image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾನ್ ರಿಯಾಲ್ ಮೌಲ್ಯ ಐತಿಹಾಸಿಕ ಕುಸಿತ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ದೇಶ

ಇರಾನ್ ರಿಯಾಲ್ ಮೌಲ್ಯ ಐತಿಹಾಸಿಕ ಕುಸಿತ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ದೇಶ

ಇರಾನ್ : ಅಂತರರಾಷ್ಟ್ರೀಯ ನಿರ್ಬಂಧಗಳು ಮತ್ತು ತೀವ್ರ ಹಣದುಬ್ಬರದಿಂದಾಗಿ ಇರಾನ್‌ನ ಕರೆನ್ಸಿ 'ರಿಯಾಲ್' ಮೌಲ್ಯ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ದೇಶದಲ್ಲಿ ಭಾರಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಜಾಗತಿಕ ರಾಜಕೀಯ ಒತ್ತಡ ಹಾಗೂ ಅಮೆರಿಕದ ಸಾಲು ಸಾಲು ಆರ್ಥಿಕ ನಿರ್ಬಂಧಗಳಿಂದಾಗಿ ರಿಯಾಲ್ ಮೌಲ್ಯ ಸಂಪೂರ್ಣವಾಗಿ ಕುಸಿದಿದೆ. ಪ್ರಸ್ತುತ ಒಂದು ಯುಎಸ್ ಡಾಲರ್ ಮೌಲ್ಯ 2.02 ಮಿಲಿಯನ್ ರಿಯಾಲ್‌ಗೆ ಕುಸಿದಿದ್ದು, ಭಾರತದ 100 ರೂಪಾಯಿಗೆ ಸುಮಾರು 20 ಲಕ್ಷ ರಿಯಾಲ್ ಲಭ್ಯವಾಗುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಕರೆನ್ಸಿ ಮೌಲ್ಯ ಕುಸಿತದಿಂದಾಗಿ ದಿನಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಇರಾನ್‌ನಲ್ಲಿ ಸಾರ್ವಜನಿಕರು ದಿನಸಿ ಮತ್ತು ಆಹಾರ ಸಾಮಗ್ರಿಗಳನ್ನು ಕೊಳ್ಳಲು ಪರದಾಡುತ್ತಿದ್ದಾರೆ. ಪ್ರಸ್ತುತ 20 ಲಕ್ಷ ರಿಯಾಲ್ ನೀಡಿದರೂ 2 ಕಿಲೋ ಟೊಮ್ಯಾಟೋ ಕೂಡ ಸಿಗುತ್ತಿಲ್ಲ. ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಲು ಸಹ ನಾಗರಿಕರು ದೊಡ್ಡ ಪ್ರಮಾಣದ ಕರೆನ್ಸಿ ನೋಟುಗಳ ಕಟ್ಟನ್ನು ಒಯ್ಯಬೇಕಾದ ಪರಿಸ್ಥಿತಿ ಬಂದೊದಗಿದೆ. ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಗಳು 2 ರಿಂದ 3 ಪಟ್ಟು ಏರಿಕೆಯಾಗಿದ್ದು, ವಿಶೇಷವಾಗಿ ಔಷಧಗಳಿಗೆ ವಿಪರೀತ ಅಭಾವ ಉಂಟಾಗಿದೆ.

ಒಂದು ಸಾವಿರ ಭಾರತೀಯ ರೂಪಾಯಿ ನೀಡಿ ಪಡೆಯುವ 2 ಕೋಟಿ ರಿಯಾಲ್ ಹಣವೂ ಸಹ ಅಲ್ಲಿ ಒಂದು ವಾರದ ವೆಚ್ಚಕ್ಕೆ ಸಾಕಾಗುತ್ತಿಲ್ಲ. ಈ ತೀವ್ರ ಪರಿಸ್ಥಿತಿಯನ್ನು ಸರಿದೂಗಿಸಲು ಸರ್ಕಾರವು ದೇಶದೊಳಗೆ ಕನಿಷ್ಠ ವೇತನವನ್ನು ತಿಂಗಳಿಗೆ 166 ಮಿಲಿಯನ್ ರಿಯಾಲ್‌ಗೆ ಹೆಚ್ಚಿಸಿದೆಯಾದರೂ, ವಿಪರೀತ ಬೆಲೆ ಏರಿಕೆಯ ಮುಂದೆ ಈ ಮೊತ್ತವೂ ಯಾತಕ್ಕೂ ಸಾಲದಂತಾಗಿದೆ. ಇರಾನ್‌ನ ವಿಕೋಪಕ್ಕೆ ತಲುಪಿರುವ ಆರ್ಥಿಕತೆಯು ಅಲ್ಲಿನ ಸಾಮಾನ್ಯ ನಾಗರಿಕರ ದೈನಂದಿನ ಜೀವನವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

Category
ಕರಾವಳಿ ತರಂಗಿಣಿ