image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಪಾಕಿಸ್ತಾನ, ಟರ್ಕಿಗೆ ಹೌದಿಗಳಿಂದ ನೇರ ಮಿಲಿಟರಿ ಎಚ್ಚರಿಕೆ

ಪಾಕಿಸ್ತಾನ, ಟರ್ಕಿಗೆ ಹೌದಿಗಳಿಂದ ನೇರ ಮಿಲಿಟರಿ ಎಚ್ಚರಿಕೆ

ಎಮೆನ್ : ಸೌದಿ ಅರೇಬಿಯಾದ ಬೆಂಬಲಕ್ಕೆ ಪಡೆಗಳನ್ನು ನಿಯೋಜಿಸದಂತೆ ಅಥವಾ ಮಿಲಿಟರಿ ಹಸ್ತಕ್ಷೇಪ ಮಾಡದಂತೆ ಯಮನ್‌ನ ಹೌದಿ ಸಂಘಟನೆಯು ಪಾಕಿಸ್ತಾನ ಮತ್ತು ತುರ್ಕಿಯೆ ವಿರುದ್ಧ ಸ್ಪಷ್ಟ ಮಿಲಿಟರಿ ಬೆದರಿಕೆ ಒಡ್ಡಿದೆ. ಇಸ್ಲಾಮಾಬಾದ್ ಅಥವಾ ಅಂಕಾರಾದಿಂದ ಸೌದಿ ಪರವಾಗಿ ಯಾವುದೇ ನೇರ ಸೇನಾ ಹಸ್ತಕ್ಷೇಪ ನಡೆದರೆ, ಎರಡೂ ದೇಶಗಳ ವಿರುದ್ಧ ತೀವ್ರ ಹಾಗೂ ತಕ್ಷಣದ ಮಿಲಿಟರಿ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಹೌದಿಗಳ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.

ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ತುರ್ಕಿಯೆ ದೇಶಗಳ ನಡುವೆ ಆಗಸ್ಟ್‌ನಲ್ಲಿ ಸಹಿ ಮಾಡಲಾದ ತ್ರಿಪಕ್ಷೀಯ ಜಂಟಿ ಭದ್ರತಾ ಒಪ್ಪಂದ 'ಮಕ್ಕಾ ಜಂಟಿ ರಕ್ಷಣಾ ಒಪ್ಪಂದ'ವನ್ನು ಸಕ್ರಿಯಗೊಳಿಸುವ ಸಂಭಾವ್ಯತೆಯ ಕುರಿತು ಪಾಕಿಸ್ತಾನಿ ರಕ್ಷಣಾ ಅಧಿಕಾರಿಗಳು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಹೌದಿಗಳಿಂದ ಈ ಕಠಿಣ ಎಚ್ಚರಿಕೆ ಹೊರಬಿದ್ದಿದೆ.

ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಹೌದಿ ಮುಖಂಡರು, ಸೌದಿ ನೇತೃತ್ವದ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಆರ್ಥಿಕ ದಿಗ್ಬಂಧನಗಳ ವಿರುದ್ಧ ತಾವು ರಕ್ಷಣಾತ್ಮಕ ಪ್ರತಿಕ್ರಮಗಳನ್ನು ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಪಾಕಿಸ್ತಾನ ಅಥವಾ ತುರ್ಕಿಯೆ ಪಡೆಗಳು ಸೌದಿಯೊಂದಿಗೆ ಕೈಜೋಡಿಸಿ ದಾಳಿಗೆ ಇಳಿದರೆ, ತಮ್ಮ ಸಂಘಟನೆಯು 'ಕಬ್ಬಿಣದ ಮುಷ್ಟಿ'ಯಿಂದ ಭಾರಿ ಪ್ರತಿದಾಳಿ ನಡೆಸಲಿದೆ ಎಂದು ಖಡಕ್ ಆಗಿ ಹೇಳಿದ್ದಾರೆ. ಸಂಘರ್ಷಕ್ಕೆ ಧುಮುಕುವ ಯಾವುದೇ ವಿದೇಶಿ ಶಕ್ತಿಯನ್ನೂ ಶಿಕ್ಷೆಗೆ ಒಳಪಡಿಸುವುದಾಗಿ ಬೆದರಿಕೆ ಹಾಕಿರುವ ಅವರು, ಸೌದಿ ಒಕ್ಕೂಟದ ಮಿಲಿಟರಿ ಪ್ರಾತಿನಿಧಿಕ ಪಡೆಗಳಾಗಿ ಕಾರ್ಯನಿರ್ವಹಿಸುವ ಬದಲು ಎರಡೂ ಶಕ್ತಿಗಳು ಸಂಪೂರ್ಣ ತಟಸ್ಥ ನಿಲುವು ತಳೆಯುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ