ಇರಾನ್ : ಇರಾನಿನ ವಿಜ್ಞಾನಿ ಅಲಾವುದ್ದೀನ್ ಖಾಸೆಮಿ ಎಂಬುವವರು ಈ ಪ್ರಯೋಗವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲಾವುದ್ದೀನ್ ಖಾಸೆಮಿ ಹೇಳುವ ಪ್ರಕಾರ ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ಬೇರ್ಪಡಿಸುವುದರಿಂದ ಶಕ್ತಿಯನ್ನು ಉತ್ಪಾದಿಸಬಹುದು ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ಅಲಾವುದ್ದೀನ್ ಖಾಸೆಮಿ ಸಾಮಾನ್ಯವಾಗಿ ಉಪಯೋಗಿಸುವ ಪೈಪ್ನ್ನು ಬಳಸಿಕೊಂಡು ಕಾರಿನ ಟ್ಯಾಂಕ್ನೊಳಗೆ ನೀರು ಹಾಕಿದ್ದಾರೆ. ಕಾರಿನ ಇಂಜಿನ್ ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ಪರಿವರ್ತಿಸುತ್ತದೆ. ನಂತರ ಅದರಿಂದ ಬರುವ ಶಕ್ತಿಯಿಂದ ಕಾರು ಮುಂದಕ್ಕೆ ಚಲಿಸುತ್ತದೆ. ಒಂದು ಹನಿ ಇಂಧನ ಹಾಗೂ ಬಾಹ್ಯ ಇಂಧನಗಳು ಮೂಲಗಳಿಲ್ಲದೆ, ಕೇವಲ 60 ಲೀಟರ್ ನೀರಿನಲ್ಲಿ 900 ಕಿಲೋ ಮೀಟರ್ ಪ್ರಯಾಣಿಸಬಹುದು ಎಂದು ಅಲಾವುದ್ದೀನ್ ಖಾಸೆಮಿ ಹೇಳುತ್ತಾರೆ. ಆದರೆ ಈ ಬಗ್ಗೆ ವಿಜ್ಞಾನ ಲೋಕ ಹೇಳುವಂತೆ ಆ ಪ್ರಯೋಗಕ್ಕೆ ಹೆಚ್ಚಿನ ಶಕ್ತಿಯ ಅಗತ್ಯ ಇದೆ ಎಂದು ಹೇಳಿದೆ. ಇನ್ನು ಈ ವಿಡಿಯೋ ನೋಡಿ, ಇದು ಹೊಸ ಪ್ರಯತ್ನ ಎಂದು ಹೇಳಿದ್ದಾರೆ. ಆದರೆ ಈ ವಿಡಿಯೋದಲ್ಲಿರುವುದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬ ಬಗ್ಗೆ ಯಾವುದೇ ವರದಿ ಬಂದಿಲ್ಲ. ಇನ್ನು ಭಾರತದಲ್ಲೂ ಕೂಡ ಇಂಥಹದೇ ಒಂದು ಪ್ರಯತ್ನವನ್ನು ಮಾಡಿತ್ತು, ಒಬ್ಬ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಬೈಕ್ನ ಟ್ಯಾಂಕ್ಗೆ ನೀರು ಸುರಿದು ಅದನ್ನು ಸ್ಟಾರ್ಟ್ ಮಾಡಲು ಪ್ರಯತ್ನ ಮಾಡುತ್ತಾನೆ, ಆದರೆ ಮೊದಲು ಪ್ರಯತ್ನ ವಿಫಲವಾದರೂ, ನಂತರದ ಸ್ಟಾರ್ಟ್ ಆಗುತ್ತದೆ. ಇದರ ಸತ್ಯಾಸತ್ಯತೆ ಬಗ್ಗೆ ಇನ್ನು ತಿಳಿದುಬಂದಿಲ್ಲ ಎಂದು ವಿದೇಶಿ ಮಾಧ್ಯಮ ವರದಿ ತಿಳಿಸಿದೆ.