image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

150 ವರ್ಷಗಳ ಬಳಿಕ ತನ್ನ ಮೊದಲ ರಾಣಿಯನ್ನು ಸ್ವಾಗತಿಸಲು ಸಜ್ಜಾದ ಸ್ಪೇನ್ ದೇಶ

150 ವರ್ಷಗಳ ಬಳಿಕ ತನ್ನ ಮೊದಲ ರಾಣಿಯನ್ನು ಸ್ವಾಗತಿಸಲು ಸಜ್ಜಾದ ಸ್ಪೇನ್ ದೇಶ

ಸ್ಪೇನ್: ಸ್ಪೇನ್ ರಾಜಮನೆತನದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುತ್ತಿದ್ದು, 19ನೇ ಶತಮಾನದ ರಾಣಿ ಇಸಾಬೆಲ್ಲಾ II ಮರಣದ ನಂತರ ಸುಮಾರು 150 ವರ್ಷಗಳ ಬಳಿಕ ಸ್ಪೇನ್ ದೇಶವು ತನ್ನ ಮೊದಲ ರಾಣಿಯನ್ನು ಸ್ವಾಗತಿಸಲು ಸಜ್ಜಾಗಿದೆ. ಕಿಂಗ್ ಫೆಲಿಪೆ VI ಮತ್ತು ರಾಣಿ ಲೆಟಿಜಿಯಾ ದಂಪತಿಯ 20 ವರ್ಷದ ಮಗಳು ರಾಜಕುಮಾರಿ ಲಿಯೊನರ್ ಇನ್ನು ಮುಂದೆ ಆಡಳಿತ ನಡೆಸಲಿದ್ದಾರೆ. ಸ್ಪೇನ್ ಸುಮಾರು 150 ವರ್ಷಗಳಿಂದ ರಾಣಿಯನ್ನು ಕಾಯುತ್ತಿದ್ದು, ಲಿಯೊನರ್​ ಸಿಂಹಾಸನವನ್ನು ಏರಿದರೆ, ರಾಜನ ಜೊತೆಗೆ ಮಾತ್ರವಲ್ಲದೇ, ತನ್ನದೇ ಆದ ಹಕ್ಕಿನಲ್ಲಿ ಆಳುವ ಮೊದಲಿಗಳಾಗುತ್ತಾಳೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

ಸ್ಪ್ಯಾನಿಷ್ ಕಾನೂನಿನ ಪ್ರಕಾರ, ಯಾರು ಸಿಂಹಾಸದ ಉತ್ತರಾಧಿಕಾರಿಯಾಗುತ್ತರೋ, ಅವರು ತಮ್ಮ ಭವಿಷ್ಯದ ಪಾತ್ರಕ್ಕಾಗಿ ಕಡ್ಡಾಯ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯೊಂದಿಗೆ ಮಿಲಿಟರಿ ತರಬೇತಿಯನ್ನು ಪಡೆಯಬೇಕು. ಹಾಗಾಗಿ ಲಿಯೊನೋರ್​ ಈ ಎಲ್ಲಾ ತರಬೇತಿಯನ್ನು ಪಡೆಯುತ್ತಿದ್ದಾರೆ. ಸ್ಪೇನ್‌ನಲ್ಲಿ ತನ್ನ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ರಾಜಕುಮಾರಿ ಲಿಯೊನಾರ್ ನೌಕಾ ಪ್ರಯಾಣಗಳು, ವಾಯುಪಡೆ, ಸಮಗ್ರ ಮಿಲಿಟರಿ ತರಬೇತಿಗಳನ್ನು ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಸಲಾಗಿದೆ.

ಆಗಸ್ಟ್ 2023 ರಲ್ಲಿ ಜರಗೋಜಾದಲ್ಲಿ ಸೈನ್ಯದೊಂದಿಗೆ ತಮ್ಮ ಮಿಲಿಟರಿ ಪ್ರಯಾಣವನ್ನು ಆರಂಭಿಸಿದರು. ನಂತರ 2024 ರಲ್ಲಿ ಗಲಿಷಿಯಾದಲ್ಲಿ ನೌಕಾ ತರಬೇತಿಗೆ ಸೇರಿಕೊಂಡರು. ಸ್ಪೇನ್‌ನ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿ ಅವರ ಭವಿಷ್ಯದ ಪಾತ್ರಕ್ಕೆ ಈ ಮಿಲಿಟರಿ ಶಿಕ್ಷಣ ಅಗತ್ಯ ಎಂದು ಒತ್ತಿ ಹೇಳಿದೆ. ಅದೇ ವರ್ಷ ಅವರು ಜುವಾನ್ ಸೆಬಾಸ್ಟಿಯನ್ ಡಿ ಎಲ್ಕಾನೊದಲ್ಲಿ ಅಟ್ಲಾಂಟಿಕ್‌ನಾದ್ಯಂತ 17,000 ಮೈಲುಗಳನ್ನು ಪ್ರಯಾಣಿಸಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದಾರೆ. ಡಿಸೆಂಬರ್ 2025 ರಲ್ಲಿ, ಲಿಯೊನರ್ ಅವರು ತಮ್ಮ ತರಬೇತಿಯ ಭಾಗವಾಗಿ ಪಿಲಾಟಸ್ ಪಿಸಿ-21 ತರಬೇತಿ ವಿಮಾನದಲ್ಲಿ ಮೊದಲ ಬಾರಿಗೆ 'ಸೋಲೋ ಫ್ಲೈಟ್' (ಏಕಾಂಗಿ ಹಾರಾಟ) ನಡೆಸಿದರು. ವಿಮಾನದಲ್ಲಿ ತಮ್ಮೊಂದಿಗೆ ಯಾವುದೇ ತರಬೇತುದಾರರಿಲ್ಲದೆ ಅವರು ಯಶಸ್ವಿಯಾಗಿ ಹಾರಾಟ ನಡೆಸಿದರು. ಈ ಸಾಹಸದ ಮೂಲಕ ಅವರು ಸ್ಪೇನ್ ರಾಜಮನೆತನದ ಇತಿಹಾಸದಲ್ಲಿಯೇ ಏಕಾಂಗಿಯಾಗಿ ವಿಮಾನ ಹಾರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Category
ಕರಾವಳಿ ತರಂಗಿಣಿ