ಅಮೇರಿಕ : ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮಾಜಿ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರಿಗೆ ಬಾಂಗ್ಲಾದೇಶಿ ವಲಸಿಗರಿಂದ ತೀವ್ರ ವಿರೋಧ ಹಾಗೂ ಮುಖಭಂಗ ಎದುರಾಗಿದೆ. ಸೋಮವಾರ ದೋಹಾದಿಂದ ಆಗಮಿಸಿದ ಅವರನ್ನು ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ಪ್ರಜಾಪ್ರಭುತ್ವ ಹತ್ತಿಕ್ಕಿದ ಆರೋಪ ಹಾಗೂ ಸಾವುನೋವುಗಳಿಗೆ ಅವರೇ ಹೊಣೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಅವರನ್ನು ಕೂಡಲೇ ವೀಲ್ಚೇರ್ನಲ್ಲಿ ಟರ್ಮಿನಲ್ ಒಳಗೆ ಕರೆದೊಯ್ಯಲಾಯಿತು. ಇದರೊಂದಿಗೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ದೌರ್ಜನ್ಯ ಖಂಡಿಸಿ ಪ್ರತಿಭಟನೆಗಳು ನಡೆದು, ಅವರ ನೋಬೆಲ್ ಪ್ರಶಸ್ತಿ ಹಿಂಪಡೆಯುವಂತೆ ಆಗ್ರಹಿಸಲಾಗಿದೆ.