image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕಾದ ನೌಕಾಪಡೆಯು ಇರಾನ್ ಗಡಿಯತ್ತ ನುಗ್ಗುತ್ತಿದೆ : ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕಾದ ನೌಕಾಪಡೆಯು ಇರಾನ್ ಗಡಿಯತ್ತ ನುಗ್ಗುತ್ತಿದೆ : ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೇರಿಕ : ಇರಾನ್'ನಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಸಂಪದ್ಬರಿತ ತೈಲ ದೇಶವಾಗಿದ್ದರೂ, ಆರ್ಥಿಕ ಸಂಕಷ್ಟ ಜನರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಯುದ್ದದ ಕಾರ್ಮೋಡದಿಂದಾಗಿ, ಜನರು ಭಯಭೀತಿಯಿಂದ ಬದುಕುತ್ತಿದ್ದಾರೆ. ಅಮೆರಿಕಾದ ನೌಕಾಪಡೆಯು, ಇರಾನ್ ಗಡಿಯತ್ತ ನುಗ್ಗುತ್ತಿದೆ ಎನ್ನುವ ಮಾಹಿತಿಯನ್ನು ಖುದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನಮ್ಮ ನೌಕಾಪಡೆ ಇರಾನ್ ನತ್ತ ಸಾಗುತ್ತಿದೆ, ಅದನ್ನು ನಾವು ಬಳಸುವ ಅನಿವಾರ್ಯತೆಯನ್ನು ಇರಾನ್ ತರುವುದಿಲ್ಲ ಎನ್ನುವುದು ನಮ್ಮ ನಂಬಿಕೆ. ಆದರೆ, ನಮ್ಮ ಹಿತಾಶಕ್ತಿಗೆ ತೊಂದರೆ ಬಂದರೆ ಸುಮ್ಮನಿರುವುದಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇನ್ನೊಂದು ಕಡೆ, ಅಮೆರಿಕಾದ ನೌಕಾಪಡೆ, ಏಷ್ಯಾದಿಂದ ಮಧ್ಯಪ್ರಾಚ್ಯದತ್ತ ದಿಕ್ಕು ಬದಲಾಯಿಸಿದೆ ಎಂದು ವರದಿಯಾಗಿದೆ. ಅಮೆರಿಕಾದ ನೌಕಾಪಡೆ ಇರಾನ್ ಗಡಿಯತ್ತ ಬರುತ್ತಿರುವ ವಿದ್ಯಮಾನಕ್ಕೆ ಪ್ರತಿಕ್ರಿಯಿಸಿರುವ ಇರಾನ್'ನ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕೋರ್ ಕಮಾಂಡರ್ ಪ್ರತಿಕ್ರಿಯಿಸಿ, ನಮ್ಮ ದೇಶದ ಮೇಲೆ ಅಮೆರಿಕಾ ದಾಳಿ ನಡೆಸಿದ್ದೇ ಆದಲ್ಲಿ ಅದನ್ನು ಪೂರ್ಣ ಪ್ರಮಾಣದ ಯುದ್ದ ಎಂದು ಘೋಷಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.

ಮೂಲಗಳ ಪ್ರಕಾರ, ಅಮೆರಿಕಾದ ಅತ್ಯಂತ ಪ್ರಬಲ ವಿಮಾನವಾಹಕ ಮೌಕೆ 'ಯುಎಸ್‌ಎಸ್ ಅಬ್ರಹಾಂ ಲಿಂಕನ್' ಮತ್ತು ಅದರ ಸ್ಟ್ರೈಕ್ ಗ್ರೂಪ್'ಗಳು ಏಷ್ಯಾದಿಂದ ಮಧ್ಯಪ್ರಾಚ್ಯದತ್ತ ತನ್ನ ದಿಕ್ಕನ್ನು ಬದಲಾಯಿಸಿದೆ. ಹಿಂದೂ ಮಹಾಸಾಗರದ ಮೂಲಕ, ಈ ನೌಕೆಗಳು ಇರಾನ್ ಗಡಿಯತ್ತ ಸಾಗುತ್ತಿದೆ ಎಂದು ವರದಿಯಾಗಿದೆ. ಸಮುದ್ರದಲ್ಲಿ ಚಲಿಸುವ ಏರ್ಪೋರ್ಟ್ ಎಂದೇ ಹೆಸರಾಗಿರುವ ಅಬ್ರಹಾಂ ಲಿಂಕನ್ ನೌಕೆ, ಏಕಕಾಲಕ್ಕೆ ಸುಮಾರು ತೊಂಬತ್ತು ಯುದ್ದ ವಿಮಾನಗಳು ಮತ್ತು ಹೆಲಿಕಾಪ್ಟರ್'ಗಳನ್ನು ನಿಲ್ಲಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ, ಡೀಸೆಲ್ ಅಥವಾ ಪೆಟ್ರೋಲ್ ಬಳಸದೇ, ಪರಮಾಣು ರಿಯಾಕ್ಟರ್ ಮೂಲಕ ಚಲಿಸುವ ನೌಕೆ ಇದಾಗಿದೆ. ಅಬ್ರಹಾಂ ಲಿಂಕನ್ ನೌಕೆಯ ಮೇಲೆ ಶತ್ರು ರಾಷ್ಟ್ರಗಳು ಕ್ಷಿಪಣಿ ದಾಳಿ ನಡೆಸಿದರೆ, ಆಗಸದಲ್ಲೇ ಹೊಡೆದುರುಳಿಸುವ ಕ್ಷಿಪಣಿ ರಕ್ಷಣಾ ಸ್ವಯಂಚಾಲಿತ ಸುಧಾರಿತ ವ್ಯವಸ್ಥೆಯನ್ನು ಈ ನೌಕೆ ಹೊಂದಿದೆ. ಅತ್ಯಂತ ಪ್ರಮುಖವಾದ ಘಟ್ಟದಲ್ಲಿ ಮಾತ್ರ ಅಮೆರಿಕಾದ ರಕ್ಷಣಾ ಇಲಾಖೆ, ಈ ನೌಕೆಯನ್ನು ಬಳಸಿಕೊಳ್ಳುತ್ತದೆ. ಇರಾನ್ ನಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನುವುದು ಒಂದು ಕಡೆ. ಇನ್ನೊಂದು ಕಡೆ ಅಣ್ವಸ್ತ್ರ ಚಟುವಟಿಕೆಯನ್ನು ಇರಾನ್ ಸರ್ಕಾರ ನಡೆಸುತ್ತಿದೆ ಎನ್ನುವ ಮಾಹಿತಿಯಂತೆ, ಅಮೆರಿಕಾದ ನೌಕಾಪಡೆ, ಇರಾನ್ ಕರಾವಳಿಯ ಮುನ್ನುಗ್ಗುತ್ತಿದೆ ಎಂದು ವರದಿಯಾಗಿದೆ. ಇದನ್ನು, ಖುದ್ದು ಟ್ರಂಪ್ ಖಚಿತ ಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ