image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ತ್ರಿವಳಿ ಶಾಕ್‌!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ತ್ರಿವಳಿ ಶಾಕ್‌!

ವಾಷಿಂಗ್ಟನ್‌: ಅಮೆರಿಕದಲ್ಲಿ ಹೊರಬಿದ್ದ ಮೇಯರ್‌ ಹಾಗೂ ಗವರ್ನರ್‌ ಚುನಾವಣೆಗಳ ಫಲಿತಾಂಶವು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ 'ತ್ರಿವಳಿ ಆಘಾತ'ವಾಗಿ ಪರಿಣಮಿಸಿದೆ. ವರ್ಜಿನಿಯಾ, ನ್ಯೂಜೆರ್ಸಿ ಹಾಗೂ ನ್ಯೂಯಾರ್ಕ್‌ ನಗರಗಳಲ್ಲಿ ನಡೆದ ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವು ಸೋತು ಸುಣ್ಣವಾದರೆ, ಡೆಮಾಕ್ರಟಿಕ್‌ ಪಕ್ಷವು ಕ್ಲೀನ್‌ ಸ್ವೀಪ್‌ ಮಾಡಿದೆ. ನ್ಯೂಯಾರ್ಕ್‌ ನಗರದ ಮೊದಲ ಮುಸ್ಲಿಂ ಹಾಗೂ ದಕ್ಷಿಣ ಏಷ್ಯಾ ಮೂಲದ ಮೊದಲಿಗ ಮೇಯರ್‌ ಆಗಿ ಭಾರತ ಮೂಲದ ಜೊಹ್ರಾನ್‌ ಮಮ್ದಾನಿ ಆಯ್ಕೆಯಾಗಿದ್ದಾರೆ. ಅದೇ ರೀತಿ, ಭಾರತ ಮೂಲದ ಅಫ್ತಾಬ್‌ ಪೂರಾವೆಲ್‌ ಅವರು ಸಿನ್ಸಿನಾಟಿಯಲ್ಲಿ ನಡೆದ ಮೇಯರ್‌ ಮರುಚುನಾವಣೆಯಲ್ಲಿ ಗೆದ್ದಿದ್ದಾರೆ. ಅಲ್ಲದೆ, ಹೈದರಾಬಾದ್‌ ಮೂಲದ ಗಝಾಲಾ ಹಶ್ಮಿ ಅವರು ಕೂಡ ವರ್ಜಿನಿಯಾದ ಲೆಫ್ಟಿನಂಟ್‌ ಗವರ್ನರ್‌ ಆಗಿ ಚುನಾಯಿತರಾಗಿದ್ದಾರೆ. ಮಮ್ದಾನಿ ಅವರು ಖ್ಯಾತ ನಿರ್ದೇಶಕಿ ಮೀರಾ ನಾಯರ್ ಅವರ ಪುತ್ರ. ವಲಸಿಗರ ಹೆಸರಲ್ಲಿ ಭಾರತೀಯರನ್ನು ಹತ್ತಿಕ್ಕಲು ಯತ್ನಿಸಿದ್ದಾರೆ ಎನ್ನಲಾಗುವ ಟ್ರಂಪ್‌ ಅವರಿಗೆ ಅಮೆರಿಕದ ಜನರು ಮೂವರು ಭಾರತೀಯರನ್ನು ಚುನಾಯಿಸುವ ಮೂಲಕ ತ್ರಿವಳಿ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದೇ ಹೇಳಲಾಗುತ್ತಿದೆ. ಗೆದ್ದವರಲ್ಲಿ ಮಮ್ದಾನಿ ಸೇರಿ ಮೂವರು ಭಾರತೀಯರು ಇರುವುದು ವಿಶೇಷವಾಗಿದೆ. ಈ ಫಲಿತಾಂಶದ ಮೂಲಕ ವರ್ಷದ ಪ್ರಾರಂಭದಲ್ಲಷ್ಟೇ ಅಧಿಕಾರಕ್ಕೇರಿದ್ದ ಟ್ರಂಪ್‌ ಆಡಳಿತದ ಬಗ್ಗೆ ಜನರ ಹತಾಶೆ ಹೊರಬಿದ್ದಿದೆ ಎಂದು ವಿಶ್ಲೇಷಿಸಲಾಗಿದೆ. ಇನ್ನು ಅಮೆರಿಕವೇ ಮೊದಲು ಎನ್ನುತ್ತಾ, ಭಾರತೀಯರು ಸೇರಿ ವಲಸಿಗರ ವಿರುದ್ಧ ಹಲವು ಕಾನೂನುಗಳನ್ನು ರೂಪಿಸಲು ಹೊರಟಿದ್ದ ಟ್ರಂಪ್‌ ನಡೆಗೆ ಉತ್ತರವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

Category
ಕರಾವಳಿ ತರಂಗಿಣಿ