ವಾಷಿಂಗ್ಟನ್ : ಅಮೆರಿಕ ಸಂಸತ್ತಿನ ಅನುಮತಿಯಿಲ್ಲದೇ ಸುಂಕ ಜಾರಿ ಮಾಡುವ ಅಧಿಕಾರ ಅಧ್ಯಕ್ಷ ಟ್ರಂಪ್ ಅವರಿಗಿಲ್ಲ ಎಂದು ಭಾರತೀಯ ಮೂಲದ ಅಮೆರಿಕನ್ ವಕೀಲ ನೀಲ್ ಕತ್ಯಾಲ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದೇ, ಸುಂಕವನ್ನು ಮತ್ತೆ ಶೇ.15ರಷ್ಟು ಏರಿಕೆ ಮಾಡಿರುವ ಟ್ರಂಪ್ ಕ್ರಮವನ್ನು ಟೀಕಿಸಿ ನೀಲ್ ಟ್ವೀಟ್ ಮಾಡಿದ್ದಾರೆ. 'ಸುಂಕದಿಂದ ಅಮೆರಿಕಕ್ಕೆ ಒಳಿತಾಗುವುದಿದ್ದರೆ ಟ್ರಂಪ್ ಅದನ್ನು ಸಂಸತ್ತಿನ ಬಳಿ ಕೊಂಡೊಯ್ಯಬೇಕಿತ್ತು. ಸಂವಿಧಾನದ ನಿಯಮದಂತೆ ಅದನ್ನು ಜಾರಿ ಮಾಡಬೇಕಿತ್ತು. ಸೆ.122ರಡಿಯ ತುರ್ತು ಪರಿಸ್ಥಿತಿ ಇಲ್ಲಿ ಅನ್ವಯಿಸುವುದಿಲ್ಲ. 150 ದಿನಗಳ ಬಳಿಕ ಅದು ರದ್ದಾಗಲಿದೆ' ಎಂದು ನೀಲ್ ಟ್ವೀಟ್ ಮಾಡಿದ್ದಾರೆ. ಟ್ರಂಪ್ ಸುಂಕದ ವಿರುದ್ಧ ನೀಲ್ ಅಲ್ಲಿನ ಕೋರ್ಟ್‌ನಲ್ಲಿ ಈ ಹಿಂದೆ ವಾದ ಮಂಡಿಸಿದ್ದರು.