image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ಇಸ್ರೇಲಿಯನ್ನರ ರಕ್ತವನ್ನು ಚೆಲ್ಲುವುದು ಕಡ್ಡಾಯ : ಇರಾನ್ ಧರ್ಮಗುರು ಅಬ್ದುಲ್ಲಾ ಜಾವಾದಿ-ಅಮೋಲಿ ಫತ್ವಾ

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ಇಸ್ರೇಲಿಯನ್ನರ ರಕ್ತವನ್ನು ಚೆಲ್ಲುವುದು ಕಡ್ಡಾಯ : ಇರಾನ್ ಧರ್ಮಗುರು ಅಬ್ದುಲ್ಲಾ ಜಾವಾದಿ-ಅಮೋಲಿ ಫತ್ವಾ

ಟೆಹ್ರಾನ್​ : ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ಇಸ್ರೇಲಿಯನ್ನರ ರಕ್ತವನ್ನು ಚೆಲ್ಲುವುದು ಕಡ್ಡಾಯ ಎಂದು ಶಿಯಾ ಮುಸ್ಲಿಮರಿಗೆ ಕರೆ ನೀಡುವ ಮೂಲಕ ಇರಾನ್​ನ ಹಿರಿಯ ಧರ್ಮಗುರು ಅಬ್ದುಲ್ಲಾ ಜಾವಾದಿ-ಅಮೋಲಿ ಜಿಹಾದ್‌ಗಾಗಿ ಫತ್ವಾ ಹೊರಡಿಸಿದ್ದಾರೆ. ಇಸ್ರೇಲ್, ಅಮೆರಿಕ ಹಾಗೂ ಇರಾನ್​ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ತಮ್ಮ ಸುಪ್ರೀಂ ಲೀಡರ್​ ಅಯತೊಲ್ಲಾ ಖಮೇನಿಯನ್ನು ಕೊಂದ ಬಳಿಕ ಅಗ್ನಿ ಜ್ವಾಲೆಯಂತೆ ಉರಿಯುತ್ತಿರುವ ಇರಾನ್​, ಅಮೆರಿಕ ಮತ್ತು ಇಸ್ರೇಲ್​ ಮೇಲಿನ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಕೊನೇ ಕ್ಷಣದವರೆಗೂ ಹೋರಾಡುವುದಾಗಿ ಶಪಥ ಮಾಡಿದೆ. ಇದರ ಬೆನ್ನಲ್ಲೇ ಇರಾನ್​ ಧರ್ಮಗುರು ಅಬ್ದುಲ್ಲಾ ಜಾವಾದಿ ಫತ್ವಾ ಹೊರಡಿಸಿದ್ದಾರೆ.

Category
ಕರಾವಳಿ ತರಂಗಿಣಿ