image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅಗಲಿದ ಗಣ್ಯರ ಸೇವೆ ಅತ್ಯಂತ ಸ್ಮರಣೀಯ: ವಿಧಾನ ಪರಿಷತ್ತಿನಲ್ಲಿ ಡಾ. ಸಿ.ಟಿ. ರವಿ ಭಾವಪೂರ್ಣ ಸಂತಾಪ

ಅಗಲಿದ ಗಣ್ಯರ ಸೇವೆ ಅತ್ಯಂತ ಸ್ಮರಣೀಯ: ವಿಧಾನ ಪರಿಷತ್ತಿನಲ್ಲಿ ಡಾ. ಸಿ.ಟಿ. ರವಿ ಭಾವಪೂರ್ಣ ಸಂತಾಪ

ಬೆಂಗಳೂರು: ಇತ್ತೀಚೆಗೆ ನಿಧನರಾದ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಜನಸೇವಕರಿಗೆ ವಿಧಾನ ಪರಿಷತ್ತಿನಲ್ಲಿ ಮಂಡಿಸಲಾದ ಸಂತಾಪ ಸೂಚಕ ನಿರ್ಣಯಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಅವರು ಸಹಮತ ವ್ಯಕ್ತಪಡಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ರಾಜಕೀಯ, ಸಾಮಾಜಿಕ, ಸಾಹಿತ್ಯ, ಸಂಗೀತ, ತಂತ್ರಜ್ಞಾನ ಹಾಗೂ ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ರಂಗಗಳಿಗೆ ಅಗಲಿದ ನಾಯಕರು ನೀಡಿದ ಕೊಡುಗೆಯನ್ನು ಅವರು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸಿದರು.

ಸಂತಾಪ ಸೂಚಕ ನಿರ್ಣಯದ ವೇಳೆ ಮಾತನಾಡಿದ ಸಿ.ಟಿ. ರವಿ ಅವರು, "ಹುಟ್ಟಿದವರಿಗೆ ಸಾವು ನಿಶ್ಚಿತ, ಹುಟ್ಟದವರಿಗೆ ಮಾತ್ರ ಸಾವು ಇಲ್ಲ" ಎಂಬ ತತ್ವವನ್ನು ಪ್ರಸ್ತಾಪಿಸಿ, ಸಾವು ಪ್ರತಿಯೊಬ್ಬರಿಗೂ ಬರುವ ಸಾರ್ವತ್ರಿಕ ಸತ್ಯ ಎಂದರು. ಹಿರಿಯ ರಾಜಕಾರಣಿ ರಾಮಚಂದ್ರ ಗೌಡರ ಜೊತೆಗಿನ ಒಡನಾಟ ಹಾಗೂ ಅವರ ನೇರ ನುಡಿ, ಕಠೋರ ನಿಲುವು ಮತ್ತು ಅಪಾರ ರಾಜಕೀಯ ಅನುಭವವನ್ನು ನೆನಪಿಸಿಕೊಂಡರು. ಅಂತೆಯೇ, ಸಣ್ಣ ಸಮುದಾಯದಿಂದ ಬಂದು ಪ್ರಭಾವಿ ನಾಯಕರಾಗಿ ಬೆಳೆದ ಮಾಜಿ ಸಚಿವ ಡಿ. ಸುಧಾಕರ್, ಸರಳ ವ್ಯಕ್ತಿತ್ವದ ವೆಂಕಟರಮಣಪ್ಪ, ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶ್ರಮಿಸಿದ ಸಿ. ವೀರಣ್ಣ ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಎಚ್. ಹನುಮಂತಪ್ಪ ಅವರ ಕೊಡುಗೆಗಳನ್ನು ಸ್ಮರಿಸಿದರು.

ಇದರೊಂದಿಗೆ, ಅಪ್ಪಟ ರಾಷ್ಟ್ರಪ್ರೇಮಿ ಸಾಹಿತಿ ಡಾ. ಎಸ್.ಆರ್. ರಾಮಸ್ವಾಮಿ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಗೈದ ಗಾಯಕಿಯರಾದ ಆಶಾ ಭೋಸ್ಲೆ ಮತ್ತು ಎಸ್. ಜಾನಕಿ, ಮೀನುಗಾರರ ಹಕ್ಕುಗಳಿಗಾಗಿ ಹೋರಾಡಿದ ರಾಮಚಂದ್ರ ಬೈಕಂಪಾಡಿ ಹಾಗೂ ತೂಗು ಸೇತುವೆಗಳ ನಿರ್ಮಾಣಕ್ಕೆ ಹೆಸರುವಾಸಿಯಾದ 'ಸೇತುವೆಗಳ ಸರ್ದಾರ' ಡಾ. ಗಿರೀಶ್ ಭಾರದ್ವಾಜ್ ಅವರ ಸೇವೆಯನ್ನು ಕೊಂಡಾಡಿದರು. ಸಿ.ಎನ್. ಮುಕ್ತಾ ಮತ್ತು ಪ್ರೊ. ಎ.ವಿ. ನರಸಿಂಹಮೂರ್ತಿ ಅವರ ಕೊಡುಗೆಯನ್ನೂ ನೆನಪಿಸಿಕೊಂಡ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಸರಳತೆ ಹಾಗೂ ರಾಜಕೀಯ ಮತ್ತು ಕುಟುಂಬ ಜೀವನಕ್ಕೆ ಅವರು ನೀಡಿದ ಬೆಂಬಲವೇ ಯಶಸ್ವಿ ಪುರುಷನ ಹಿನ್ನೆಲೆಯ ಶಕ್ತಿಗೆ ಸಾಕ್ಷಿ ಎಂದು ಬಣ್ಣಿಸಿದರು.

Category
ಕರಾವಳಿ ತರಂಗಿಣಿ