image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾನ್ ಬಳಿ ಒಟ್ಟು 80,000 ಡ್ರೋನ್‌ಗಳು, ಒಂದರ ಬೆಲೆ 20 ಲಕ್ಷ: ಅಮೇರಿಕಾದ ದುಬಾರಿ ಸಲಕರಣೆಗಳಿಗೆ ಇರಾನ್ ಡ್ರೋನ್ ಉತ್ತರ

ಇರಾನ್ ಬಳಿ ಒಟ್ಟು 80,000 ಡ್ರೋನ್‌ಗಳು, ಒಂದರ ಬೆಲೆ 20 ಲಕ್ಷ: ಅಮೇರಿಕಾದ ದುಬಾರಿ ಸಲಕರಣೆಗಳಿಗೆ ಇರಾನ್ ಡ್ರೋನ್ ಉತ್ತರ

ಟೆಹರಾನ್ : ಸೋಮವಾರ ಒಂದೇ ದಿನ ಇರಾನ್ ಸುಮಾರು 17 ದೇಶಗಳ ಮೇಲೆ ಡ್ರೋನ್ ದಾಳಿ ನಡೆಸುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದೆ. 'ವಾಲ್ ಸ್ಟ್ರೀಟ್ ಜರ್ನಲ್' ವರದಿಯ ಪ್ರಕಾರ, ಯುದ್ಧದ ಮೊದಲ ದಿನವೇ ಇರಾನ್ ಬರೋಬ್ಬರಿ 1,000 ಡ್ರೋನ್‌ಗಳನ್ನು ಉಡಾವಣೆ ಮಾಡಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ 200 ಡ್ರೋನ್‌ಗಳು ದುಬೈ ಮೇಲೆ ದಾಳಿ ನಡೆಸಿವೆ. ನಂತರದ ದಿನಗಳಲ್ಲಿ ಕುವೈತ್ ಮತ್ತು ಸೌದಿಯ ತೈಲ ಕಂಪನಿಗಳ ಮೇಲೂ ಇದೇ ಡ್ರೋನ್‌ ಬಳಸಿ ದಾಳಿ ಮಾಡಿದೆ. ಸೌದಿ ಅರೇಬಿಯಾದ ಶ್ರೀಮಂತ ತೈಲ ಕಂಪನಿ ಅರಾಮ್ಕೊ (Aramco) ಕಾರ್ಯಾಚರಣೆ ನಡೆಸುವ ತನುರಾ ರಿಫೈನರಿಯನ್ನು ಇರಾನ್ ಗುರಿಯಾಗಿಸಿಕೊಂಡಿದೆ. ಟರ್ಕಿ ಮತ್ತು ಕತಾರ್ ದೇಶಗಳ ಮೇಲೂ ಡ್ರೋನ್ ದಾಳಿಗಳು ನಡೆಸಿರುವುದಾಗಿ ಇರಾನ್‌ ಹೇಳಿದೆ. 

ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರವಾಗಿ ಹಾವಳಿ ಎಬ್ಬಿಸಿದ್ದ 'ಷಾಹೆದ್-136' (Shahed-136) ಡ್ರೋನ್‌ಗಳನ್ನು ಈಗ ಇರಾನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೆಲೆಗಳ ಮೇಲೆ ಪ್ರಯೋಗಿಸುತ್ತಿದೆ. ಇದು ಸತತವಾಗಿ ಹಲವು ಗಂಟೆಗಳ ಕಾಲ ಆಕಾಶದಲ್ಲಿ ಹಾರಬಲ್ಲದು. ಏಕಕಾಲದಲ್ಲಿ 2,000 ಕಿಲೋಮೀಟರ್ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಇದಕ್ಕಿದ್ದು, ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಡ್ರೋನ್‌ನಲ್ಲಿ ಸ್ಫೋಟಕಗಳನ್ನು ತುಂಬಿಸಲಾಗಿರುತ್ತದೆ. ಇದು ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆದ ತಕ್ಷಣ ಭೀಕರವಾಗಿ ಸ್ಫೋಟಗೊಳ್ಳುತ್ತದೆ. ಇರಾನ್ ಬಳಿ ಪ್ರಸ್ತುತ ಒಟ್ಟು 80,000 ಡ್ರೋನ್‌ಗಳಿದ್ದು, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹೇಳುವಂತೆ, "ಅಮೆರಿಕವನ್ನು ಹೇಗೆ ಸೋಲಿಸಬೇಕೆಂದು ನಮಗೆ ತಿಳಿದಿದೆ' ಎಂದಿದ್ದಾರೆ ಇರಾನ್‌ನ ಒಂದು ಡ್ರೋನ್ ತಯಾರಿಕೆಗೆ ತಗಲುವ ವೆಚ್ಚ ಕೇವಲ 18 ರಿಂದ 20 ಲಕ್ಷ ರೂಪಾಯಿ. ಆದರೆ ಈ ಸಣ್ಣ ಡ್ರೋನ್ ಅಮೆರಿಕದ 818 ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ಫೈಟರ್ ಜೆಟ್ ಅನ್ನು ಸುಲಭವಾಗಿ ಹೊಡೆದುರುಳಿಸಬಲ್ಲದು. ಇರಾನ್ ಬಳಿ ಕೇವಲ 2,000 ಕ್ಷಿಪಣಿಗಳಿವೆ. ರಷ್ಯಾ ಉಕ್ರೇನ್ ಯುದ್ಧದಲ್ಲಿ ಬ್ಯುಸಿಯಾಗಿರುವುದರಿಂದ ತನಗೆ ಹೆಚ್ಚಿನ ಸಹಾಯ ಸಿಗೋದಿಲ್ಲ ಎನ್ನುವುದು ಇರಾನ್‌ಗೆ ತಿಳಿದಿದೆ. ಹಾಗಾಗಿ ಕ್ಷಿಪಣಿಗಳನ್ನು ಉಳಿಸಿ, ಕಡಿಮೆ ಖರ್ಚಿನ ಡ್ರೋನ್‌ಗಳ ಮೂಲಕ ಅಮೆರಿಕವನ್ನು ದೀರ್ಘಕಾಲದ ಯುದ್ಧದಲ್ಲಿ ಸಿಲುಕಿಸುವುದು ಇರಾನ್ ತಂತ್ರವಾಗಿದೆ. ರಷ್ಯಾದ ತಾಂತ್ರಿಕ ನೆರವಿನೊಂದಿಗೆ ಇರಾನ್ ಪ್ರತಿ ವರ್ಷ 25,000 ಡ್ರೋನ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ವರ್ಷದ ಜನವರಿ ತಿಂಗಳಲ್ಲೇ 1,000 ಷಾಹೆದ್ ಡ್ರೋನ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Category
ಕರಾವಳಿ ತರಂಗಿಣಿ