ನವದೆಹಲಿ : ಭಾರತ ಮತ್ತು ಅಮೆರಿಕ ಮಧ್ಯೆ ವ್ಯಾಪಾರ ಒಪ್ಪಂದದ ಸುಳಿವು ಸಿಕ್ಕಿದೆ. ನಿನ್ನೆ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಫೋನಿನಲ್ಲಿ ಸಂಭಾಷಣೆ ನಡೆಸಿದ್ದಾರೆ. ಇದರಿಂದಾಗಿ ಇಬ್ಬರ ನಡುವಿನ ಸಂಬಂಧ ಬಲವಾಗಿದ್ದು, ಭಾರತದ ಮೇಲಿನ ಸುಂಕವನ್ನು ಕೂಡ ಕಡಿತಗೊಳಿಸಿದೆ. ಇದರಿಂದ ಪಾಕಿಸ್ತಾನದಲ್ಲಿ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಭಾರೀ ಅಲ್ಲೋಲ ಕಲ್ಲೋಲ ಉಂಟಾಗಿದೆ. ಭಾರತ ಮತ್ತು ಅಮೆರಿಕ ಡೀಲ್ ನಂತರ ಪಾಕಿಸ್ತಾನದ ಜನತೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಟ್ರೋಲ್‌ಗಳು ಹರಿದಾಡುತ್ತಿದ್ದು, ದೇಶದ ಆರ್ಥಿಕತೆ, ರಕ್ಷಣೆ ಮತ್ತು ಗೌರವದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದೂರವಾಣಿ ಸಂಭಾಷಣೆಯ ನಂತರ, ಅಮೆರಿಕ ಅಧ್ಯಕ್ಷ ಟ್ರಂಪ್ ಸ್ವತಃ ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ಭಾರತವು ಈಗ ಶೇ.50 ರಷ್ಟು ಸುಂಕಕ್ಕೆ ಒಳಪಡುವುದಿಲ್ಲ, ಶೇ.18 ರಷ್ಟು ಸುಂಕಕ್ಕೆ ಒಳಪಡುತ್ತದೆ ಎಂದು ಅವರು ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದ್ದಾರೆ. ಸುಂಕ ಕಡಿತಕ್ಕೆ ಟ್ರಂಪ್‌ಗೆ ಧನ್ಯವಾದ ಹೇಳಿ ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಅಮೆರಿಕ ಪಾಕಿಸ್ತಾನ ವ್ಯಾಪಾರ ಒಪ್ಪಂದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಅಲ್ಲೋಕ ಕಲ್ಲೋಲವೇ ಸೃಷ್ಟಿಯಾಗಿದೆ. ಪಾಕಿಸ್ತಾನ ಫೌಜಿ ಫೌಂಡೇಶನ್‌ನ ಷೇರುಗಳನ್ನೂ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿದೆ. ಫೌಜಿ ಫೌಂಡೇಶನ್ ಪಾಕಿಸ್ತಾನದ ಸೇನೆಗೆ ಸಂಬಂಧಿಸಿದ ದೊಡ್ಡ ಸಂಸ್ಥೆಯಾಗಿದ್ದು, ಇದು ದೇಶದ ಆರ್ಥಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಮಾರಾಟದ ಮೂಲಕ ಪಾಕಿಸ್ತಾನದ ಗೌರವ ಮತ್ತು ಘನತೆಯನ್ನು ಕಳೆದುಕೊಂಡಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಈ ಸುದ್ದಿ ದೇಶದಾದ್ಯಂತ ಹರಡಿ, ಸರ್ಕಾರ ಮತ್ತು ಸೇನೆಯ ವಿರುದ್ಧ ಅಸಮಾಧಾನ ಹೆಚ್ಚಿಸಿದೆ.
ಡೊನಾಲ್ಡ್ ಟ್ರಂಪ್ ಈ ಡೀಲ್‌ನಲ್ಲಿ ಅದ್ಭುತ ಆಟ ಆಡಿದ್ದಾರೆ ಎನ್ನಲಾಗುತ್ತದೆ. ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು 'ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್' ಎಂದು ಕರೆದು, ಅವರನ್ನು ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. "ಡೊನಾಲ್ಡ್ ಟ್ರಂಪ್ ಅಸಿಮ್ ಮುನೀರ್ ಅವರನ್ನು ಬಿದಿರಿನ ಮೇಲೆ ಹತ್ತಿಸಿ ನೇರವಾಗಿ ಗಾಜಾಗೆ ಎಸೆದರು" ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಟ್ರಂಪ್ ಅವರು ಮುಚ್ಚಿದ ಕೋಣೆಯಲ್ಲಿ ಮಾತನಾಡಿದ್ದನ್ನು ಪ್ರಪಂಚದ ಮುಂದೆ ಮೈಕ್‌ನಲ್ಲಿ ಹೇಳಬಲ್ಲಿರಾ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಮುನೀರ್ ಅವರು ಮೂರ್ಖರಂತೆ ಕಾಣಿಸಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಇದೇ ರೀತಿ ಪ್ರಧಾನಿ ಶೆಹಬಾಜ್ ಷರೀಫ್ ನನ್ನೂ ಈ ಶತಮಾನದ ಅತಿದೊಡ್ಡ ಮೂರ್ಖ ಎಂದು ಕರೆಯಲಾಗುತ್ತಿದೆ. ಅವರು ಈ ಡೀಲ್‌ನಲ್ಲಿ ಪಾಕಿಸ್ತಾನದ ಹಿತಾಸಕ್ತಿಗಳನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಬಾಯಿಗೆ ಬಂದಂತೆ ಟ್ರೋಲ್ ಮಾಡುತ್ತಿದ್ದಾರೆ. ಉದಾಹರಣೆಗೆ, "ಪಾಕಿಸ್ತಾನ ತನ್ನ ಖನಿಜಗಳು ಮತ್ತು ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿ, ದೇಶದ ಗೌರವವನ್ನು ಕಳೆದುಕೊಂಡಿದೆ" ಎಂಬ ಮೀಮ್‌ಗಳು ಹರಿದಾಡುತ್ತಿವೆ. ಇದು ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.