image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಡೊನಾಲ್ಡ್ ಟ್ರಂಪ್ ಪಟ್ಟು: 'ಎಂಟು ಯುದ್ಧ ನಿಲ್ಲಿಸಿದ ಹೆಗ್ಗಳಿಕೆ ನನ್ನದು'

ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಡೊನಾಲ್ಡ್ ಟ್ರಂಪ್ ಪಟ್ಟು: 'ಎಂಟು ಯುದ್ಧ ನಿಲ್ಲಿಸಿದ ಹೆಗ್ಗಳಿಕೆ ನನ್ನದು'

ವಾಷಿಂಗ್ಟನ್: ನಾರ್ವೆಯ ನೊಬೆಲ್ ಸಮಿತಿಯು ಶುಕ್ರವಾರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಣೆ ಮಾಡಲಿರುವ ಹಿನ್ನೆಲೆಯಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಕೈಗೊಂಡ ಶಾಂತಿ ಸ್ಥಾಪನೆಯ ಕಾರ್ಯಗಳನ್ನು ಉಲ್ಲೇಖಿಸಿ ಪ್ರಶಸ್ತಿಗಾಗಿ ಬಲವಾದ ಪ್ರತಿಪಾದನೆ ಮಂಡಿಸಿದ್ದಾರೆ. ಓವಲ್ ಆಫೀಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೇರೆ ಯಾರೂ ಮಾಡದ ಕೆಲಸವನ್ನು ನಾನು ಮಾಡಿದ್ದೇನೆ. ಹೊಗಳಿಕೊಳ್ಳುತ್ತಿಲ್ಲ, ಸತ್ಯ ಹೇಳುತ್ತಿದ್ದೇನೆ ಅಷ್ಟೇ. ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ, ಬಹುಶಃ ಯಾವ ಅಧ್ಯಕ್ಷರೂ ಇಷ್ಟು ಯುದ್ಧಗಳನ್ನು ನಿಲ್ಲಿಸಿಲ್ಲ" ಎಂದು ತಮ್ಮ ಬೆನ್ನು ತಟ್ಟಿಕೊಂಡಿದ್ದಾರೆ.

ಪ್ರಶಸ್ತಿಗೆ ತಮ್ಮನ್ನು ಪರಿಗಣಿಸದೇ ಇದ್ದರೆ ಅದು ನೊಬೆಲ್ ಸಮಿತಿಗೇ ದೊಡ್ಡ ಅಪಖ್ಯಾತಿ ತರಲಿದೆ ಎಂದು ಅಭಿಪ್ರಾಯಪಟ್ಟಿರುವ ಟ್ರಂಪ್, ತಮ್ಮಂತಹ ವ್ಯಕ್ತಿಗೆ ಪ್ರಶಸ್ತಿ ನೀಡಿ ಗೌರವಿಸದಿದ್ದರೆ ಅದು ಸಂಸ್ಥೆಗೆ ಆಗುವ ಅಪಮಾನ ಎಂದಿದ್ದಾರೆ. ತಮಗೆ ಪ್ರಶಸ್ತಿ ಸಿಕ್ಕರೂ, ಸಿಗದಿದ್ದರೂ ಶಾಂತಿ ಸ್ಥಾಪನೆಯ ಇಂತಹ ಕೆಲಸಗಳನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ಯುದ್ಧವನ್ನು ಕೊನೆಗೊಳಿಸುವ ಹಾದಿಯಲ್ಲಿದ್ದೇನೆ ಎಂಬ ಸುಳಿವನ್ನು ನೀಡಿದ್ದಾರೆ.

Category
ಕರಾವಳಿ ತರಂಗಿಣಿ