image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಹೋಟೆಲ್ ಬಿಲ್ ಪಾವತಿಸಲು ವಿಫಲವಾದ ಕಾರಣ ಪಾತ್ರೆ ತೊಳೆದ ಪಾಕಿಸ್ತಾನದ ಹಾಕಿ ಆಟಗಾರರು : ಪಾಕಿಸ್ತಾನ ಹಾಕಿ ಫೆಡರೇಶನ್ ವಿರುದ್ಧ ತೀವ್ರ ಆಕ್ರೋಶ

ಹೋಟೆಲ್ ಬಿಲ್ ಪಾವತಿಸಲು ವಿಫಲವಾದ ಕಾರಣ ಪಾತ್ರೆ ತೊಳೆದ ಪಾಕಿಸ್ತಾನದ ಹಾಕಿ ಆಟಗಾರರು : ಪಾಕಿಸ್ತಾನ ಹಾಕಿ ಫೆಡರೇಶನ್ ವಿರುದ್ಧ ತೀವ್ರ ಆಕ್ರೋಶ

ಆಸ್ಟ್ರೇಲಿಯಾ : ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಕಿಸ್ತಾನದ ಹಾಕಿ ಆಟಗಾರರು ಹೋಟೆಲ್ ಬಿಲ್ ಪಾವತಿಸಲು ವಿಫಲವಾದ ಕಾರಣ ಪಾತ್ರೆ ತೊಳೆಯುವಂತಹ ಹೀನಾಯ ಸ್ಥಿತಿಯನ್ನು ಎದುರಿಸಿದ್ದಾರೆ. ಈ ಅವಮಾನಕಾರಿ ಘಟನೆಯಿಂದಾಗಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್, ರಾಷ್ಟ್ರೀಯ ಹಾಕಿ ಫೆಡರೇಶನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನದ ಹಾಕಿ ಆಟಗಾರರು ಹೋಟೆಲ್‌ ಬಿಲ್‌ ಪಾವತಿ ಮಾಡಲು ವಿಫಲವಾಗಿದ್ದರಿಂದ ಹೋಟೆಲ್‌ನ ಕಿಚ್‌ ಹಾಗೂ ಪಾತ್ರೆಗಳನ್ನು ತೊಳೆದಿದ್ದಾರೆ ಎಂದು ವರದಿಯಾಗಿದೆ. ಈ ಭಯಾನಕ ಅನುಭವದ ನಂತರ ಪಾಕಿಸ್ತಾನ ಹಾಕಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್ ರಾಷ್ಟ್ರೀಯ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಆದ ಅತ್ಯಂತ ಕೆಟ್ಟ ಅನುಭವದ ಬಳಿಕ ಬುಧವಾರ ಮುಂಜಾನೆ ಲಾಹೋರ್‌ ವಿಮಾನ ನಿಲ್ದಾಣಕ್ಕೆ ಹಾಕಿ ತಂಡ ವಾಪಸಾಯಿತು. ಇದರ ಬೆನ್ನಲ್ಲಿಯೇ ಬಟ್‌, ರಾಷ್ಟ್ರೀಯ ಒಕ್ಕೂಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಆಟಗಾರರು ಈಗ ಇರುವ ಮ್ಯಾನೇಜ್‌ಮೆಂಟ್‌ನ ಅಡಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

"ಫೆಡರೇಶನ್‌ನ ಈಗಿನ ಮ್ಯಾನೇಜ್‌ಮೆಂಟ್‌ನೊಂದಿಗೆ ನಾವು ಕೆಲಸ ಮಾಡಲು ಸಾಧ್ಯವಿಲ್ಲ" ಎಂದು ಬಟ್ ತಿಳಿಸಿದ್ದಾರೆ. ಪಂದ್ಯ ಆಡುವ ಮುನ್ನ ನಮ್ಮ ಆಟಗಾರರು ಹೋಟೆಲ್‌ನ ಕಿಚ್‌ ಕ್ಲೀನ್‌ ಮಾಡಬೇಕಿತ್ತು. ಅಲ್ಲಿನ ಪಾತ್ರೆ ತೊಳೆಯಬೇಕಿತ್ತು. ಇಂಥ ತಂಡದಿಂದ ನಾವೇನು ನಿರೀಕ್ಷೆ ಮಾಡಲು ಸಾಧ್ಯ' ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಪಾಕಿಸ್ತಾನ ತಂಡವು ಆರಂಭದಲ್ಲಿ 12-13 ಗಂಟೆಗಳ ಕಾಲ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿತ್ತು ನಂತರ ಕ್ಯಾನ್‌ಬೆರಾಗೆ ಪ್ರಯಾಣಿಸಿತು. ನಗರವನ್ನು ತಲುಪಿದ ನಂತರ, ಅಲ್ಲಿನ ಹೋಟೆಲ್‌ ಬುಕ್ಕಿಂಗ್‌ ಕ್ಯಾನ್ಸಲ್‌ ಆಗಿತ್ತು. ಬಿಲ್‌ಗಳನ್ನು ಪಾವತಿ ಮಾಡದ ಕಾರಣ ಅವರಿಗೆ ಹೋಟೆಲ್‌ ರೂಮ್‌ ಸಿಕ್ಕಿರಲಿಲ್ಲ. ಇದರಿಂದಾಗಿ ಅವರು ತಮ್ಮ ಲಗೇಜ್‌ಗಳೊಂದಿಗೆ ರಸ್ತೆಯಲ್ಲಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಗಂಟೆಗಳ ಕಾಲ ರಸ್ತೆಯಲ್ಲಿ ಕಳೆದ ಬಳಿಕ Airbnbಯಲ್ಲಿ 13 ದಿನಗಳ ಟ್ರಿಪ್‌ಗೆ ಕೇವಲ 10 ದಿನಕ್ಕೆ ಅವರಿಗೆ ಬುಕ್ಕಿಂಗ್‌ ನೀಡಲಾಗಿತ್ತು. 10 ದಿನ ಬಳಿಕ, ಅವರನ್ನು ಇನ್ನಷ್ಟು ಕಳಪೆ ಹೋಟೆಲ್‌ಗೆ ಶಿಫ್ಟ್‌ ಮಾಡಲಾಯಿತು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ ಹಾಗೂ ಜರ್ಮನಿ ವಿರುದ್ಧದ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿತು.

Category
ಕರಾವಳಿ ತರಂಗಿಣಿ