image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಮಧ್ಯ ಪ್ರಾಚ್ಯ ದೇಶಗಳಿಗೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯಿಂದ ಪ್ರಸ್ತಾಪ

ಮಧ್ಯ ಪ್ರಾಚ್ಯ ದೇಶಗಳಿಗೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯಿಂದ ಪ್ರಸ್ತಾಪ

ಟೆಹರಾನ್ : ಮಧ್ಯಪ್ರಾಚ್ಯ ಪ್ರದೇಶದಲ್ಲಿರುವ ಇರಾನ್ ಮೇಲೆ ಇಸ್ರೇಲ್-ಅಮೇರಿಕಾದ ದಾಳಿಗಳಿಂದಾಗಿ ಪರಿಸ್ಥಿತಿ ಗಂಭೀರವಾಗಿದೆ. ಇದೇ ವೇಳೆ ಮಧ್ಯ ಪ್ರಾಚ್ಯ ದೇಶಗಳಿಗೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒಂದು ಪ್ರಸ್ತಾಪವನ್ನು ನೀಡಿದ್ದಾರೆ.ಮಧ್ಯಪ್ರಾಚ್ಯ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡುತ್ತಿದೆ. ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಝೆಲೆನ್ಸ್ಕಿ ಮಧ್ಯಪ್ರಾಚ್ಯ ದೇಶಗಳು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಒಂದು ತಿಂಗಳ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮನವೊಲಿಸಿದರೆ, ಉಕ್ರೇನ್ ಅವರನ್ನು ಇರಾನಿನ ಡ್ರೋನ್‌ಗಳಿಂದ ರಕ್ಷಿಸುತ್ತದೆ ಎಂದು ಹೇಳಿದ್ದಾರೆ.

ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿಅವರು ಇರಾನಿನ ಡ್ರೋನ್‌ಗಳನ್ನು ತಡೆಯಲು ಮಧ್ಯಪ್ರಾಚ್ಯಕ್ಕೆ ತಮ್ಮ ಅತ್ಯುತ್ತಮ ತಜ್ಞರನ್ನು ಕಳುಹಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ.ಉಕ್ರೇನ್ ದೀರ್ಘಕಾಲದವರೆಗೆ ರಷ್ಯಾದೊಂದಿಗೆ ಯುದ್ಧದಲ್ಲಿದೆ ಹಾಗಾಗಿ ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಹೆಚ್ಚಿನ ಅನುಭವವನ್ನು ಗಳಿಸಿದೆ.ಅವರ ಸೈನ್ಯವು ಹಲವಾರು ಹೈಟೆಕ್ ರಷ್ಯಾದ ಡ್ರೋನ್‌ಗಳನ್ನು ಗಾಳಿಯಲ್ಲಿ ಹೊಡೆದುರುಳಿಸಿದೆ.ಇಲ್ಲಿಯವರೆಗೆ ಉಕ್ರೇನ್ ವಿರುದ್ಧ 57,000 ಡ್ರೋನ್‌ಗಳನ್ನು ಬಳಸಲಾಗಿದೆ, ಅವುಗಳಲ್ಲಿ ಹೆಚ್ಚಿನವುಗಳನ್ನು ಉಕ್ರೇನಿಯನ್ ಸೈನ್ಯವು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಝೆಲೆನ್ಸ್ಕಿಹೇಳಿದ್ದಾರೆ.ಈ ಸಾವಿರಾರು ಡ್ರೋನ್‌ಗಳನ್ನು ಇರಾನ್ ರಷ್ಯಾ ದೇಶಕ್ಕೆ ಕಳುಹಿಸಿದೆ.ಹಾಗಾಗಿ ಈಗ ಇರಾನಿನ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೇಗೆ ಎದುರಿಸಬೇಕೆಂದು ತಮಗೆ ತಿಳಿದಿದೆ ಎಂದು ಹೇಳಿದರು.

'ಇರಾನ್‌ನಿಂದ ಪ್ರಭಾವಿತವಾಗಿರುವ ಮಧ್ಯಪ್ರಾಚ್ಯ ದೇಶಗಳಿಗೆ ನಾನು ಒಂದು ಸಲಹೆಯನ್ನು ನೀಡಲು ಬಯಸುತ್ತೇನೆ.ವಾಸ್ತವವಾಗಿ ಮಧ್ಯಪ್ರಾಚ್ಯ ದೇಶಗಳು ರಷ್ಯಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ.ಆದ್ದರಿಂದ ಅವರು ರಷ್ಯಾದಿಂದ ಒಂದು ತಿಂಗಳ ಕಾಲ ಕದನ ವಿರಾಮವನ್ನು ಕೋರಬೇಕು.ಒಂದು ವೇಳೆ ರಷ್ಯಾ ಒಪ್ಪಿದರೆ ಮಧ್ಯಪ್ರಾಚ್ಯ ದೇಶಗಳಿಗೆ ಸಹಾಯ ಮಾಡಲು ಉಕ್ರೇನ್ ಸಿದ್ಧವಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.ಇರಾನ್ ನಡೆಸುತ್ತಿರುವ ದಾಳಿಯನ್ನು ಗಮನಿಸಿದರೆ ಈ ಯುದ್ಧವು ಎರಡು ತಿಂಗಳ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು. ಫೆಬ್ರವರಿ 28 ರಿಂದ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿದೆ,ಈ ಯುದ್ಧದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಅವರ ಕುಟುಂಬದ ಹಲವಾರು ಸದಸ್ಯರು ಮೃತಪಟ್ಟಿದ್ದಾರೆ.ಅಂದಿನಿಂದ ಇರಾನ್ ಮಧ್ಯಪ್ರಾಚ್ಯ ಮತ್ತು ಇಸ್ರೇಲ್‌ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ.ಇರಾಕ್, ಬಹ್ರೇನ್, ಕುವೈತ್, ಅರಬ್, ಯುಎಇ ಮತ್ತು ಕತಾರ್‌ನಲ್ಲಿರುವ ಇಸ್ರೇಲಿ ಮತ್ತು ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ನಿರಂತರವಾಗಿ ದಾಳಿ ಮಾಡುತ್ತಿದೆ.

Category
ಕರಾವಳಿ ತರಂಗಿಣಿ