image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಸೋದರ ಕಾಸಿಮ್ ಮುನೀರ್ ಪುತ್ರ ಅಬ್ದುಲ್ ರೆಹಮಾನ್‌ ಜತೆ ಪುತ್ರಿ ಮಹ್ನೂರ್‌ ವಿವಾಹ ಮಾಡಿಸಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್

ಸೋದರ ಕಾಸಿಮ್ ಮುನೀರ್ ಪುತ್ರ ಅಬ್ದುಲ್ ರೆಹಮಾನ್‌ ಜತೆ ಪುತ್ರಿ ಮಹ್ನೂರ್‌ ವಿವಾಹ ಮಾಡಿಸಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್

ಇಸ್ಲಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ತಮ್ಮ ಪುತ್ರಿ ಮಹ್ನೂರ್ ಅವರನ್ನು ಸೋದರನ ಪುತ್ರನಿಗೆ ನೀಡಿ ವಿವಾಹ ಮಾಡಿರುವ ಬಗ್ಗೆ ವರದಿಯಾಗಿದೆ.  ಸೋದರ ಕಾಸಿಮ್ ಮುನೀರ್ ಪುತ್ರ ಅಬ್ದುಲ್ ರೆಹಮಾನ್‌ ಜತೆ ಪುತ್ರಿ ಮಹ್ನೂರ್‌ ವಿವಾಹ ಮಾಡಿಸಿದ್ದಾರೆ. ಈ ಮೂಲಕ ಸೋದರನ ಮಗನನ್ನು ಮುನೀರ್ ಅಳಿಯನನ್ನಾಗಿ ಮಾಡಿಕೊಂಡಿದ್ದಾರೆ. ವಿವಾಹವು ರಾವಲ್ಪಿಂಡಿಯ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯಲ್ಲಿ ಡಿ.26ರಂದು ಅದ್ಧೂರಿಯಾಗಿ ನೆರವೇರಿದೆ. ಹೀಗಿದ್ದೂ ವಿವಾಹ ಸಮಾರಂಭದ ಯಾವುದೇ ಫೋಟೊಗಳು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ.

ಮುನೀರ್ ಅವರು ನಾಲ್ಕು ಹೆಣ್ಣುಮಕ್ಕಳ ತಂದೆಯಾಗಿದ್ದು, ಈಗ ಮೂರನೇ ಮಗಳ ಮದುವೆ ನೆರವೇರಿದೆ. ವಿವಾಹದಲ್ಲಿ ದೇಶದ ಪ್ರಮುಖ ರಾಜಕೀಯ ನಾಯಕರಾದ ಪ್ರಧಾನಿ ಶೆಹಬಾಜ್ ಷರೀಫ್, ಅಧ್ಯಕ್ಷ ಆಸಫಿ ಅಲಿ ಜರ್ದಾರಿ, ಉಪಪ್ರಧಾನಿ ಇಶಾಕ್ ದಾರ್, ಐಎಸ್‌ಐ ಮುಖ್ಯಸ್ಥ ಮತ್ತು ನಿವೃತ್ತ ಜನರಲ್‌ಗಳು ಭಾಗಿಯಾಗಿದ್ದರು. ಅಬ್ದುಲ್ ರೆಹಮಾನ್ ಕೂಡ ಪಾಕಿಸ್ತಾನ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ನಂತರ ಸೇನಾ ಅಧಿಕಾರಿಗಳಿಗೆ ಮೀಸಲಾದ ಕೋಟಾದ ಮೂಲಕ ನಾಗರಿಕ ಸೇವೆಗಳಿಗೆ ಸೇರಿದ್ದು, ಪ್ರಸ್ತುತ ಸಹಾಯಕ ಆಯುಕ್ತರಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ.

Category
ಕರಾವಳಿ ತರಂಗಿಣಿ