ಟೆಹ್ರಾನ್: ಯುದ್ಧ ನೌಕೆ ಬರುತ್ತಿದೆ ಎಂದು ಬೆದರಿಕೆ ಹಾಕಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾನ್ ತಿರುಗೇಟು ನೀಡಿದ್ದು, ಒಂದೇ ಒಂದು ದಾಳಿಯಾದರೂ ಯುದ್ಧವೆಂದು ಪರಿಗಣಿಸುತ್ತೇವೆಂದು ಎಚ್ಚರಿಕೆ ನೀಡಿದೆ. ಮಾಧ್ಯಮ ಸಂದರ್ಶನದಲ್ಲಿ ಇರಾನ್ ಸೈನ್ಯದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಈ ಬಾರಿ ಯಾವುದೇ ದಾಳಿ ನಡೆದರೂ, ನಾವು ಅದನ್ನು ಸಂಪೂರ್ಣ ಯುದ್ಧವೆಂದು ಪರಿಗಣಿಸಿ ಅತ್ಯಂತ ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ. ಹಿಂಸಾಚಾರ ಪೀಡಿತ ಮಧ್ಯಪ್ರಾಚ್ಯ ದೇಶದ ಕಡೆಗೆ ಅಮೆರಿಕಾದ ಯುದ್ಧನೌಕೆಗಳ ದೊಡ್ಡ ಪಡೆ ಸಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ಎಚ್ಚರಿಕೆ ನೀಡಿದೆ. ನಿರಂತರ ಮಿಲಿಟರಿ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಅಯತೊಲ್ಲಾ ಖಮೇನಿ ಆಡಳಿತವು "ತನ್ನ ಬಳಿ ಇರುವ ಎಲ್ಲಾಕ ಬಲವನ್ನೂ" ಬಳಸುವುದನ್ನು ಖಚಿತಪಡಿಸುತ್ತದೆ ಎಂದು ಇರಾನ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಬಾರಿ, ನಾವು ಯಾವುದೇ ದಾಳಿಯನ್ನು - ಸೀಮಿತ, ಅನಿಯಮಿತ, ಶಸ್ತ್ರಚಿಕಿತ್ಸಾ, ಚಲನಶೀಲ, ಅವರು ಅದನ್ನು ಏನೇ ಕರೆದರೂ ನಮ್ಮ ವಿರುದ್ಧದ ಸಂಪೂರ್ಣ ಯುದ್ಧವೆಂದು ಪರಿಗಣಿಸುತ್ತೇವೆ. ಇದನ್ನು ಪರಿಹರಿಸಲು ನಾವು ಸಾಧ್ಯವಾದಷ್ಟು ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆಂದು ತಿಳಿಸಿದ್ದಾರೆ, ನಿನ್ನೆಯಷ್ಟೇ ಇರಾನ್'ಗೆ ಎಚ್ಚರಿಕೆ ಕೊಟ್ಟಿದ್ದ ಟ್ರಂಪ್ ಅವರು, ನಮ್ಮ ದೊಡ್ಡ ಪಡೆಗಳು ಇರಾನ್ ಕಡೆ ಹೋಗುತ್ತಿವೆ. ಇರಾನ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ, "ಬಹುಶಃ ನಾವು ಇವುಗಳನ್ನು ಬಳಸಬೇಕಾಗುವುದಿಲ್ಲ' ಎಂದೂ ಹೇಳುವ ಮೂಲಕ ಇರಾನ್ ಆಡಳಿತಕ್ಕೆ ತಾನು ಹೇಳಿದ ಮಾತು ಕೇಳುವಂತೆ ಸಂದೇಶ ರವಾನಿಸಿದ್ದರು. 'ನಾವು ಇರಾನ್ ಅನ್ನು ಗಮನಿ ಸುತ್ತಿದ್ದೇವೆ. ಆ ದಿಕ್ಕಿನಲ್ಲಿ ನಮ್ಮ ಬಹಳಷ್ಟು ಹಡಗುಗಳು ಹೋಗುತ್ತಿವೆ. ಆ ಕಡೆ ನಮ್ಮ ದೊಡ್ಡ ಪಡೆಯೇ ಹೋಗುತ್ತಿದೆ. ಏನೂ ಆಗುವುದು ಬೇಡ ಎಂದು ನಾನು ಬಯುಸುತ್ತೇನೆಂದು ಹೇಳಿದ್ದರು.