image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ರಷ್ಯಾದಿಂದ ತೈಲ ಆಮದು: ಅಮೆರಿಕದ ಇಬ್ಬಂದಿ ನೀತಿ ಜಗಜ್ಜಾಹೀರು

ರಷ್ಯಾದಿಂದ ತೈಲ ಆಮದು: ಅಮೆರಿಕದ ಇಬ್ಬಂದಿ ನೀತಿ ಜಗಜ್ಜಾಹೀರು

ಅಮೇರಿಕ : ರಷ್ಯಾದಿಂದ ಕಚ್ಚಾತೈಲ ಮತ್ತು ಇಂಧನ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಭಾರತ ಅನುಸರಿಸಿದ್ದ ಸ್ವತಂತ್ರ ಹಾಗೂ ರಾಷ್ಟ್ರೀಯ ಹಿತಾಸಕ್ತಿಯ ನಿಲುವು ಸಂಪೂರ್ಣ ಸರಿ ಎಂಬುದು ಅಮೆರಿಕದ ಇತ್ತೀಚಿನ ನಡೆóಯಿಂದ ಮತ್ತೊಮ್ಮೆ ಸಾಬೀತಾಗಿದೆ. ಹಿಂದೆ ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಭಾರತ ಹಾಗೂ ಚೀನಾವನ್ನು ಗುರಿಯಾಗಿಸಿ ಭಾರಿ ಆರ್ಥಿಕ ಸುಂಕಗಳ ಬೆದರಿಕೆ ಒಡ್ಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ತಾವೇ ರಷ್ಯಾದಿಂದ ಬೃಹತ್ ಪ್ರಮಾಣದ ಡೀಸೆಲ್ ಖರೀದಿಸಲು ಮುಂದಾಗುವ ಮೂಲಕ ತಮ್ಮ ಇಬ್ಬಂದಿ ನೀತಿಯನ್ನು ಜಗತ್ತಿನೆದುರು ಬಹಿರಂಗಪಡಿಸಿದ್ದಾರೆ.

ಅಮೆರಿಕದ ನಾಗರಿಕರಿಗೆ ಅಗ್ಗದ ದರದಲ್ಲಿ ಇಂಧನ ಪೂರೈಕೆ ಮಾಡುವ ಉದ್ದೇಶದಿಂದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಇಂಧನ ಒಪ್ಪಂದ ಮಾಡಿಕೊಳ್ಳಲಾಗಿದ್ದು, ತಕ್ಷಣವೇ 3 ಲಕ್ಷ ಟನ್ ಡೀಸೆಲ್ ಅಮೆರಿಕಕ್ಕೆ ಪೂರೈಕೆಯಾಗಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಬರೋಬ್ಬರಿ 30 ಲಕ್ಷ ಟನ್ ಡೀಸೆಲ್ ಅನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

ಆದರೆ, ರಷ್ಯಾ-ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ರಷ್ಯಾದಿಂದ ಇಂಧನ ಖರೀದಿಸುತ್ತಿದ್ದ ಭಾರತದ ಮೇಲೆ ಟ್ರಂಪ್ ಆಡಳಿತವು ಈ ಹಿಂದೆ ಶೇ. 25 ರಷ್ಟು ಹೆಚ್ಚುವರಿ ಸುಂಕ ಹೇರಿ, ಒಟ್ಟು ಸುಂಕದ ಪ್ರಮಾಣವನ್ನು ಶೇ. 50 ಕ್ಕೆ ಏರಿಸಿತ್ತು. ಭಾರತೀಯರ ಇಂಧನ ಭದ್ರತೆ ಮತ್ತು ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ ಸರ್ಕಾರ ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಿದಾಗ, ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಭಾರತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.

ಪ್ರತಿಯೊಂದು ರಾಷ್ಟ್ರದ ನಾಯಕನೂ ಮೊದಲು ತನ್ನ ದೇಶದ ಜನರ ಹಿತಾಸಕ್ತಿಯನ್ನು ಕಾಪಾಡುವುದು ಪ್ರಥಮ ಕರ್ತವ್ಯ ಎಂಬುದನ್ನು ಭಾರತ ಆರಂಭದಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಇಂದು ಸ್ವತಃ ಅಮೆರಿಕವೇ ತನ್ನ ದೇಶದ ಪ್ರಜೆಗಳ ಹಿತ ಕಾಯಲು ರಷ್ಯಾದಿಂದ ಅಗ್ಗದ ಇಂಧನ ಖರೀದಿಸಿರುವುದರಲ್ಲಿ ಯಾವುದೇ ತಪ್ಪಿಲ್ಲದಿರುವಾಗ, ಅನ್ಯ ದೇಶಗಳು ತಮ್ಮ ಪ್ರಜೆಗಳ ಹಿತಕ್ಕಾಗಿ ಅದೇ ನಿರ್ಧಾರ ಕೈಗೊಂಡಾಗ ನೈತಿಕ ಉಪದೇಶ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಜಾಗತಿಕ ಮಟ್ಟದಲ್ಲಿ ಬಲವಾಗಿ ಚರ್ಚೆಗೆ ಗ್ರಾಸವಾಗಿದೆ.

Category
ಕರಾವಳಿ ತರಂಗಿಣಿ