image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ವಿಶ್ವದಲ್ಲೇ ಅತಿಹೆಚ್ಚು ಚಿನ್ನ ಖರೀದಿಸುತ್ತಿದ್ದ ಪೋಲೆಂಡ್: ಚಿನ್ನವನ್ನು ಮಾರಾಟ ಮಾಡಿ ಶಸ್ತ್ರಾಸ್ತ್ರ ಖರೀದಿ!

ವಿಶ್ವದಲ್ಲೇ ಅತಿಹೆಚ್ಚು ಚಿನ್ನ ಖರೀದಿಸುತ್ತಿದ್ದ ಪೋಲೆಂಡ್: ಚಿನ್ನವನ್ನು ಮಾರಾಟ ಮಾಡಿ ಶಸ್ತ್ರಾಸ್ತ್ರ ಖರೀದಿ!

ಪೋಲೆಂಡ್ : ವಿಶ್ವದಲ್ಲೇ ಅತಿಹೆಚ್ಚು ಚಿನ್ನ ಖರೀದಿಸುತ್ತಿದ್ದ ಪೋಲೆಂಡ್, ಈಗ ತನ್ನ ಮೀಸಲು ಚಿನ್ನವನ್ನು ಮಾರಾಟ ಮಾಡಲು ಉದ್ದೇಶಿಸಿದೆ. ಪೋಲೆಂಡ್‌ನ ಸೆಂಟ್ರಲ್ ಬ್ಯಾಂಕ್ ಗವರ್ನರ್ ಅದಂ ಗ್ಲಾಪಿನ್ಸ್ಕಿ ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಸುಮಾರು 13 ಬಿಲಿಯನ್ ಡಾಲರ್ (ಅಂದಾಜು ₹1.1 ಲಕ್ಷ ಕೋಟಿ) ಮೌಲ್ಯದ ಚಿನ್ನವನ್ನು ಮಾರಿ ಆಧುನಿಕ ಶಸ್ತ್ರಾಸ್ತ್ರ, ಟ್ಯಾಂಕ್ ಮತ್ತು ಕ್ಷಿಪಣಿಗಳನ್ನು ಖರೀದಿಸುವುದು ಇವರ ಯೋಜನೆಯಾಗಿದೆ. ಪೋಲೆಂಡ್ ಸದ್ಯ 550 ಟನ್ ಚಿನ್ನದ ದಾಸ್ತಾನು ಹೊಂದಿದ್ದು, ವಿಶ್ವದ 12ನೇ ಅತಿದೊಡ್ಡ ಚಿನ್ನದ ನಿಕ್ಷೇಪ ಹೊಂದಿರುವ ದೇಶವಾಗಿದೆ. ಶಸ್ತ್ರಾಸ್ತ್ರಗಳ ಖರೀದಿಗಾಗಿ ಯುರೋಪಿಯನ್ ಒಕ್ಕೂಟ (EU) ನೀಡುವ ಸಾಲದ ಯೋಜನೆಗೆ (SAFE) ಒಪ್ಪಿಕೊಳ್ಳುವ ಬದಲು, ಪೋಲೆಂಡ್ ತನ್ನದೇ ಆದ 'Polish SAFE 0%' ಎಂಬ ಯೋಜನೆಯನ್ನು ರೂಪಿಸಿದೆ. ಇಯು ಸಾಲದ ಮೇಲೆ ಬಡ್ಡಿ ಹೆಚ್ಚಿರುವುದು ಮತ್ತು ಅದು ಅಮೆರಿಕದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಪೋಲೆಂಡ್ ಸರ್ಕಾರಕ್ಕಿದೆ. ಆದ್ದರಿಂದ, ಈಗಿನ ಗರಿಷ್ಠ ದರದಲ್ಲಿ ಚಿನ್ನವನ್ನು ಮಾರಿ ಲಾಭ ಮಾಡಿಕೊಳ್ಳುವುದು ಮತ್ತು ಆ ಹಣವನ್ನು ರಕ್ಷಣಾ ವಲಯಕ್ಕೆ ಬಳಸುವುದು ಪೋಲೆಂಡ್‌ನ ತಂತ್ರವಾಗಿದೆ. ಪೋಲೆಂಡ್ ಗವರ್ನರ್ ಪ್ರಕಾರ, ಈಗ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿದೆ. ಈ ಸಮಯದಲ್ಲಿ ಸ್ವಲ್ಪ ಚಿನ್ನ ಮಾರಿ ಲಾಭ ಪಡೆದು, ಅದನ್ನು ಸೇನೆಗೆ ಬಳಸುವುದು ಸೂಕ್ತ. ಭವಿಷ್ಯದಲ್ಲಿ ಚಿನ್ನದ ಬೆಲೆ ಸ್ಥಿರವಾದಾಗ ಮತ್ತೆ ಅದನ್ನು ಖರೀದಿಸಿ ದಾಸ್ತಾನು ಹೆಚ್ಚಿಸಿಕೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ.

Category
ಕರಾವಳಿ ತರಂಗಿಣಿ