image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾನ್ ಪರಮಾಣು ಕೇಂದ್ರವಾದ ನಟಾಂಜ್ ಮೇಲೆ ವೈಮಾನಿಕ ದಾಳಿ ನಡೆಸಿರುವುದು ಉಪಗ್ರಹ ಚಿತ್ರಗಳ ಮೂಲಕ ದೃಢ

ಇರಾನ್ ಪರಮಾಣು ಕೇಂದ್ರವಾದ ನಟಾಂಜ್ ಮೇಲೆ ವೈಮಾನಿಕ ದಾಳಿ ನಡೆಸಿರುವುದು ಉಪಗ್ರಹ ಚಿತ್ರಗಳ ಮೂಲಕ ದೃಢ

ಟೆಹ್ರಾನ್ : ಇರಾನ್ ಮತ್ತು ಪಶ್ಚಿಮ ರಾಷ್ಟ್ರಗಳ ನಡುವಿನ ಸಮರ ಈಗ ಪರಮಾವಧಿ ತಲುಪಿದೆ. ಇರಾನ್‌ನ ಅತ್ಯಂತ ರಹಸ್ಯ ಮತ್ತು ಮಹತ್ವದ ಪರಮಾಣು ಕೇಂದ್ರವಾದ ನಟಾಂಜ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಭೀಕರ ವೈಮಾನಿಕ ದಾಳಿ ನಡೆಸಿರುವುದು ಈಗ ಉಪಗ್ರಹ ಚಿತ್ರಗಳ ಮೂಲಕ ದೃಢಪಟ್ಟಿದೆ. ಜೂನ್ ತಿಂಗಳ ದಾಳಿಯ ನಂತರ, ನಟಾಂಜ್ ಮೇಲೆ ನಡೆದ ಅತಿದೊಡ್ಡ ದಾಳಿ ಇದಾಗಿದ್ದು, ಇರಾನ್‌ನ ಪರಮಾಣು ಬಾಂಬ್ ತಯಾರಿಸುವ ಕನಸಿಗೆ ದೊಡ್ಡ ಪೆಟ್ಟು ಬಿದ್ದಿದೆ. ಕೊಲೊರಾಡೋ ಮೂಲದ ವಾಂಟರ್ ಸಂಸ್ಥೆ ಬಿಡುಗಡೆ ಮಾಡಿರುವ ಚಿತ್ರಗಳ ಪ್ರಕಾರ, ನಟಾಂಜ್‌ನ ಭೂಗತ ಯುರೇನಿಯಂ ಪುಷ್ಟೀಕರಣ ಘಟಕದ ಪ್ರವೇಶ ದ್ವಾರಗಳ ಮೇಲೆ ಎರಡು ಪ್ರಬಲ ಕ್ಷಿಪಣಿ ದಾಳಿಗಳು ನಡೆದಿವೆ.

ಈ ದಾಳಿಯಲ್ಲಿ ನಟಾಂಜ್ ಸಂಕೀರ್ಣದ ಒಟ್ಟು ಮೂರು ಪ್ರಮುಖ ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ. ಸಾವಿರಾರು ಸೆಂಟ್ರಿಫ್ಯೂಜ್‌ಗಳನ್ನು ಹೊಂದಿದ್ದ ಭೂಗತ ಹಾಲ್‌ಗಳಿಗೆ ಹೋಗುವ ಸಿಬ್ಬಂದಿ ಪ್ರವೇಶ ದ್ವಾರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಭೂಗತ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ವಾಹನ ರಾಂಪ್ ಕೂಡ ಧ್ವಂಸಗೊಂಡಿದ್ದು, ಇಡೀ ಕೇಂದ್ರವು ಈಗ ಬಾಹ್ಯ ಪ್ರಪಂಚದಿಂದ ಕಡಿದುಹೋಗಿದೆ. ಈ ದಾಳಿಯ ಕುರಿತು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (IAEA) ಮುಖ್ಯಸ್ಥ ರಾಫೆಲ್ ಗ್ರೋಸಿ ಮತ್ತು ಇರಾನ್ ರಾಯಭಾರಿ ರೆಜಾ ನಜಾಫಿ ನಡುವೆ ಮಾತಿನ ಚಕಮಕಿ ನಡೆದಿದೆ. ಯಾವುದೇ ಪರಮಾಣು ಕೇಂದ್ರದ ಮೇಲೆ ದಾಳಿಯಾದ ಕುರುಹುಗಳಿಲ್ಲ ಎಂದು ಗ್ರೋಸಿ ಹೇಳಿದ ಬೆನ್ನಲ್ಲೇ, ನಜಾಫಿ ಅವರು ನಟಾಂಜ್ ಮೇಲೆ ನಿನ್ನೆ ದಾಳಿಯಾಗಿದೆ ಎಂದು ಬಹಿರಂಗಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಮಾಜಿ ವಿಶ್ವಸಂಸ್ಥೆಯ ಅಣು ಇನ್ಸ್ಪೆಕ್ಟರ್ ಡೇವಿಡ್ ಆಲ್ಬ್ರೈಟ್ ಅವರ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ. ಭಾನುವಾರ ಮಧ್ಯಾಹ್ನ ಮತ್ತು ಸೋಮವಾರ ಮುಂಜಾನೆಯ ನಡುವೆ ಈ ದಾಳಿ ನಡೆದಿದೆ ಎಂದು ಅವರು ಖಚಿತಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ