ ಪದವನ್ನು ಬಳಕೆ ಮಾಡಿವೆ. ಜಾನ್ಬಾಜ್‌ ಆಫ್‌ ರಂಜಾನ್‌ ಎಂದರೆ ಯುದ್ದದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟವರು ಅಥವಾ ಗಾಯಗೊಂಡವರು ಎಂದರ್ಥವನ್ನು ನೀಡುತ್ತದೆ.

Category
ಕರಾವಳಿ ತರಂಗಿಣಿ