ನಿನ್ನ ಅಮಲಿನಲಿ ಅಮರಿಕೊಂಡ ಆಸೆಗಳಿಗೆ ಏನು ಹೇಳಲಿ ಉತ್ತರ?
ನೀನು ಬರದೇ ಹತ್ತಿರ| ಖಾಯಂ ಆಗಿ ಕಾಯ್ದುಕೊಂಡರು ಅಂತರ|| ನಿನಗಾಗಿ ಹಾತೊರೆಯುವ ಆತುರ.!
ಹೀಗೇಕೆ ಈ ತರ ಎಂದು ಉತ್ತರ ಸಿಗಬಹುದು ನೀ ಸಿಕ್ಕಿದ ನಂತರ||
ನಿರ್ಬಂಧಗಳ ನಡುವೆಯೂ ನೀ ಪ್ರೇಮ ಪ್ರಬಂಧವಾದೆ ||ಸಂಬಂಧಗಳ ನಡುವೆ ನೀ ನನ್ನ ಆನಂದವಾದೆ
ಕಾಡುವ ಕನ್ನಿಕೆ ನೀನು ಕಾವ್ಯವಾದೆ|| ಪದೇ ಪದೇ ಮೂಡುವ ಬಿಂಬ ನಿನ್ನದೇ||
ಕನಸಲ್ಲಿಯೂ ನಿನ್ನದೇ ಕಾರುಬಾರು|| ಜನರಿದ್ದರೇನು ಸಾವಿರಾರು ನೀ ಜಾತ್ರೆ ನಡುವಿನ ತೇರು, ನೀನು ತುಂಬಾ ಹುಷಾರು,
ಸೂಚನೆ ಕೊಡುವುದೇ ಇಲ್ಲ ಒಂದು ಚೂರು ನಿನ್ನ ಕುಡಿ ನೋಟಗಳನ್ನೆಲ್ಲ ಕೂಡಿಟ್ಟು ಕೊಂಡಿದ್ದೇನೆ ನಿನ್ನದೇ ಕಿರುನಗೆಯ ಕಪಾಟಿನಲ್ಲಿ,
ಈ ಬೆಚ್ಚನೆ ಭಾವನೆಗಳು ಮುಗಿಲೇಳುವ ಮುನ್ನ. ಇನ್ನೆಷ್ಟು ದಿನ ಆರಗಿಸಿಕೊಳ್ಳಲಿ ಆಸೆಗಳ ಆಶಯ| ತೆಗೆದುಕೊಂಡು ನಿರ್ಣಯ||
ಮಾಡಿಕೊಳ್ಳಲೇ ನಿವೇದನೆ? ಸಿಗಬಹುದಾ ನಿನ್ನಿಂದ ಅನುಮೋದನೆ?!!
✍ ಶಿವರಾಜ್ ಗುಬ್ಬಿ.