image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಸುಂಕ ನೀತಿ ಟೀಕಿಸುವವರು ಮೂರ್ಖರು-ಅಮೆರಿಕ ಈಗ ಶ್ರೀಮಂತ ದೇಶ: ಟ್ರಂಪ್

ಸುಂಕ ನೀತಿ ಟೀಕಿಸುವವರು ಮೂರ್ಖರು-ಅಮೆರಿಕ ಈಗ ಶ್ರೀಮಂತ ದೇಶ: ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸುಂಕ ನೀತಿಯನ್ನು ಸಮರ್ಥಿಸಿಕೊಂಡಿದ್ದು, "ಮೂರ್ಖ ನಿಲುವು" ಎಂಬ ಟೀಕಾಕಾರರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಅಲ್ಲದೇ ತಮ್ಮ ನಾಯಕತ್ವದಲ್ಲಿ ಅಮೆರಿಕವು "ವಿಶ್ವದ ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಗೌರವಾನ್ವಿತ ದೇಶ"ವಾಗಿದೆ ಎಂದು ಪ್ರತಿಪಾದಿಸಿದರು. "ಸುಂಕಗಳನ್ನು ವಿರೋಧಿಸುವ ಜನರು ಮೂರ್ಖರು!" ಎಂದು ಕರೆದಿರುವ ಟ್ರಂಪ್, "ವಿಶ್ವದ ಅತ್ಯಂತ ಶ್ರೀಮಂತ, ಅತ್ಯಂತ ಗೌರವಾನ್ವಿತ ದೇಶ, ಬಹುತೇಕ ಹಣದುಬ್ಬರವಿಲ್ಲ ಮತ್ತು ದಾಖಲೆಯ ಷೇರು ಮಾರುಕಟ್ಟೆಯನ್ನು ಹೊಂದಿದೆ" ಎಂದು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ತಮ್ಮ ನಾಯಕತ್ವದಲ್ಲಿ ಅಮೆರಿಕದ ಕುರಿತು ಉಲ್ಲೇಖಿಸಿರುವ ಟ್ರಂಪ್, "401 ಸಾವಿರ ಡಾಲರ್‌ಗಳು ಇದುವರೆಗಿನ ಅತ್ಯಧಿಕ ಮೊತ್ತವಾಗಿದೆ. ನಾವು ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಪಡೆಯುತ್ತಿದ್ದೇವೆ. ಜತೆಗೆ ಶೀಘ್ರದಲ್ಲೇ ನಮ್ಮ ಭಾರೀ ಪ್ರಮಾಣದ $37 ಟ್ರಿಲಿಯನ್‌ಗಳನ್ನು ಮೊತ್ತದ ಸಾಲವನ್ನು ಮರು ಪಾವತಿಸಲು ಪ್ರಾರಂಭಿಸುತ್ತೇವೆ. ಅಮೆರಿಕದಲ್ಲಿ ದಾಖಲೆಯ ಹೂಡಿಕೆ, ಸ್ಥಾವರಗಳು ಮತ್ತು ಕಾರ್ಖಾನೆಗಳು ಎಲ್ಲೆಡೆ ಬೆಳೆಯುತ್ತಿವೆ. ಒಬ್ಬ ವ್ಯಕ್ತಿಗೆ ಕನಿಷ್ಠ $2000 ಲಾಭಾಂಶವನ್ನು (ಹೆಚ್ಚಿನ ಆದಾಯದ ಜನರನ್ನು ಸೇರಿಸದೆ!) ಎಲ್ಲರಿಗೂ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಟ್ರಂಪ್ ಅಧ್ಯಕ್ಷತೆಯಲ್ಲಿ ವಿಧಿಸಲಾದ ಜಾಗತಿಕ ಸುಂಕಗಳ ಕುರಿತು ನವೆಂಬರ್ 6 ರಂದು ಯುಎಸ್ ಸುಪ್ರೀಂ ಕೋರ್ಟ್ ವಿಚಾರಣೆ ಪ್ರಾರಂಭಿಸಿದ ಕೆಲವು ದಿನಗಳ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದು, ಇದು ಟ್ರಂಪ್‌ ತಮ್ಮ ನೀತಿಗಳ ಕುರಿತ ಸಮರ್ಥನೆಯಾಗಿರುವುದಾಗಿ ವರದಿ ತಿಳಿಸಿದೆ.

Category
ಕರಾವಳಿ ತರಂಗಿಣಿ