image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿಗೆ ಬ್ರಿಟಿಷ್ ಪೌರತ್ವ

ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿಗೆ ಬ್ರಿಟಿಷ್ ಪೌರತ್ವ

ಲಂಡನ್: ಕಳೆದ ಹಲವು ವರ್ಷಗಳಿಂದ ಲಂಡನ್‌ನಲ್ಲಿ ನೆಲೆಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸಂಸ್ಥಾಪಕ ಲಲಿತ್ ಮೋದಿ ಅವರು ಬ್ರಿಟಿಷ್ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಯುನೈಟೆಡ್ ಕಿಂಗ್‌ಡಮ್ ಅನೇಕ ವರ್ಷಗಳಿಂದ ತಮ್ಮ ಮನೆಯಾಗಿದೆ ಎಂದು ಹೇಳಿಕೊಂಡಿರುವ ಅವರು, ಇತ್ತೀಚೆಗೆ ತಮಗೆ ಅಲ್ಲಿನ ಪೌರತ್ವ ಲಭಿಸಿರುವುದಾಗಿ ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.

ಶನಿವಾರದಂದು ಪ್ರತಿಷ್ಠಿತ ಆಕ್ಸ್‌ಫರ್ಡ್ ಯೂನಿಯನ್‌ನಲ್ಲಿ ಮಾತನಾಡುತ್ತಾ ಈ ವೈಯಕ್ತಿಕ ಮೈಲಿಗಲ್ಲಿನ ಬಗ್ಗೆ ಸಾರ್ವಜನಿಕವಾಗಿ ಹಂಚಿಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ ಮೋದಿ, ಸೆಪ್ಟೆಂಬರ್ 15, 2026ರಂದು ಲಂಡನ್‌ನ ಟೌನ್ ಹಾಲ್‌ವೊಂದರಲ್ಲಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ಪೌರತ್ವ ಸ್ವೀಕಾರ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬ್ರಿಟಿಷ್ ಪ್ರಜೆಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಹಾಗೂ ಈ ಸಮಾರಂಭವು ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನ ಹೊಂದಿರುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಯುನೈಟೆಡ್ ಕಿಂಗ್‌ಡಮ್‌ನ ಜನರು, ಸಂಸ್ಥೆಗಳು, ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ತಾವು ಬಹಳಷ್ಟು ಗೌರವಿಸುವುದಾಗಿ ತಿಳಿಸಿರುವ ಮೋದಿ, ಬ್ರಿಟಿಷ್ ಪೌರತ್ವವನ್ನು ಒಂದು ಸವಲತ್ತು ಮತ್ತು ಜವಾಬ್ದಾರಿ ಎಂದು ಬಣ್ಣಿಸಿದ್ದಾರೆ. ವಿವಿಧ ಸಂಸ್ಕೃತಿಗಳು ಮತ್ತು ಅನುಭವಗಳಿಂದ ತಮ್ಮ ಜೀವನದ ಪಯಣ ರೂಪಿತವಾಗಿದ್ದು, ಹೆಮ್ಮೆಯಿಂದ 'ನೆಲೆ' ಎಂದು ಕರೆಯುವ ಈ ದೇಶಕ್ಕೆ ಸಕಾರಾತ್ಮಕ ಕೊಡುಗೆ ನೀಡುವುದನ್ನು ಮುಂದುವರೆಸಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಈ ಸ್ಮರಣೀಯ ಅವಕಾಶ ನೀಡಿದ ಆಕ್ಸ್‌ಫರ್ಡ್ ಯೂನಿಯನ್, ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಧನ್ಯವಾದ ಅರ್ಪಿಸಿರುವ ಅವರು, ಇದು ತಮ್ಮ ಜೀವನದ ಹೊಸ ಅಧ್ಯಾಯವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ