ಉತ್ತರ ಕೊರಿಯಾ : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಅವರ ಆರೋಗ್ಯ ಮತ್ತು ಮರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಚೀನಾ ಡೆಮಾಕ್ರಸಿ ಪಾರ್ಟಿಯ ಅಧ್ಯಕ್ಷ ವಾಂಜುನ್ ಕ್ಸಿ ಅವರು, ಕಿಮ್ ಜಾಂಗ್-ಉನ್ ತೀವ್ರ ಮೆದುಳಿನ ರಕ್ತಸ್ರಾವದಿಂದ ಕೋಮಾಕ್ಕೆೆ ಜಾರಿಬಿದ್ದು ಬೀಜಿಂಗ್ನಲ್ಲಿ ನಿಧನರಾಗಿದ್ದಾರೆ ಎಂದೂ, ಅಧಿಕಾರ ಬದಲಾವಣೆಯ ಭೀತಿಯಿಂದ ಪಯೋಂಗ್ಯಾಂಗ್ಗೆ 9,000 ಚೀನೀ ಸೈನಿಕರನ್ನು ರವಾನಿಸಲಾಗಿದೆ ಎಂದೂ ಗಂಭೀರ ಆರೋಪಗಳನ್ನು ಮಾಡಿದ್ದರು. ಅಲ್ಲದೆ, ಕಿಮ್ ಸಹೋದರಿ ಕಿಮ್ ಯೋ-ಜಾಂಗ್ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ ಎಂದೂ ಅವರು ಪ್ರತಿಪಾದಿಸಿದ್ದರು. ಆದರೆ ಈ ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿರುವ ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮಗಳು, ಕಿಮ್ ಜಾಂಗ್-ಉನ್ ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ಪ್ರದರ್ಶನವೊಂದರಲ್ಲಿ ಭಾಗವಹಿಸಿರುವ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಅವರು ಸಕ್ರಿಯವಾಗಿರುವುದನ್ನು ಖಚಿತಪಡಿಸಿವೆ. ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು ಸಹ ಈ ವದಂತಿಗಳನ್ನು ಅಲ್ಲಗಳೆದಿದ್ದು, ಜಾಗತಿಕ ಸಮುದಾಯವು ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.