image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇತಿಹಾಸ ಪುಟ ಸೇರಲಿದೆಯೇ ಪ್ಯಾರಿಸ್ ನ ಜಗದ್ವಿಖ್ಯಾತ ಐಫಲ್ ಟವರ್!

ಇತಿಹಾಸ ಪುಟ ಸೇರಲಿದೆಯೇ ಪ್ಯಾರಿಸ್ ನ ಜಗದ್ವಿಖ್ಯಾತ ಐಫಲ್ ಟವರ್!

ನವದೆಹಲಿ: ಪ್ಯಾರಿಸ್ ನಲ್ಲಿರುವ ಜಗದ್ವಿಖ್ಯಾತ ಐಫಲ್ ಟವರ್ (Eiffel Tower) ಶೀಘ್ರವೇ ಇತಿಹಾಸದ ಪುಟಗಳನ್ನು ಸೇರಲಿದೆ ಎಂಬ ಸುದ್ದಿ ವ್ಯಾಪಕವಾಗಿ ಪ್ರಚಾರವಾಗುತ್ತಿದೆ.  ಕೆಲ ಮಾಧ್ಯಮ ವರದಿಗಳು ಪ್ಯಾರಿಸ್‌ನ ಐಫೆಲ್ ಟವರ್ ನ್ನು 2026 ರಲ್ಲಿ ಕೆಡವಲು ನಿರ್ಧರಿಸಲಾಗಿದೆ ಎಂಬ ವ್ಯಾಪಕ ಕಳವಳವನ್ನು ಹುಟ್ಟುಹಾಕಿವೆ. X ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟಗೊಂಡಿರುವ ಈ ಪೋಸ್ಟ್‌ಗಳು, "ಕಾರ್ಯಾಚರಣಾ ಗುತ್ತಿಗೆ" ಅವಧಿ ಮುಗಿಯುತ್ತಿದ್ದು, ರಚನೆಯಲ್ಲಿನ ಸಹಜ ದುರಸ್ತಿಗಳು, ದುಬಾರಿ ನಿರ್ವಹಣೆ ಮತ್ತು ಸಾರ್ವಜನಿಕ ದೂರುಗಳ ಕಾರಣದಿಂದಾಗಿ 2026 ರಲ್ಲಿ ಐಫಲ್ ಟವರ್ ನ್ನು ಕೆಡವಲಾಗುತ್ತದೆ ಎಂದು ಹೇಳುತ್ತಿವೆ.

ಇದಕ್ಕೆ ಪೂರಕವೆಂಬಂತೆ, ಐಫಲ್ ಟವರ್ ನ್ನು ಅಕ್ಟೋಬರ್ 2, 2025 ರಿಂದ ರಾಷ್ಟ್ರವ್ಯಾಪಿ ಮುಷ್ಕರದಿಂದಾಗಿ ಸಂದರ್ಶಕರಿಗೆ ಮುಚ್ಚಲಾಗಿದೆ. ಪ್ರತಿಭಟನಾಕಾರರು ಪ್ಲೇಸ್ ಡಿ'ಇಟಲಿಯಿಂದ ಸ್ಮಾರಕದ ಕಡೆಗೆ ಮೆರವಣಿಗೆ ನಡೆಸುತ್ತಿದ್ದಂತೆ, ಅದರ ಆಡಳಿತ ಮಂಡಳಿಯು ಸಂದರ್ಶಕರಿಗೆ ಎಫಿಲ್ ಟವರ್ ಪ್ರವೇಶಿಸುವುದನ್ನು ಮುಚ್ಚಿರುವುದನ್ನು ದೃಢಪಡಿಸುವ ಹೇಳಿಕೆಯನ್ನು ನೀಡಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. "ಐಫೆಲ್ ಟವರ್ ಶೀಘ್ರದಲ್ಲೇ ಕೆಡವಲಾಗುವುದು" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿದ್ದಾರೆ. ಈ ಹೇಳಿಕೆಗಳು ವ್ಯಾಪಕ ಕಳವಳಕ್ಕೆ ಕಾರಣವಾಗಿವೆ, ಆದರೆ ಅವುಗಳಲ್ಲಿ ಯಾವುದೇ ಸತ್ಯವಿಲ್ಲ. ಎಫಿಲ್ ಟವರ್ ಕೆಡವುದು ಇನ್ನೂ ನಿರ್ಧರಿತವಾಗಿಲ್ಲ ಮತ್ತು ನಿಮ್ಮ ಕನಸಿನ ಪ್ಯಾರಿಸ್ ಪ್ರವಾಸ ಸುರಕ್ಷಿತವಾಗಿಯೇ ಇದೆ ಎಂದು ಸಂದರ್ಶಕರು ಖಚಿತವಾಗಿ ಹೇಳಬಹುದು ಎಂದು ಎಫಿಲ್ ಟವರ್ ನಿರ್ವಹಣೆ ಮಾಡುತ್ತಿರುವ ಸಂಸ್ಥೆ ಹೇಳಿದೆ. 2026 ರಲ್ಲಿ ಎಫಿಲ್ ಟವರ್ ನ್ನು ಕೆಡವಲಾಗುವುದು ಎಂಬ ಹೇಳಿಕೆಯು ಸೆಪ್ಟೆಂಬರ್ 18, 2025 ರಂದು ವಿಡಂಬನಾತ್ಮಕ ವಿಷಯಕ್ಕೆ ಹೆಸರುವಾಸಿಯಾದ ಟ್ಯಾಪಿಯೋಕಾ ಟೈಮ್ಸ್ ವೆಬ್‌ಸೈಟ್ ಪ್ರಕಟಿಸಿದ ವಿಡಂಬನಾತ್ಮಕ ಲೇಖನದಿಂದ ಹುಟ್ಟಿಕೊಂಡಿದೆ.

Category
ಕರಾವಳಿ ತರಂಗಿಣಿ