image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಉತ್ತರ ಶ್ರೀಲಂಕಾದ ಜಲ ಗಡಿ ಪ್ರದೇಶದಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ 47 ಭಾರತೀಯ ಮೀನುಗಾರರ ಬಂಧನ

ಉತ್ತರ ಶ್ರೀಲಂಕಾದ ಜಲ ಗಡಿ ಪ್ರದೇಶದಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ 47 ಭಾರತೀಯ ಮೀನುಗಾರರ ಬಂಧನ

ಕೊಲಂಬೊ: ಉತ್ತರ ಶ್ರೀಲಂಕಾದ ಜಲ ಗಡಿ ಪ್ರದೇಶದಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ 47 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ನೌಕಾಪಡೆ ತಿಳಿಸಿದೆ. ಉತ್ತರ ಶ್ರೀಲಂಕಾದ ತಲೈಮನ್ನಾರ್‌ನಲ್ಲಿ ನಡೆದ ಪ್ರಕರಣ ಸಂಬಂಧ ಐದು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನ್ನಾರ್ ಮತ್ತು ಡೆಲ್ಫ್ಟ್ ಸಾಗರ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ. ಬಂಧಿತರನ್ನು ಮುಂದಿನ ಕ್ರಮಕ್ಕಾಗಿ ಮನ್ನಾರ್ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದೆ. ಕಳೆದ ತಿಂಗಳು, ಉತ್ತರ ಶ್ರೀಲಂಕಾದ ಜಾಫ್ನಾ ಬಳಿ 12 ಭಾರತೀಯ ಮೀನುಗಾರರು ಹಾಗೂ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

Category
ಕರಾವಳಿ ತರಂಗಿಣಿ