image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ನ್ಯೂ ಗಿನಿಯಾ ದೇಶದ ಹಳೆಯ ಚಿನ್ನದ ಗಣಿಯೊಂದರಲ್ಲಿ ವಿಶೇಷವಾದ ಕಡು ಕಪ್ಪು ಬಣ್ಣದ ಹಾವು ಪತ್ತೆ!

ನ್ಯೂ ಗಿನಿಯಾ ದೇಶದ ಹಳೆಯ ಚಿನ್ನದ ಗಣಿಯೊಂದರಲ್ಲಿ ವಿಶೇಷವಾದ ಕಡು ಕಪ್ಪು ಬಣ್ಣದ ಹಾವು ಪತ್ತೆ!

ನ್ಯೂಗಿನಿಯಾ : ವಿಶ್ವದಲ್ಲೇ ಅತೀ ದೊಡ್ಡ ಚಿನ್ನದ ಗಣಿಯಾಗಿ ಗುರುತಿಸಿಕೊಂಡಿದ್ದ ಪಪುಪಾ ನ್ಯೂ ಗಿನಿಯಾ ದೇಶದ ಹಳೆಯ ಚಿನ್ನದ ಗಣಿಯೊಂದರಲ್ಲಿ  ಕಡು ಕಪ್ಪು ಬಣ್ಣದ ಹಾವು ಪತ್ತೆಯಾಗಿದೆ. ಇದೇ ಮೊದಲ ಬಾರಿಗೆ ಪತ್ತೆಯಾದ ಅಪರೂಪದ ಈ ಜೀವಿಗೆ ಡೆಂಡ್ರೆಲಾಫಿಸ್ ಅಟ್ರಾ ಎಂದು ಹೆಸರಿಟ್ಟಿದ್ದಾರೆ. ಪಪುವಾ ನ್ಯೂಗಿನಿಯಾ ದೇಶದಲ್ಲಿ ಮಿಲೆನ್ ಬೇ ಪ್ರಾಂತ್ಯದ ಬಳಿಯಾ ಮಿಸಿಮಾ ಅನ್ನೋ ದ್ವೀಪದಲ್ಲಿ 2004ರ ವರೆಗೆ ಚಿನ್ನದ ಗಣಿ ಕಾರ್ಯನಿರ್ವಹಿಸಿತ್ತು. ವಿಶ್ವದ ಅತೀ ದೊಡ್ಡ ಚಿನ್ನದ ಗಣಿಗಳಲ್ಲಿ ಇದು ಒಂದಾಗಿತ್ತು. ಆದರೆ 2004ರಲ್ಲಿ ಈ ಗಣಿಯನ್ನು ಮುಚ್ಚಲಾಗಿತ್ತು. ಇದೀಗ ಈ ಪ್ರದೇಶಗಳಲ್ಲಿ ಪೊದೆಗಲು, ಕಾಡುಗಳು ಬಳೆದಿದೆ. ಇಲ್ಲಿ ಈ ಹೊಸ ಹಾವಿನ ಪ್ರಭೇದದ ಜೀವಿ ಪತ್ತೆಯಾಗಿದೆ.

ಇದು ಹೊಸ ತಳಿಯ ಹಾವು. ಕಡು ಕಪ್ಪು ಬಣ್ಣದಿಂದ ಕೂಡಿರುತ್ತದೆ. ತಲೆಯಿಂದ ಬಾಲದವರೆಗೆ ಸಂಪೂರ್ಣ ಕಪ್ಪು ಬಣ್ಣದಿಂದ ಕೂಡಿದೆ. ಇದರ ಕಣ್ಣುಗಳು ಕೂಡ ಕಪ್ಪು ಬಣ್ಣದಿಂದ ಕೂಡಿದ್ದು, ಪ್ರಕಾಶಮಾನವಾಗಿ ಹೊಳೆಯುತ್ತದೆ. ಗಾತ್ರದಲ್ಲಿ ದೊಡ್ಡದಿದೆ ಎಂದು ವಿಜ್ಞಾನಿಗಳು ಹೊಸ ಹಾವಿನ ಕುರಿತು ವಿವರಣೆ ನೀಡಿದ್ದಾರೆ. ಈ ಹಾವುಗಳು ಪಾಳು ಬಿದ್ದ ಪ್ರದೇಶ ಹಾಗೂ ದಟ್ಟ ಕಾಡುಗಳಲ್ಲಿ ಬದುಕ ಬಲ್ಲದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಹಾವುಗಳು ವಿಷಕಾರಿಯಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಈ ಕುರಿತು ಮಿಚಿಗನ್ ವಿಶ್ವವಿದ್ಯಾಲಯದ ವಿಜ್ಞಾನಿ ಫ್ರೆಡ್ ಕ್ರೌಸ್ ಸಂಶೋಧನೆ ನಡೆಸಿದ್ದಾರೆ. ಇದೇ ವೇಳೆ ಇದೇ ಪ್ರದೇಶದಲ್ಲಿ ನಾಲ್ಕಕ್ಕೂ ಹೆಚ್ಚು ಹೊಸ ಪ್ರಬೇಧದ ಮರ ಹಾವುಗಳಿವೆ ಎಂದಿದ್ದಾರೆ.

Category
ಕರಾವಳಿ ತರಂಗಿಣಿ