image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಟ್ರಂಪ್ ವಿಧಿಸಿದ್ದ 'ಪರಸ್ಪರ ಸುಂಕ' ರದ್ದುಗೊಳಿಸುವ ನಿರ್ಣಯಕ್ಕೆ ಅಮೆರಿಕ ಸೆನೆಟ್ ಅನುಮೋದನೆ

ಟ್ರಂಪ್ ವಿಧಿಸಿದ್ದ 'ಪರಸ್ಪರ ಸುಂಕ' ರದ್ದುಗೊಳಿಸುವ ನಿರ್ಣಯಕ್ಕೆ ಅಮೆರಿಕ ಸೆನೆಟ್ ಅನುಮೋದನೆ

ವಾಷಿಂಗ್ಟನ್ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ 100ಕ್ಕೂ ಅಧಿಕ ದೇಶಗಳ ಮೇಲೆ ವಿಧಿಸಿದ್ದ `ಪರಸ್ಪರ ಸುಂಕ'ಗಳನ್ನು ರದ್ದುಗೊಳಿಸಲು ಆಗ್ರಹಿಸುವ ನಿರ್ಣಯದ ಪರ ಅಮೆರಿಕಾದ ಸೆನೆಟ್ ಮತ ಚಲಾಯಿಸಿರುವುದಾಗಿ ವರದಿಯಾಗಿದೆ. ಕಾರ್ಯನಿರ್ವಾಹಕ ಆದೇಶದ ಮೂಲಕ ಅಧ್ಯಕ್ಷರು ಜಾರಿಗೆ ತಂದಿದ್ದ `ಪ್ರಾಥಮಿಕ ಮಟ್ಟದ' ಸುಂಕಗಳನ್ನು ಕೊನೆಗೊಳಿಸಲು ಡೆಮಾಕ್ರಟಿಕ್ ಸದಸ್ಯರು ಮಂಡಿಸಿದ್ದ ನಿರ್ಣಯದ ಪರ ನಾಲ್ವರು ರಿಪಬ್ಲಿಕನ್ ಸಂಸದರು(ಟ್ರಂಪ್ ಪಕ್ಷ) ಮತ ಹಾಕಿದ್ದು 51-47 ಮತಗಳಿಂದ ನಿರ್ಣಯಕ್ಕೆ ಅನುಮೋದನೆ ದೊರಕಿದೆ. ಇದರೊಂದಿಗೆ ಈ ವಾರ ಮೂರನೇ ಬಾರಿ ರಿಪಬ್ಲಿಕನ್ ಸದಸ್ಯರು ಟ್ರಂಪ್ ಅವರ ಸುಂಕಾಸ್ತ್ರವನ್ನು ವಿರೋಧಿಸಿ ಡೆಮಾಕ್ರಟಿಕ್ ಸದಸ್ಯರೊಂದಿಗೆ ಕೈ ಜೋಡಿಸಿದಂತಾಗಿದೆ. ಇದಕ್ಕೂ ಮುನ್ನ ಬ್ರೆಝಿಲ್ ಮತ್ತು ಕೆನಡಾದ ವಿರುದ್ಧದ ಸುಂಕವನ್ನು ವಿರೋಧಿಸುವ ನಿರ್ಣಯಕ್ಕೆ ರಿಪಬ್ಲಿಕನ್ ಸದಸ್ಯರೂ ಬೆಂಬಲ ಸೂಚಿಸಿದ್ದರು.

Category
ಕರಾವಳಿ ತರಂಗಿಣಿ