ದುಬೈ : ವಾಯು ಪ್ರದರ್ಶನದ ಸಂದರ್ಭದಲ್ಲಿ ತೇಜಸ್ ಲಘು ಯುದ್ಧ ವಿಮಾನ (LCA MK-1) ಪತನಗೊಂಡು ಭಾರತೀಯ ವಾಯುಪಡೆಯ (ಐಎಎಫ್) ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಹುತಾತ್ಮರಾಗಿದ್ದಾರೆ. 37 ವರ್ಷ ವಯಸ್ಸಿನ ಅವರು ಕಾರ್ಯಕ್ರಮದ ಕೊನೆಯ ದಿನದಂದು ಕೆಳಮಟ್ಟದ ಏರೋಬ್ಯಾಟಿಕ್ ಕುಶಲತೆಯನ್ನು ನಿರ್ವಹಿಸುತ್ತಿದ್ದಾಗ, ದುರದೃಷ್ಟಕರವಾಗಿ ಫೈಟರ್ ಜೆಟ್ ಪತನಗೊಂಡಿತು.
"ದುಬೈ ವೈಮಾನಿಕ ಪ್ರದರ್ಶನ ಸಮಯದಲ್ಲಿ IAF ತೇಜಸ್ ವಿಮಾನ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಪೈಲಟ್‌ಗೆ ಮಾರಣಾಂತಿಕ ಗಾಯಗಳಾಗಿ ಮೃತಪಟ್ಟಿದ್ದಾರೆ. ಜೀವಹಾನಿಗೆ IAF ತೀವ್ರವಾಗಿ ವಿಷಾದಿಸುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯವನ್ನು ರಚಿಸಲಾಗುತ್ತಿದೆ ಎಂದು IAF, ಹೇಳಿದೆ. 2016 ರಲ್ಲಿ ಈ ವಿಮಾನವನ್ನು ಭಾರತೀಯ ವಾಯುಪಡೆಗೆ ಸೇರಿಸಿದಾಗಿನಿಂದ ಇದು ಸ್ಥಳೀಯ ತೇಜಸ್ ಯುದ್ಧ ವಿಮಾನವನ್ನು ಒಳಗೊಂಡ ಎರಡನೇ ಅಪಘಾತವಾಗಿದೆ.
ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರು ಪತ್ನಿ, ಆರು ವರ್ಷದ ಮಗಳು ಮತ್ತು ಪೋಷಕರನ್ನು ಅಗಲಿದ್ದಾರೆ. ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್, ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯವರು. ಸ್ಯಾಲ್ ಅವರ ಪತ್ನಿ ಕೂಡ ಭಾರತೀಯ ವಾಯುಪಡೆ ಅಧಿಕಾರಿ ಆಗಿದ್ದಾರೆ, ಆರು ವರ್ಷದ ಮಗಳು ಮತ್ತು ಅವರ ಪೋಷಕರನ್ನು ಅವರು ಅಗಲಿದ್ದಾರೆ. ಅವರು ಸುಜನ್‌ಪುರ್ ತಿರಾದ ಸೈನಿಕ್ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಡಿಸೆಂಬರ್ 24, 2009 ರಂದು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದರು. ವಿಂಗ್ ಕಮಾಂಡರ್ ಸ್ಯಾಲ್ ಅವರ ಸಾವಿನ ಸುದ್ದಿ ಅವರ ತವರು ರಾಜ್ಯವನ್ನು ತೀವ್ರ ದುಃಖವನ್ನುಂಟುಮಾಡಿದೆ. ಸಿಎಂ ಸುಖವಿಂದರ್ ಸಿಂಗ್ ಸುಖು, ರಾಷ್ಟ್ರವು ಧೈರ್ಯಶಾಲಿ, ಕರ್ತವ್ಯನಿಷ್ಠ ಪೈಲಟ್ ನ್ನು ಕಳೆದುಕೊಂಡಿದೆ ಎಂದು ಬರೆದಿದ್ದಾರೆ, ಅವರು ಕುಟುಂಬಕ್ಕೆ ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕೂಡ ಈ ಘಟನೆಯನ್ನು "ಅತ್ಯಂತ ಹೃದಯವಿದ್ರಾವಕ ಮತ್ತು ನೋವಿನಿಂದ ಕೂಡಿದೆ" ಎಂದು ಸಂತಾಪ ಸೂಚಿಸಿದ್ದಾರೆ.
150 ಕ್ಕೂ ಹೆಚ್ಚು ದೇಶಗಳು ತಮ್ಮ ಏರೋಸ್ಪೇಸ್ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿರುವ ವಿಶ್ವದ ಅತಿದೊಡ್ಡ ವಾಯುಯಾನ ಪ್ರದರ್ಶನಗಳಲ್ಲಿ ಒಂದಾದ ದುಬೈ ಏರ್ ಶೋನಲ್ಲಿ ನಿಯಮಿತ ಏರೋಬ್ಯಾಟಿಕ್ ಪ್ರದರ್ಶನದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಏರ್ ಶೋ ನವೆಂಬರ್ 17 ರಂದು ಪ್ರಾರಂಭವಾಗಿತ್ತು. ಅಂತಿಮ ದಿನದ ದೃಶ್ಯಗಳು ತೇಜಸ್ ಯುದ್ಧವಿಮಾನವು ಇದ್ದಕ್ಕಿದ್ದಂತೆ ಬೆಂಕಿಯ ಚೆಂಡಾಗಿ ಸ್ಫೋಟಗೊಂಡು ವಾಯುನೆಲೆಯಾದ್ಯಂತ ಹೊಗೆಯಾಡುತ್ತಿದ್ದುದನ್ನು ತೋರಿಸುತ್ತವೆ. ಈಗ ವಿಚಾರಣಾ ನ್ಯಾಯಾಲಯವು ತನಿಖೆ ನಡೆಸುತ್ತಿದೆ.