image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಫ್ಲೈದುಬಾಯಿ ವಿಮಾನ ಪತನ ಯತ್ನ: ಇರಾನ್ ಕೈವಾಡವಿದ್ದರೆ ತೀವ್ರ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್

ಫ್ಲೈದುಬಾಯಿ ವಿಮಾನ ಪತನ ಯತ್ನ: ಇರಾನ್ ಕೈವಾಡವಿದ್ದರೆ ತೀವ್ರ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್

ಅಮೇರಿಕ : ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌‌ಗೆ ತೆರಳುತ್ತಿದ್ದ ಫ್ಲೈದುಬಾಯಿ ವಿಮಾನವನ್ನು ಪತನಗೊಳಿಸಲು ಸಹ-ಪೈಲಟ್ ನಡೆಸಿದ ಭೀಕರ ಸಂಚಿನ ಹಿಂದೆ ಇರಾನ್ ಪಾತ್ರವಿರುವುದು ಸಾಬೀತಾದರೆ, ಆ ದೇಶದ ಮೇಲೆ ತೀವ್ರ ಸ್ವರೂಪದ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ವಿಮಾನ ಹಾರಾಟ ಶುರುವಾಗಿ ಸುಮಾರು ಎರಡೂವರೆ ಗಂಟೆಯ ನಂತರ ಕಾಕ್‌‌ಪಿಟ್‌ನಲ್ಲಿದ್ದ ಸಹ-ಪೈಲಟ್, ಮುಖ್ಯ ಪೈಲಟ್ ಮೇಲೆ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿ ವಿಮಾನವನ್ನು ಕೆಳಕ್ಕೆ ಬೀಳಿಸಲು ಯತ್ನಿಸಿದ್ದನು. ಒಟ್ಟು 182 ಪ್ರಯಾಣಿಕರಿದ್ದ ವಿಮಾನ ಏಕಾಏಕಿ ಕೆಳಮುಖವಾಗಿ ಧುಮುಕಲಾರಂಭಿಸಿದಾಗ ಭಾರೀ ಆತಂಕ ಸೃಷ್ಟಿಯಾಗಿತ್ತು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಅಸಾಮಾನ್ಯ ಧೈರ್ಯ ಪ್ರದರ್ಶಿಸಿದರು. ತೀವ್ರ ರಕ್ತಸ್ರಾವದ ನಡುವೆಯೂ ಅವರು ಕಾಕ್‌ಪಿಟ್ ಬಾಗಿಲು ತೆರೆದು ಪ್ರಯಾಣಿಕರಿಗೆ ಒಳಬರಲು ಅವಕಾಶ ಮಾಡಿಕೊಟ್ಟಿದ್ದರಿಂದ, ಪ್ರಯಾಣಿಕರು ದಾಂದಲೆಕೋರ ಸಹ-ಪೈಲಟ್‌ನನ್ನು ನಿಯಂತ್ರಿಸಿ ಬೃಹತ್ ದುರಂತವನ್ನು ತಪ್ಪಿಸಿದ್ದಾರೆ.

ಈ ಭೀಕರ ಘಟನೆಯ ಕುರಿತು ತನಿಖೆ ಮುಂದುವರಿಯುತ್ತಿರುವಂತೆಯೇ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಟ್ರಂಪ್, ಈ ಕೃತ್ಯದ ಹಿಂದೆ ಇರಾನ್ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ತಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಇರಾನ್ ಸಕ್ರಿಯವಾಗಿ ಭಾಗಿಯಾಗಿರುವ ಸೂಚನೆಗಳಿವೆ, ಆದಾಗ್ಯೂ ತನಿಖೆಯ ಪೂರ್ಣ ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಈ ದಾಳಿಯ ಹಿಂದೆ ಇರಾನ್ ಇರುವುದು ದೃಢಪಟ್ಟರೆ, ಅಮೆರಿಕವು ಆ ದೇಶದ ಮೇಲೆ ಅತ್ಯಂತ ಕಠಿಣ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ