image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಓಮನ್ ಹೊರತುಪಡಿಸಿ ಉಳಿದ ಗಲ್ಫ್ ದೇಶಗಳ ಮೇಲೆ ಇರಾನ್ ದಾಳಿ

ಓಮನ್ ಹೊರತುಪಡಿಸಿ ಉಳಿದ ಗಲ್ಫ್ ದೇಶಗಳ ಮೇಲೆ ಇರಾನ್ ದಾಳಿ

ಮಸ್ಕಟ್ : ದುಬೈ, ದೋಹಾ ಇತ್ಯಾದಿ ನಗರಗಳು ಇರಾನ್ ದಾಳಿಗೆ ಒಳಗಾಗಿವೆ. ಬಹ್ರೇನ್, ಸೌದಿ, ಯುಎಇ, ಕತಾರ್ ಮೊದಲಾದ ದೇಶಗಳು ಇರಾನ್ ಪ್ರತಿದಾಳಿಗೆ ಸಿಲುಕಿವೆ. ಅಧ್ಯಕ್ಷ ಆಯತೊಲ್ಲಾ ಖೊಮೇನಿ ಹತ್ಯೆಗೆ ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ಹೊರಟಿದೆ. ಆದರೆ, ಓಮನ್ ಹೊರತುಪಡಿಸಿ ಉಳಿದ ಗಲ್ಫ್ ದೇಶಗಳ ಮೇಲೆ ಇರಾನ್ ದಾಳಿ ಮಾಡಿದೆ. ಅಮೆರಿಕದ ನೆಲೆಗಳಿರುವ ಈ ದೇಶಗಳು ಇರಾನ್​ನ ಮುಯ್ಯಿಗಳ ಪಟ್ಟಿಯಲ್ಲಿವೆ. ಆದರೆ, ಓಮನ್ ಮಾತ್ರ ಇದಕ್ಕೆ ಅಪವಾದ. ಓಮನ್ ಮತ್ತು ಇರಾನ್ ನಡುವೆ ಆಪ್ಯಾಯಮಾನವಾದ ಸಂಬಂಧ ಶುರುವಾಗಿ ಸುಮಾರು ಐದು ದಶಕಗಳು ಗತಿಸಿವೆ. 20ನೇ ಶತಮಾನದ ಇಪ್ಪತರ ದೇಶಕದಲ್ಲಿ ಓಮನ್​ನಲ್ಲಿ ಸುಲ್ತಾನ್ ಖಾಬೂಸ್ ಬಿನ್ ಸಯಿದ್ ಅವರ ಆಡಳಿತ ಇತ್ತು. ಅಂದಿನ ಸೋವಿಯತ್ ರಷ್ಯಾ ಪ್ರೇರಿತ ಮಾರ್ಕ್ಸ್​ವಾದಿ ಹೋರಾಟಗಾರರು ಓಮನ್ ಸುಲ್ತಾನನ ಆಡಳಿತ ವಿರುದ್ದ ದೊಡ್ಡ ದಂಗೆ ಎಬ್ಬಿಸಿದ್ದರು. ಅದನ್ನು ದೋಫರ್ ದಂಗೆ ಎಂದು ಕರೆಯಲಾಗುತ್ತದೆ.

ಆಗ ಇರಾನ್ ದೇಶವು ತನ್ನ ಸೇನೆಯನ್ನು ಕಳುಹಿಸಿ ಓಮನ್ ಸುಲ್ತಾನನಿಗೆ ನೆರವು ಕೊಡುತ್ತದೆ. ಅಂದು ಈ ಎರಡು ದೇಶಗಳ ಮಧ್ಯೆ ಸ್ವಾಭಾವಿಕ ಮಿತ್ರತ್ವ ಏರ್ಪಟ್ಟಿತ್ತು. ಕುತೂಹಲ ಎಂದರೆ ಆಗ ಇರಾನ್​ನಲ್ಲಿ ಆಡಳಿತದಲ್ಲಿದ್ದದ್ದು ಅಮೆರಿಕನ್ ಪರವಾಗಿದ್ದ ಶಾ ಅವರು. ಓಮನ್ ಮೇಲೆ ಸೋವಿಯತ್ ನಿಯಂತ್ರಣ ತಪ್ಪಿಸಲು ಅಮೆರಿಕವು ಇರಾನ್​ನ ಶಾ ಮೂಲಕ ಪರೋಕ್ಷವಾಗಿ ಮಧ್ಯಪ್ರವೇಶಿಸಿತ್ತು. ಮತ್ತೂ ಕುತೂಹಲ ಎಂದರೆ, 1979ರಲ್ಲಿ ಇರಾನ್​ನಲ್ಲಿ ಕ್ರಾಂತಿ ಉಂಟಾಗಿ ಇಸ್ಲಾಮಿಕ್ ಪ್ರಭುತ್ವದ ಸ್ಥಾಪನೆಯಾಯಿತು. ಅಮೆರಿಕದ ನಿಯಂತ್​ರಣದಲ್ಲಿದ್ದ ಹೆಚ್ಚಿನ ಗಲ್ಫ್ ರಾಷ್ಟ್ರಗಳು ಇರಾನ್​ನಿಂದ ದೂರ ಉಳಿದವು. ಆದರೆ, ಓಮನ್ ಮಾತ್ರ ತನ್ನ ಮಿತ್ರತ್ವ ಮುಂದುವರಿಸಿತು. ಆಡಳಿತಗಳು ಬದಲಾದವರೂ ಈ ಮಿತ್ರತ್ವ ಭಾವ ಬದಲಾಗಲಿಲ್ಲ. ಅಮೆರಿಕದ ಒತ್ತಡ ಮತ್ತು ಇರಾನ್ ಹಿತಾಸಕ್ತಿ ಎರಡನ್ನೂ ಓಮನ್ ಸಮತೋಲಿತ ರೀತಿಯಲ್ಲಿ ನಿಭಾಯಿಸಿಕೊಂಡು ಬಂದಿದೆ. ಇರಾನ್ ಮತ್ತು ಪಾಶ್ಚಿಮಾತ್ಯ ಶಕ್ತಿಗಳ ಮಧ್ಯೆ ಓಮನ್ ಸಂಪರ್ಕ ಸೇತುವಾಗಿ ನಿಂತಿದೆ.

ಮೆಡಿಟರೇನಿಯನ್ ಸಮುದ್ರದಲ್ಲಿ ಹಾರ್ಮುಜ್ ಸ್ಟ್ರೇಟ್ ಎನ್ನುವ ಬಹಳ ಮುಖ್ಯವಾದ ಜಲಮಾರ್ಗ ಇದೆ. ಬಹಳ ಕಿರಿದಾದ ಮಾರ್ಗ. ಆದರೆ, ಜಗತ್ತಿನ ವ್ಯಾಪಾರದ ಮುಖ್ಯಪಾಲು ಸರಕುಗಳು ಈ ಮಾರ್ಗದಲ್ಲೇ ಹಡುಗಗಳ ಮೂಲಕ ಸಾಗಣೆ ಆಗುತ್ತವೆ. ಈ ಹಾರ್ಮುಜ್ ಮಾರ್ಗದ ಆ ಬದಿ ಈ ಬದಿಯಲ್ಲಿ ಇರಾನ್, ಓಮನ್, ಯುಎಇ ದೇಶಗಳಿವೆ. ಹೀಗಾಗಿ, ಈ ದೇಶಗಳ ಮಧ್ಯೆ ತಾಳಮೇಳ ಸರಿಯಾಗಿ ಇರಬೇಕಾದ್ದು ಅನಿವಾರ್ಯ. ಅಮೆರಿಕದ ನಿಷೇಧ ಎದುರಿಸುತ್ತಿರುವ ಇರಾನ್ ದೇಶಕ್ಕೆ ತನ್ನ ಸರಕುಗಳನ್ನು ಬೇರೆ ದೇಶಗಳ ಮಾರುಕಟ್ಟೆಗೆ ಕಳುಹಿಸಲು ಓಮನ್ ಅಗತ್ಯ ಇದೆ. ಓಮನ್ ಮುಖಾಂತರ ಅದು ಸರಕುಗಳನ್ನು ಹೊರಕಳುಹಿಸಲು ಅವಕಾಶ ಇದೆ. ಓಮನ್ ವಿಚಾರದಲ್ಲಿ ಮೆಚ್ಚುಗೆಯಾಗುವ ಅಂಶವೆಂದರೆ ಅದರ ವಿದೇಶ ನೀತಿಯದ್ದು. ಇರಾನ್ ಅಥವಾ ಯಾವುದೇ ದೇಶದೊಂದಿಗೆಯಾಗಲೀ ಓಮನ್ ಕದ್ದುಮುಚ್ಚಿ ವ್ಯವಹಾರ ನಡೆಸಿಲ್ಲ. ಶಾಂತಿ ವಾತಾವರಣವೇ ಅದರ ವಿದೇಶಾಂಗ ನೀತಿಯ ಗುರಿ. ಹೀಗಾಗಿ, ಇರಾನ್ ಸೇರಿದಂತೆ ಬಹುತೇಕ ಎಲ್ಲಾ ದೇಶಗಳೊಂದಿಗೆ ಓಮನ್ ಉತ್ತಮ ಸಂಬಂಧ ಇಟ್ಟುಕೊಳ್ಳಲು ಯಶಸ್ವಿಯಾಗಿದೆ.

Category
ಕರಾವಳಿ ತರಂಗಿಣಿ