image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ರಷ್ಯಾದ ಕಾಮ್ಚಾಟ್ಕಾಪರ್ಯಾಯ ದ್ವೀಪದಲ್ಲಿ ಕಟ್ಟಡವೇ ಕಾಣದಷ್ಟು ಹಿಮಪಾತ

ರಷ್ಯಾದ ಕಾಮ್ಚಾಟ್ಕಾಪರ್ಯಾಯ ದ್ವೀಪದಲ್ಲಿ ಕಟ್ಟಡವೇ ಕಾಣದಷ್ಟು ಹಿಮಪಾತ

ಮಾಸ್ಕೋ : ರಷ್ಯಾದ ಕಾಮ್ಚಾಟ್ಕಾಪರ್ಯಾಯ ದ್ವೀಪದಲ್ಲಿ ಕಟ್ಟಡವೇ ಕಾಣದಷ್ಟು ಎತ್ತರಕ್ಕೆ ಹಿಮ ಬೀಳುತ್ತಿದೆ.. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆ, ಮನೆಗಳು ಮತ್ತು ವಾಹನಗಳು ದಟ್ಟ ಹಿಮಪಾತದಿಂದ ಮುಚ್ಚಿಹೋಗಿವೆ. ರಸ್ತೆಗಳು, ಮನೆಗಳು ಮತ್ತು ವಾಹನಗಳು ಕಾಣದಷ್ಟು ಎತ್ತರ ಹಿಮ ಬಿದ್ದಿದೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಹಿಮಪಾತವಾಗುತ್ತಿದರೂ, ಈ ಬಾರಿ ಹಿಮದ ಪ್ರಮಾಣ ಅಪರೂಪದ ಮಟ್ಟದಲ್ಲಿದೆ. ಮಾಸ್ಕೋ ಟೈಮ್ಸ್ ಪ್ರಕಾರ, ರಷ್ಯಾದ ಪೂರ್ವ ಭಾಗದಲ್ಲಿ ಹಿಮದಲ್ಲಿ ಸಿಲುಕಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ರಷ್ಯಾದ ಕಮ್ಚಟ್ಕಾದಲ್ಲಿ ಚಳಿಗಾಲದ ಚಂಡಮಾರುತ ಅಪ್ಪಳಿಸಿ ದಾಖಲೆಯ ಹಿಮ ಬಿದ್ದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕಮ್ಚಟ್ಕಾದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಸಾರಿಗೆ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ವಜ್ರಗಣಿಗೆ ಹೆಸರಾದ, ಸುಮಾರು 10 ಲಕ್ಷ ಜನರನ್ನೊಳಗೊಂಡ ಯಾಕುಟಿಯಾದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಜನರು ಇಡೀ ದೇಹವನ್ನು ದಪ್ಪನೆಯ ತುಪ್ಪಳದ ಬಟ್ಟೆಗಳಿಂದ ಬೆಚ್ಚಗಿರಿಸಿಕೊಳ್ಳುವ ಯತ್ನದಲ್ಲಿದ್ದರೂ, ಹೊರಗುಳಿದ ಕಣ್ಣುಗಳ ರೆಪ್ಪೆಗಳೂ ಮಂಜುಗಡ್ಡೆಯಿಂದ ಫ್ರೀಜ್‌ ಆಗುತ್ತಿವೆ. ಆಹಾರ ಪದಾರ್ಥಗಳೂ ಗಟ್ಟಿ ಐಸ್‌ನಂತಾಗುತ್ತಿರುವುದರಿಂದ ಇಲ್ಲಿನ ಜನರು ಕುದುರೆ ರಕ್ತ ಮತ್ತಿತರೆ ದ್ರವಾಹಾರಗಳನ್ನು ಐಸ್‌ ರೂಪದಲ್ಲಿ ಸೇವಿಸುತ್ತಿದ್ದಾರೆ. ಬೆಂಕಿ ಹಚ್ಚಲಾಗದ್ದರಿಂದ ಹಸಿಮಾಂಸಗಳನ್ನೇ ತಿಂದು ಬದುಕುತ್ತಿದ್ದಾರೆ. ರಷ್ಯಾದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬಹುಮಹಡಿ ಅಪಾರ್ಟ್‌ಮೆಂಟ್‌ಗಳ ಎರಡನೇ ಮಹಡಿಗೆ ತಲುಪುವಷ್ಟು ಹಿಮ ಬಿದ್ದಿದೆ. ವಾಹನಗಳು ಹಿಮದ ಕೆಳಗೆ ಸಂಪೂರ್ಣವಾಗಿ ಹೂತುಹೋಗಿರುವುದು ಕಂಡುಬಂದಿದೆ.

Category
ಕರಾವಳಿ ತರಂಗಿಣಿ