image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ವೀಸಾ ಸಂಘರ್ಷ : ಭಾರತಕ್ಕೆ ಕಾರ್ಯಾಚರಣೆ ವರ್ಗಾಯಿಸಲು ಮುಂದಾದ ಅಮೇರಿಕಾದ ಕಂಪನಿಗಳು

ವೀಸಾ ಸಂಘರ್ಷ : ಭಾರತಕ್ಕೆ ಕಾರ್ಯಾಚರಣೆ ವರ್ಗಾಯಿಸಲು ಮುಂದಾದ ಅಮೇರಿಕಾದ ಕಂಪನಿಗಳು

ವಾಷಿಂಗ್ಟನ್‌ : ಅಮೆರಿಕ ಡೊನಾಲ್ಡ್ ಟ್ರಂಪ್ ಅವರ H-1B ವೀಸಾ ಅರ್ಜಿ ಶುಲ್ಕ ಹೆಚ್ಚಳ ಕ್ರಮವು, ಅಮೆರಿಕದ ಕಂಪನಿಗಳು ಭಾರತಕ್ಕೆ ನಿರ್ಣಾಯಕ ಕೆಲಸಗಳನ್ನು ವರ್ಗಾಯಿಸುವಂತೆ ಒತ್ತಾಯಿಸಿದೆ. ಟ್ರಂಪ್‌ ಅವರ ಆತುರದ ನಿರ್ಧಾರ ಭಾರತಕ್ಕೆ ವರದಾನವಾಗಿ ಪರಿಣಮಿಸುವ ಸಾಧ್ಯತೆಯೇ ದಟ್ಟವಾಗತೊಡಗಿದೆ. ಈ ಕುರಿತು ಮಾತನಾಡಿರುವ ಅಮೆರಿಕ ಅರ್ಥಶಾಸ್ತ್ರಜ್ಞರು ಮತ್ತು ಉದ್ಯಮವನ್ನು ಚೆನ್ನಾಗಿ ಬಲ್ಲ ತಜ್ಞರು, ಈ ಬದಾಲಾವಣೆಗಳು ಭಾರತದ ಹಣಕಾಸು, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCCs) ಬೆಳವಣಿಗೆಗೆ ವೇಗ ನೀಡುತ್ತದೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆತಾದ ಭಾರತವು ಸುಮಾರು 1,700 GCCಗಳಿಗೆ ನೆಲೆಯಾಗಿದೆ. ಇದು ಜಾಗತಿಕ ಹಂಚಿಕೆಯ ಅರ್ಧಕ್ಕಿಂತ ಹೆಚ್ಚು ಎಂಬುದು ಉಲ್ಲೇಖನೀಯ. ಭಾರತವು ಐಷಾರಾಮಿ ಕಾರು ಡ್ಯಾಶ್‌ಬೋರ್ಡ್‌ಗಳ ವಿನ್ಯಾಸದಿಂದ ಹಿಡಿದು ಔಷಧ ಅನ್ವೇಷಣೆಯವರೆಗಿನ ಕ್ಷೇತ್ರಗಳಲ್ಲಿ, ತನ್ನ ತಾಂತ್ರಿಕ ಬೆಂಬಲ ಮೂಲಗಳನ್ನು ಮೀರಿ ಹೆಚ್ಚಿನ ಮೌಲ್ಯದ ನಾವೀನ್ಯತೆಯ ಕೇಂದ್ರವಾಗಿದೆ. ಕೃತಕ ಬುದ್ಧಿಮತ್ತೆ (AI)ಯ ಅಳವಡಿಕೆ ಹೆಚ್ಚುತ್ತಿರುವುದು ಮತ್ತು ವೀಸಾಗಳ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸುವಂತಹ ಪ್ರವೃತ್ತಿಗಳು, ಯುಎಸ್ ಕಂಪನಿಗಳನ್ನು ಕಾರ್ಮಿಕ ತಂತ್ರಗಳನ್ನು ಪುನಃ ರೂಪಿಸಲು ಒತ್ತಾಯಿಸುತ್ತಿವೆ. ಭಾರತದಲ್ಲಿನ GCCಗಳು ಬಲವಾದ ದೇಶೀಯ ನಾಯಕತ್ವದೊಂದಿಗೆ ಜಾಗತಿಕ ಕೌಶಲ್ಯಗಳನ್ನು ಸಂಯೋಜಿಸುವ ಸ್ಥಿತಿಸ್ಥಾಪಕ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಈ ಕುರಿತು ಮಾತನಾಡಿರುವ ಡೆಲಾಯ್ಟ್ ಇಂಡಿಯಾದ ಪಾಲುದಾರ ಮತ್ತು ಜಿಸಿಸಿ ಉದ್ಯಮದ ನಾಯಕ ರೋಹನ್ ಲೋಬೊ, "ಜಿಸಿಸಿಗಳು ಈ ಕ್ಷಣದಲ್ಲಿ ಬದಲಾವಣೆಯ ಪರ್ವವನ್ನು ಹಾದು ಹೋಗುತ್ತಿವೆ. ಅವು ಸಿದ್ಧ ಆಂತರಿಕ ಎಂಜಿನ್ ಆಗಿ ಕಾರ್ಯನಿರ್ವಹಿಸುತ್ತವೆ" ಎಂದು

ಅಭಿಪ್ರಾಯಪಟ್ಟಿದ್ದಾರೆ. ಟ್ರಂಪ್‌ ಆಡಳಿತದ ವೀಸಾ ನಿಯಂತ್ರಣ ನೀತಿಯು, ಹಲವಾರು ಯುಎಸ್ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಅಗತ್ಯಗಳನ್ನು ಮರುಮೌಲ್ಯಮಾಪನ ಮಾಡುವಂತೆಯೂ ಒತ್ತಾಯಿಸಿರುವುದು ಸ್ಪಷ್ಟ. "ಹಣಕಾಸು ಸೇವೆಗಳು ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಮತ್ತು ವಿಶೇಷವಾಗಿ ಯುಎಸ್ ಫೆಡರಲ್ ಒಪ್ಪಂದಗಳಿಗೆ ಒಡ್ಡಿಕೊಳ್ಳುವ ಸಂಸ್ಥೆಗಳಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡುಬರುತ್ತಿದ್ದು, ಜಿಸಿಸಿಗಳು ಸಮಯಕ್ಕೆ ಸರಿಯಾಗಿ ಹೆಚ್ಚು ಕಾರ್ಯತಂತ್ರದ, ನಾವೀನ್ಯತೆ-ನೇತೃತ್ವದ ಆದೇಶಗಳ ಪಾಲನೆಗೆ ಸಜ್ಜಾಗಿವೆ" ಎಂದು ರೋಹನ್ ಲೋಬೊ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ತಿಂಗಳ ಆರಂಭದಲ್ಲಿ H-1B ವೀಸಾ ಅರ್ಜಿಗಳ ಶುಲ್ಕ ಹೆಚ್ಚಳ ಮಾಡುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. ಈ ವೀಸಾ ಅರ್ಜಿಗಳ ಶುಲ್ಕವನ್ನು ಟ್ರಂಪ್‌ ಆಡಳಿತ 100,000 ಅಮೆರಿಕನ್‌ ಡಾಲರ್‌ಗೆ ಏರಿಕೆ ಮಾಡಿದೆ. ಇದು ಕೌಶಲ್ಯಪೂರ್ಣ ವಿದೇಶಿ ಕಾರ್ಮಿಕರನ್ನು ಅವಲಂಬಿಸಿರುವ ಯುಎಸ್ ಸಂಸ್ಥೆಗಳ ಮೇಲೆ ಭಾರೀ ಪರಿಣಾಮವನ್ನು ಉಂಟುಮಾಡಿದೆ.

Category
ಕರಾವಳಿ ತರಂಗಿಣಿ