ಬೊಲಿವಿಯಾ: ಹೊಸದಾಗಿ ಮುದ್ರಿತವಾದ ಕರೆನ್ಸಿ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಬೊಲಿವಿಯನ್ ವಾಯುಪಡೆಯ (Bolivian Air Force) ಸೇನಾ ಸರಕು ವಿಮಾನ (Cargo Plane) ಪತನಗೊಂಡು ಕನಿಷ್ಠ 15 ಜನ ಸಾವನ್ನಪ್ಪಿದ್ದಾರೆ.
ಬೊಲಿವಿಯಾದ ಲಾ ಪಾಜ್ ಸಮೀಪದಲ್ಲಿರುವ ಎಲ್ ಆಲ್ಟೊ ನಗರದಲ್ಲಿ (El Alto City) ವಿಮಾನ ಪತನಗೊಂಡಿದೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಬಳಿಕ ವಿಮಾನವು ನೇರವಾಗಿ ಹೆದ್ದಾರಿಯ ಮೇಲೆ ಅಪ್ಪಳಿಸಿದೆ. ಇದೇ ಸಮಯ ರಸ್ತೆಯಲ್ಲಿದ್ದ ನೂರಾರು ವಾಹನಗಳು ನಜ್ಜುಗುಜ್ಜಾಗಿ ಬೆಂಕಿ ಕೂಡ ಹೊತ್ತಿಕೊಂಡಿವೆ
ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ಅವರ ಪ್ರಕಾರ, ಈ ಭೀಕರ ದುರಂತದಲ್ಲಿ 15 ಮಂದಿ ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಅಪಘಾತದ ಸಮಯದಲ್ಲಿ ಮೃತರು ವಿಮಾನದಲ್ಲಿದ್ದರೋ ಅಥವಾ ಅಪಘಾತಕ್ಕೀಡಾದ ವಾಹನಗಳಲ್ಲಿದರೋ ಅನ್ನೋದು ಇನ್ನೂ ತಿಳಿದುಬಂದಿಲ್ಲ.