image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡನ್ ಕೊಲ್ಲಲು ಇರಾನ್‌ನ ಗೂಢಚಾರರು ತನ್ನನ್ನು ನೇಮಿಸಿಕೊಂಡಿದ್ದರು : ಅಮೇರಿಕಾದಲ್ಲಿ ಬಂಧಿತ ಆಸಿಫ್ ಮರ್ಚೆಂಟ್

ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡನ್ ಕೊಲ್ಲಲು ಇರಾನ್‌ನ ಗೂಢಚಾರರು ತನ್ನನ್ನು ನೇಮಿಸಿಕೊಂಡಿದ್ದರು : ಅಮೇರಿಕಾದಲ್ಲಿ ಬಂಧಿತ ಆಸಿಫ್ ಮರ್ಚೆಂಟ್

ನ್ಯೂ ಯಾರ್ಕ್ : ಅಮೆರಿಕದ ಟಾಪ್ ರಾಜಕಾರಣಿಗಳ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಪಾಕಿಸ್ತಾನಿ ಪ್ರಜೆಯೊಬ್ಬ, ಬುಧವಾರ ಕೋರ್ಟ್‌ನಲ್ಲಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡನ್ ಮತ್ತು ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ ಅವರನ್ನು ಕೊಲ್ಲಲು ಇರಾನ್‌ನ ಗೂಢಚಾರರು ತನ್ನನ್ನು ನೇಮಿಸಿಕೊಂಡಿದ್ದರು ಅಂತ ಆತ ಹೇಳಿಕೊಂಡಿದ್ದಾನೆ. ಬ್ರೂಕ್ಲಿನ್‌ನ ಫೆಡರಲ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಭಯೋತ್ಪಾದನೆ ಮತ್ತು ಸುಪಾರಿ ಹತ್ಯೆ ಆರೋಪಗಳನ್ನು ಎದುರಿಸುತ್ತಿರುವ ಆಸಿಫ್ ಮರ್ಚೆಂಟ್, ತನ್ನ ಪರವಾಗಿ ತಾನೇ ಸಾಕ್ಷ್ಯ ನುಡಿದ. ಈ ಹತ್ಯೆಗಳನ್ನು ಮಾಡುವ ಉದ್ದೇಶ ತನಗೆ ಇರಲಿಲ್ಲ, ಮತ್ತು ಈ ಆಪರೇಷನ್ ಮೊದಲಿನಿಂದಲೂ ವಿಫಲವಾಗುತ್ತೆ ಅಂತ ತನಗೆ ಗೊತ್ತಿತ್ತು ಎಂದು ಆತ ನ್ಯಾಯಾಲಯಕ್ಕೆ ತಿಳಿಸಿದ. ತಿಳಿ ನೀಲಿ ಶರ್ಟ್ ಮೇಲೆ ಬೂದು ಬಣ್ಣದ ಸ್ವೆಟರ್ ಧರಿಸಿದ್ದ ಮರ್ಚೆಂಟ್, ಭಾಷಾಂತರಕಾರರ ಸಹಾಯದೊಂದಿಗೆ ಸ್ಪಷ್ಟವಾದ ಉರ್ದುವಿನಲ್ಲಿ, "ನನಗೆ ಈ ಕೆಲಸವನ್ನು ಮನಃಪೂರ್ವಕವಾಗಿ ಮಾಡುವ ಇಷ್ಟವಿರಲಿಲ್ಲ" ಎಂದು ಹೇಳಿದ ಎಂದು ವರದಿಯಾಗಿದೆ.

ಇರಾನ್‌ನ 'ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್' ನಿರ್ದೇಶನದಂತೆ ಮರ್ಚೆಂಟ್ ಕೆಲಸ ಮಾಡುತ್ತಿದ್ದ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಮೇಜರ್ ಜನರಲ್ ಕಾಸಿಂ ಸುಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಸಂಘಟನೆ ಬಹಳ ದಿನಗಳಿಂದ ಕಾಯುತ್ತಿತ್ತು ಅಂತಾನೂ ಅವರು ಹೇಳಿದ್ದಾರೆ. ಇರಾನ್‌ನ ಪ್ರಾದೇಶಿಕ ಭದ್ರತಾ ಜಾಲದ ರೂವಾರಿ ಎಂದೇ ಪರಿಗಣಿಸಲಾಗಿದ್ದ ಈ ಪ್ರಭಾವಿ ಕಮಾಂಡರ್‌ನನ್ನು, ಜನವರಿ 3, 2020 ರಂದು ಅಮೆರಿಕ ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಿತ್ತು. ವಿಚಾರಣೆ ವೇಳೆ, ಪ್ರಾಸಿಕ್ಯೂಟರ್‌ಗಳು ಮರ್ಚೆಂಟ್‌ನ ಫೇಸ್‌ಬುಕ್ ಖಾತೆಯಿಂದ ಪಡೆದ ಚಿತ್ರಗಳನ್ನು ನ್ಯಾಯಪೀಠಕ್ಕೆ ತೋರಿಸಿದರು. ಅದರಲ್ಲಿ ಟ್ರಂಪ್ ಅವರ ಶಿರಚ್ಛೇದಿತ ತಲೆ ಮತ್ತು ಇನ್ನೊಂದು ಚಿತ್ರದಲ್ಲಿ ಮಾಜಿ ಅಧ್ಯಕ್ಷರು ಹಂದಿಯ ಪಕ್ಕದಲ್ಲಿ ನಿಂತಿರುವ ದೃಶ್ಯಗಳಿದ್ದವು. ಮರ್ಚೆಂಟ್‌ನ ಹೇಳಿಕೆಗಳು ಈ ರಹಸ್ಯ ಕಾರ್ಯಾಚರಣೆಗಳ ಜಗತ್ತಿನ ಒಂದು ಅಪರೂಪದ ನೋಟವನ್ನು ನೀಡಿದರೂ, ಈ ಮಿಷನ್ ಕಾರ್ಯರೂಪಕ್ಕೆ ಬರುವ ಹಂತಕ್ಕೆ ತಲುಪಲೇ ಇಲ್ಲ ಎಂಬುದನ್ನೂ ಸೂಚಿಸುತ್ತವೆ ಎಂದು ಮೂಲಗಳಿಂದ ತಿಳಿದುಬಂದಿದೆ.

Category
ಕರಾವಳಿ ತರಂಗಿಣಿ