image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಕ್ಷಮೆಯಾಚಿಸಿದ ಕೆಲವೇ ಗಂಟೆಗಳಲ್ಲಿ, ಇರಾನ್ ನಿಂದ ಮತ್ತೆ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ಬೃಹತ್ ಪ್ರಮಾಣದ ದಾಳಿ

ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಕ್ಷಮೆಯಾಚಿಸಿದ ಕೆಲವೇ ಗಂಟೆಗಳಲ್ಲಿ, ಇರಾನ್ ನಿಂದ ಮತ್ತೆ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ಬೃಹತ್ ಪ್ರಮಾಣದ ದಾಳಿ

ದುಬೈ: ಪಶ್ಚಿಮ ಏಷ್ಯಾದಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ನೆರೆ ರಾಷ್ಟ್ರಗಳ ಮೇಲೆ ನಡೆಸಿದ ದಾಳಿಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಕ್ಷಮೆಯಾಚಿಸಿದ ಕೆಲವೇ ಗಂಟೆಗಳಲ್ಲಿ, ಇರಾನ್ ಮತ್ತೆ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ಬೃಹತ್ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಈ ಭೀಕರ ದಾಳಿಯನ್ನು ಯುಎಇ ಯಶಸ್ವಿಯಾಗಿ ಮೆಟ್ಟಿ ನಿಂತಿದ್ದು, ತನ್ನ ಆಕಾಶದಲ್ಲೇ ಶತ್ರು ಪಡೆಗಳನ್ನು ನಾಶಪಡಿಸಿದೆ. ಇರಾನ್ ಹಾರಿಸಿದ್ದ 16 ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ 15 ಅನ್ನು ಯುಎಇ ವಾಯು ರಕ್ಷಣಾ ವ್ಯವಸ್ಥೆಯು ಆಕಾಶದಲ್ಲೇ ಹೊಡೆದುರುಳಿಸಿದೆ.

​ಡ್ರೋನ್‌ಗಳು: ಒಟ್ಟು 121 ಡ್ರೋನ್‌ಗಳು ದಾಳಿಗೆ ಬಂದಿದ್ದು, ಅದರಲ್ಲಿ 119 ಅನ್ನು ಹೊಡೆದುರುಳಿಸಲಾಗಿದೆ. ​ಇಸ್ರೇಲ್ ಮತ್ತು ಅಮೆರಿಕದ ಸಹಕಾರದೊಂದಿಗೆ ಯುಎಇ ತನ್ನ ಗಡಿಯನ್ನು ಭದ್ರಪಡಿಸಿಕೊಂಡಿದೆ.​ದಾಳಿಯ ತೀವ್ರತೆಯಿಂದಾಗಿ ವಿಶ್ವದ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣವಾದ ದುಬೈ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ವಿಮಾನ ಸಂಚಾರ ಭಾಗಶಃ ಪುನಾರಂಭಗೊಂಡಿದೆ.

Category
ಕರಾವಳಿ ತರಂಗಿಣಿ