image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಫ್ಘಾನ್‌- ಪಾಕ್‌ ಯುದ್ಧಕ್ಕೆ ಭಾರತವೇ ಕಾರಣ; ಪಾಕಿಸ್ತಾನದ ರಕ್ಷಣಾ ಸಚಿವನ ಆರೋಪ

ಅಫ್ಘಾನ್‌- ಪಾಕ್‌ ಯುದ್ಧಕ್ಕೆ ಭಾರತವೇ ಕಾರಣ; ಪಾಕಿಸ್ತಾನದ ರಕ್ಷಣಾ ಸಚಿವನ ಆರೋಪ

ಪಾಕಿಸ್ತಾನ : ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ ಪಾಕಿಸ್ತಾನ ಇದೀಗ ಭಾರತದ ಮೇಲೆ ಹುರುಳಿಲ್ಲದ ಆರೋಪವನ್ನು ಮಾಡಿದೆ. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಭಾರತದ ಪರವಾಗಿ "ಪ್ರಾಕ್ಸಿ ಯುದ್ಧ" ನಡೆಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವೆ ಇತ್ತೀಚೆಗೆ ಮಧ್ಯಸ್ಥಿಕೆ ವಹಿಸಿದ 48 ಗಂಟೆಗಳ ಕದನ ವಿರಾಮದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಭಾರತವು ವರ್ಷಗಳಿಂದ ಭಯೋತ್ಪಾದನೆಯ ವಿರುದ್ಧ ಕಠಿಣ ನೀತಿಯನ್ನು ಕಾಯ್ದುಕೊಂಡಿದ್ದರೂ ಸಹ, ಅಫ್ಘಾನ್ ತಾಲಿಬಾನ್‌ಗೆ ಭಾರತ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ತಾಲಿಬಾನ್ ನಿರ್ಧಾರಗಳನ್ನು ದೆಹಲಿ ಪ್ರಾಯೋಜಿಸುತ್ತಿರುವುದರಿಂದ ಕದನ ವಿರಾಮ ಮುಂದುವರಿಯುತ್ತದೆಯೇ ಎಂಬುದರ ಬಗ್ಗೆ ನನಗೆ ಸಂದೇಹವಿದೆ" ಎಂದು ಹೇಳಿದರು. ತಾಲಿಬಾನ್‌ನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ ಅವರು ಇತ್ತೀಚೆಗೆ ಭಾರತಕ್ಕೆ ನೀಡಿದ ಆರು ದಿನಗಳ ಭೇಟಿಯ ಸಂದರ್ಭದಲ್ಲಿ ಕೆಲವು ಗುಪ್ತ "ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಖವಾಜಾ ಆಸಿಫ್ ಹೇಳಿದ್ದಾರೆ. ಅಫ್ಘಾನಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮೂಲಕ ಮುಗಿಬಿದ್ದಿದ್ದ ಪಾಕಿಸ್ತಾನ ಕೊನೆಗೂ 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ. ಪಾಕಿಸ್ತಾನ ಸಮಯ ಸಂಜೆ 6 ಗಂಟೆಗೆ ಅಥವಾ ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಕದನ ವಿರಾಮ ಜಾರಿಗೆ ಬಂದಿದೆ. ಅಫ್ಘಾನಿಸ್ತಾನವು ತನ್ನ ಭೂಪ್ರದೇಶದ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಬಂದೂಕುಧಾರಿಗಳನ್ನು ಬೆಂಬಲಿಸುತ್ತಿದೆ. 2021ರಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಈ ದಾಳಿಗಳು ಹೆಚ್ಚಾಗಿದೆ ಎಂದು ಎಂದು ಪಾಕಿಸ್ತಾನ ಆರೋಪಿಸಿದೆ.

Category
ಕರಾವಳಿ ತರಂಗಿಣಿ