ಇಸ್ಲಾಮಾಬಾದ್ : ಈಗ ತಾನೇ ಸಹಜ ಸ್ಥಿತಿಗೆ ಮರಳುತ್ತಿರುವ ಗಾಜಾಪಟ್ಟಿಗೆ ಯುದ್ಧಾನಂತರದ ಸ್ಥಿರೀಕರಣ ಮತ್ತು ಪುನರ್ವಸತಿ ಭಾಗವಾಗಿ ಪಾಕಿಸ್ತಾನ ಸುಮಾರು 20,000 ಸೈನಿಕರನ್ನು ನಿಯೋಜಿಸಲು ಸಿದ್ಧತೆ ನಡೆಸುತ್ತಿದೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ. ಪಾಕಿಸ್ತಾನ , ಇಸ್ರೇಲ್ ಮತ್ತು ಅಮೆರಿಕ ಕೇಂದ್ರ ಗುಪ್ತಚರ ಸಂಸ್ಥೆ ( ಸಿಐಎ ) ಯ ಹಿರಿಯ ಅಧಿಕಾರಿಗಳ ನಡುವೆ ರಹಸ್ಯ ಸಭೆಗಳು ನಡೆದ ನಂತರ ಈ ನಿಯೋಜನೆ ನಡೆದಿದೆ. ಇಸ್ರೇಲ್ ಸೇನೆ ಮತ್ತು ಗಾಜಾದಲ್ಲಿರುವ ಇತರೆ ಉಗ್ರಗಾಮಿಗಳ ನಡುವೆ ಉಂಟಾಗುವ ಸಂಘರ್ಷ ತಡೆಯಲು ಪಾಕ್ ಸೇನೆಯನ್ನು ನಿಯೋಜಿಸಲಾಗುವುದು ಎಂದು ಮೂಲಗಳು ಹೇಳಿವೆ .