ರಿಯಾದ್: ಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿರುವ ವಲಸಿಗ ಸಮುದಾಯಗಳನ್ನು ಉಲ್ಲೇಖಿಸುವಾಗ ನಟ ಸಲ್ಮಾನ್ ಖಾನ್ ಇತ್ತೀಚೆಗೆ ಬಲೂಚಿಸ್ತಾನ್ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ರಲ್ಲಿ ಶಾರುಖ್ ಖಾನ್ ಮತ್ತು ಆಮಿರ್ ಖಾನ್ ಸೇರಿದಂತೆ ಇತರ ಬಾಲಿವುಡ್ ಸೂಪರ್‌ಸ್ಟಾರ್‌ಗಳೊಂದಿಗೆ ಭಾಗವಹಿಸಿದ್ದ ಸಲ್ಮಾನ್ ಖಾನ್ ಬಲೂಚಿಸ್ತಾನದ ಇತಿಹಾಸ ದಂಗೆಕೋರ ಪ್ರಯತ್ನಗಳಿಂದ ತುಂಬಿದ್ದು, ಇದನ್ನು ಪಾಕಿಸ್ತಾನ ಸರ್ಕಾರ ಪ್ರಾಂತ್ಯದ ಕೆಲವು ಬುಡಕಟ್ಟು ಮುಖ್ಯಸ್ಥರ ಅಸಮಾಧಾನವೆಂಬಂತೆ ಚಿತ್ರಿಸಲು ಪ್ರಯತ್ನಿಸಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ದಕ್ಷಿಣ ಏಷ್ಯಾದ ಸಮುದಾಯಗಳಲ್ಲಿ ಭಾರತೀಯ ಸಿನಿಮಾದ ಹೆಚ್ಚುತ್ತಿರುವ ಜಾಗತಿಕ ಆಕರ್ಷಣೆಯ ಬಗ್ಗೆ ಸಲ್ಮಾನ್ ಖಾನ್ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. "ಇದೀಗ, ನೀವು ಹಿಂದಿ ಚಿತ್ರವನ್ನು ನಿರ್ಮಿಸಿ ಇಲ್ಲಿ (ಸೌದಿ ಅರೇಬಿಯಾದಲ್ಲಿ) ಬಿಡುಗಡೆ ಮಾಡಿದರೆ, ಅದು ಸೂಪರ್‌ಹಿಟ್ ಆಗುತ್ತದೆ. ನೀವು ತಮಿಳು, ತೆಲುಗು ಅಥವಾ ಮಲಯಾಳಿ ಚಿತ್ರವನ್ನು ಮಾಡಿದರೆ, ಅದು ನೂರಾರು ಕೋಟಿ ವ್ಯವಹಾರವನ್ನು ಮಾಡುತ್ತದೆ ಏಕೆಂದರೆ ಇತರ ದೇಶಗಳಿಂದ ಅನೇಕ ಜನರು ಇಲ್ಲಿಗೆ ಬಂದಿದ್ದಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ... ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ." ಎಂದು ಸಲ್ಮಾನ್ ಖಾನ್ ಬಲೂಚಿಸ್ಥಾನ ಹಾಗೂ ಪಾಕಿಸ್ತಾನವನ್ನು ಪ್ರತ್ಯೇಕ ರಾಷ್ಟ್ರಗಳೆಂಬಂತೆ ಉಲ್ಲೇಖಿಸಿದ್ದಾರೆ.
ಪತ್ರಕರ್ತೆ ಸ್ಮಿತಾ ಪ್ರಕಾಶ್ ಈ ಕ್ಲಿಪ್ ನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. "ಇದು ನಾಲಿಗೆಯ ಎಡವಟ್ಟಾಗಿದೆಯೇ ಅಥವಾ ಉದ್ದೇಶಪೂರ್ವಕವಾಗಿಯೇ ಮಾತನಾಡಿರುವುದೇ? ಎಂದು ನನಗೆ ತಿಳಿದಿಲ್ಲ, ಆದರೆ ಇದು ಅದ್ಭುತವಾಗಿದೆ! ಸಲ್ಮಾನ್ ಖಾನ್ "ಬಲೂಚಿಸ್ತಾನದ ಜನರನ್ನು" "ಪಾಕಿಸ್ತಾನದ ಜನರಿಂದ" ನಿಂದ ಬೇರ್ಪಡಿಸಿದ್ದಾರೆ" ಎಂದು ಬರೆದಿದ್ದಾರೆ. ಸಲ್ಮಾನ್ ಖಾನ್ ತಮ್ಮ ಹೇಳಿಕೆ ಬಲೂಚಿಸ್ತಾನ್ 'ಸ್ವತಂತ್ರ' ಎಂದು ಉದ್ದೇಶಪೂರ್ವಕವಾಗಿ ಸುಳಿವು ನೀಡುತ್ತಿದೆಯೇ? ಇದು ಬಾಯ್ತಪ್ಪಿನಿಂದ ಆಗಿರುವುದೇ? ಅಥವಾ ಜ್ಞಾನದ ಕೊರತೆಯೇ ಅಥವಾ ಅದು ಕೂಡ ಆಮಿರ್ ಖಾನ್ ಮತ್ತು ಶಾರುಖ್ ಅವರೊಂದಿಗೆ ವೇದಿಕೆಯಲ್ಲಿ?" ಎಂದು ಮತ್ತೊಬ್ಬ ಸಾಮಾಜಿಕ ಜಾಲತಾಣ ಗ್ರಾಹಕರು ಬರೆದಿದ್ದಾರೆ.