image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಟ್ರಂಪ್‌ ಹೊಗಳಿದ ಶಹಾಬಾಜ್ ಷರೀಫ್ - ಬೂಟು ನೆಕ್ಕುವಷ್ಟು ತಾರೀಫ್ ಮಾಡಬೇಡಿ ಎಂದ ಪಾಕಿಸ್ತಾನಿಯರು!

ಟ್ರಂಪ್‌ ಹೊಗಳಿದ ಶಹಾಬಾಜ್ ಷರೀಫ್ - ಬೂಟು ನೆಕ್ಕುವಷ್ಟು ತಾರೀಫ್ ಮಾಡಬೇಡಿ ಎಂದ ಪಾಕಿಸ್ತಾನಿಯರು!

ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಒಂದಲ್ಲಾ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಾರಿ, ಗಾಜಾ ಶೃಂಗಸಭೆಯಲ್ಲಿನ ಅವರ ಭಾಷಣವನ್ನು ಮುಂದಿಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್ ಮಾಡುತ್ತಿರುವವರು, ಅವರ ದೇಶದವರೇ. ಪಾಕಿಸ್ತಾನದ ಪ್ರಧಾನಿಗಳು, ಗಾಜಾ ಶಾಂತಿ ಶೃಂಗಸಭೆಯನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಭಿಮಾನಿಗಳ ಸಮಾವೇಶ ಎಂದು ತಪ್ಪಾಗಿ ತಿಳಿದುಕೊಂಡಿರಬಹುದು ಎಂದು ಸೋಶಿಯಲ್ ಮಿಡಿಯಾದಲ್ಲಿ ವ್ಯಂಗ್ಯವಾಡಲಾಗುತ್ತಿದೆ. ಅಮೆರಿಕಾದ ಅಧ್ಯಕ್ಷರಿಗೇ ಅಚ್ಚರಿ ಮೂಡಿಸುವಷ್ಟು, ಟ್ರಂಪ್ ಅವರನ್ನು ಷರೀಫ್ ಹೊಗಳಿಬಿಟ್ಟರು ಎಂದು ಕಾಲೆಳೆಯಲಾಗುತ್ತಿದೆ. ಗಾಜಾ ಶಾಂತಿ ಶೃಂಗಸಭೆ ಯಶಸ್ಸಿನ ನಂತರ, ವಿಶ್ವದ ಹಲವು ನಾಯಕರು ಮಾತನಾಡುತ್ತಿದ್ದರು. ಆ ವೇಳೆ, ಪಾಕ್ ಪ್ರಧಾನಿಗಳು, ಟ್ರಂಪ್ ಸಮ್ಮುಖದಲ್ಲಿ ಅವರನ್ನು ಸಿಕ್ಕಾಪಟ್ಟೆ ಹೊಗಳಿದ್ದರು. ಎಷ್ಟು ಅವರು ಹೊಗಳುತ್ತಿದ್ದರು ಎಂದರೆ, ಅಮೆರಿಕಾದ ಅಧ್ಯಕ್ಷರೇ ಮುಜುಗರ ಪಡುವಷ್ಟು. ಶೆಹಬಾಜ್ ಷರೀಪ್ ಭಾಷಣದಲ್ಲಿ ಹೈಲೆಟ್ ಆಗಿದ್ದದ್ದು, ನೊಬೆಲ್ ಪ್ರಶಸ್ತಿ, ಡೊನಾಲ್ಡ್ ಟ್ರಂಪ್ ಅವರಿಗೆ ಸಿಗಬೇಕು ಎನ್ನುವ ಸಾರಾಂಶ. ಅವರ ಈ ಭಾಷಣದ ಬಗ್ಗೆ, ಪಾಕಿಸ್ತಾನೀಯರು ವ್ಯಂಗ್ಯವಾಡುತ್ತಿದ್ದಾರೆ. ಯಾಕಿಷ್ಟು, ಬೂಟ್ ನೆಕ್ಕುವ ಕೆಲಸವನ್ನು ಮಾಡುತ್ತಿದ್ದೀರಾ ಎಂದು ಅವರ ಕಾಲೆಳೆಯಲಾಗುತ್ತಿದೆ.

ಶೃಂಗಸಭೆಯ ನಂತರ ಗೋಷ್ಠಿಯಲ್ಲಿ, ನೀವು ಮೊನ್ನೆ ನನ್ನೊಂದಿಗೆ ಹೇಳಿದ ವಿಚಾರವನ್ನು ಇಲ್ಲಿ ಹಂಚಿಕೊಳ್ಳಿ ಎಂದ ಷರೀಫ್ ಗೆ ಟ್ರಂಪ್ ಸೂಚಿಸಿದ್ದೇ ತಡ, ಟ್ರಂಪ್ ಅವರು ವಿಶ್ವ ಕಂಡ ಅಪರೂಪದ ಶಾಂತಿ ಪ್ರಿಯ ವ್ಯಕ್ತಿ, ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಲು ಅತ್ಯಂತ ಅರ್ಹ ಮತ್ತು ಪ್ರಾಮಾಣಿಕ ವ್ಯಕ್ತಿ ಎಂದೆಲ್ಲಾ ಹೊಗಳಿ ಅಟ್ಟಕೇರಿಸಿಬಿಟ್ಟರು. "ಭಾರತ ಮತ್ತು ಪಾಕಿಸ್ತಾನ, ಎರಡೂ ಪರಮಾಣು ಹೊಂದಿರುವ ರಾಷ್ಟ್ರಗಳು, ಈ ಮಹಾನ್ ವ್ಯಕ್ತಿ ಮಧ್ಯ ಪ್ರವೇಶಿಸದಿದ್ದರೆ, ಯಾರೂ ಊಹಿಸಲೂ ಅಸಾಧ್ಯವಾದ ಮಟ್ಟಕ್ಕೆ ಯುದ್ದ ತಲುಪುತ್ತಿತ್ತು" ಎಂದು, ಷರೀಫ್ ಅವರು, ಟ್ರಂಪ್ ಅವರನ್ನು ಹೊಗಳಿದ್ದರು. ಷರೀಫ್ ಹೊಗಳಿಕೆಗೆ ಖುಷ್ ಆದ ಟ್ರಂಪ್, ನೀವು ನನ್ನನ್ನು ಇಷ್ಟು ಹೊಗಳುತ್ತೀರಾ ಎಂದು ನಿರೀಕ್ಷಿಸಿರಲಿಲ್ಲ. ಇನ್ನು ನಾನು ಹೇಳಲು ಏನೂ ಉಳಿದಿಲ್ಲ ಎಂದು ಸಂತಸ ವ್ಯಕ್ತ ಪಡಿಸಿದ್ದರು. ಪಾಕಿಸ್ತಾನದ ಪ್ರಧಾನಿಗಳ ಮಾತು ವಾಕರಿಕೆ ಉಂಟು ಮಾಡುವಂತದ್ದು ಮತ್ತು ದೇಶಕ್ಕೆ ಮಾಡಿದ ಅವಮಾನ ಎಂದು ಪಾಕಿಸ್ತಾನಿಯರು, ತಮ್ಮ ಪ್ರಧಾನಿಯನ್ನು ಟ್ರೋಲ್ ಮಾಡುತ್ತಿದ್ದಾರೆ. 'ಅನಗತ್ಯವಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಶೆಹಬಾಜ್ ಷರೀಫ್ ನಿರಾಂತರವಾಗಿ ಹೊಗಳುತ್ತಾ, ಪಾಕಿಸ್ತಾನಿಯರಿಗೆ ಅವಮಾನ ಮಾಡುತ್ತಿದ್ದಾರೆ. ನಮಗೆಲ್ಲಾ ಇದು, ಮುಜುಗರ ಬರುವಂತಿದೆ' ಎಂದು ಇತಿಹಾಸಕಾರರಾದ ಅಮರ್ ಆಲಿ, ಕಿಡಿಕಾರಿದ್ದಾರೆ. ಪಾಕಿಸ್ತಾನಿ ರಾಜಕಾರಣಿಗಳು ಯಾಕಿಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ಇನ್ನೊಬ್ಬರು ಕಿಡಿಕಾರಿದ್ದಾರೆ.

Category
ಕರಾವಳಿ ತರಂಗಿಣಿ